ಥಿಂಕ್ ರೈಟ್ | Think Right

ನಮ್ಮ ಬದುಕಿನುದ್ದಕ್ಕೂ ನಾವು ಸಾಗುವ ಹಾದಿಯಲ್ಲಿ ಸಿಗುವ ವ್ಯಕ್ತಿಗಳು, ನೋಡುವ ಸ್ಥಳಗಳು , ಮತ್ತು ಆಗುವ ಅನುಭವಗಳು ವಿವಿಧ ರೀತಿಯಲ್ಲಿ ನಮಗೆ ಜೀವನದ ಪಾಠ ಕಲಿಸುತ್ತವೆ. ಆ ಪಾಠಗಳು ನಮಗೆ ಸರಿಯಾದ ಸಮಯದಲ್ಲಿ ಸರಿಯಾದ ಆಲೋಚನೆ ಮಾಡುವ ಶಕ್ತಿ ಕೊಡುತ್ತದೆ. ಈ ಶಕ್ತಿ ನಮ್ಮ ಬದುಕಿನ ಎಲ್ಲ ಪ್ರಮುಖ ಘಟ್ಟಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ತುಂಬುತ್ತದೆ.

…..ಶ್ರೀ

ಹೊಸ ಬರಹಗಳು 

ಒಂದರೊಳಗೊಂದು…

ಛಾಯಾಚಿತ್ರಣ :  ಅಂಕಿತ  ಬರಹ :  ಶ್ರೀನಾಥ್ ಹರದೂರ ಚಿದಂಬರ  ಒಂದರೊಳಗೊಂದು ಹುದುಗಿದೆ ಮನಸ್ಸಿನಲ್ಲಿ  ನೂರಾರು ನೆನಪುಗಳು   ನವಿಲ ಗರಿಯಂತೆ ಬಿಚ್ಚಿ ಕುಣಿಯುತ್ತಿದೆ ಮನಸ್ಸಿನಲ್ಲಿ  ಸಾವಿರ ಕನಸುಗಳು  ಯಾವುದನ್ನೂ ಹಿಡಿದಿಡಲಿ ಮೇಲೆ  ಬರುತ್ತಿವೆ ಒಂದರ ಮೇಲೊಂದು  ತಡೆಯಲು ಮನಸ್ಸಿಲ್ಲ  ಸುಮದುರ ಪ್ರತಿಯೊಂದು  ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದೆ ಇವುಗಳಿಂದು  ಬತ್ತದಿರಲಿ ಹುಟ್ಟುತ್ತಿರಲಿ ಹೊಸ ಹೊಸ ಕನಸುಗಳು  ಹೀಗೆ ಸಾಗಲಿ ಪ್ರತಿಯೊಂದು ಕ್ಷಣಗಳು 

ಮರೀಚಿಕೆ…

ಛಾಯಾಚಿತ್ರಣ : ಪ್ರಜ್ಞಾ  ಬರಹಗಾರರು : ಶ್ರೀನಾಥ್ ಹರದೂರ ಚಿದಂಬರ    ಮರೀಚಿಕೆ ಕನಸುಗಳ ಬೆನ್ನೇರಿ ಹೊರಟ ಮನಸ್ಸಿಗೆ ಅಂಜಿಕೆಯಾಕೆ  ದೃಢ ಸಂಕಲ್ಪದಲ್ಲಿ    ಹೆಜ್ಜೆಗಳನ್ನಿಟ್ಟ  ಮೇಲೆ ಹಿಂಜರಿಕೆಯಾಕೆ     ಗುರಿ ಮುಟ್ಟುವ ತನಕ  ಕುಗ್ಗದಿರಲಿ  ನಿನ್ನ ಅಚಲ ನಂಬಿಕೆ   ಗೆಲುವಿನ ಬಗ್ಗೆ ಮೂಡದಿರಲಿ ಯಾವುದೇ ಶಂಕೆ  ಸೋಲು ಗೆಲುವು  ಶಾಶ್ವತವಲ್ಲ, ಸಿಕ್ಕರೂ ಸಿಗದ ಮರೀಚಿಕೆ.  

ಶ್ರೀ ಕೃಷ್ಣನಿಗೆ ಪಾಂಚಜನ್ಯ ಹೇಗೆ ಸಿಕ್ಕಿತು? ಅದರ ಹಿಂದಿನ ಕಥೆ ಗೊತ್ತ ?

ಬರಹಗಾರರು : ಶ್ರೀನಾಥ್ ಹರದೂರ ಚಿದಂಬರ              ಮೂಲ : ಮಹಾಭಾರತ  ಶ್ರೀ ಕೃಷ್ಣನು ಕೃಷ್ಣ ಪಕ್ಷದ ಶ್ರಾವಣ ( ಬಾದ್ರಪದ) ಮಾಸದ  ೮ ನೇ( ಅಷ್ಟಮಿ) ದಿನ  ರೋಹಿಣಿ ನಕ್ಷತ್ರದಲ್ಲಿ    ದೇವಕಿ ಮತ್ತು ವಸುದೇವನ ಪುತ್ರನಾಗಿ ಜನ್ಮ ತಾಳುತ್ತಾನೆ. ಅವನು ಹುಟ್ಟಿದ ಆ  ದಿವಸದಂದು ನಾವು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತೇವೆ.  ಶ್ರೀ ಕೃಷ್ಣನ  ಮಾವ ಕಂಸನ ಮರಣಕ್ಕೆ ಆತನ ತಂಗಿ ದೇವಕಿ ಮತ್ತು ವಸುದೇವನಿಗೆ ಹುಟ್ಟುವ ೮ ನೇ ಮಗು ಕಾರಣವಾಗುತ್ತದೆ ಎಂದು … Continue reading ಶ್ರೀ ಕೃಷ್ಣನಿಗೆ ಪಾಂಚಜನ್ಯ ಹೇಗೆ ಸಿಕ್ಕಿತು? ಅದರ ಹಿಂದಿನ ಕಥೆ ಗೊತ್ತ ?

ಮದಿರೆಯ ಮತ್ತಿನಲ್ಲಿ…….. ಮತ್ತಿನ ಮಾತುಗಳು..

ಬರಹಗಾರರು :  ಶ್ರೀನಾಥ್ ಹರದೂರ ಚಿದಂಬರ  ವಿಷಯ ಸೂಚನೆ:  ಕಡ್ಡಾಯವಾಗಿ  ಮದ್ಯಪಾನ ಮಾಡುವವರಿಗೆ ಮಾತ್ರ ಸಂಬಂಧಪಟ್ಟಿರುತ್ತದೆ.  ಆರೋಗ್ಯ ಸಂಬಂಧ ಪಟ್ಟ ಸೂಚನೆ:  ಮದ್ಯಪಾನ  ಆರೋಗ್ಯಕ್ಕೆ ಹಾನಿಕಾರಕ.  ವಾರಾಂತ್ಯದಲ್ಲಿ ಪಾರ್ಟಿಗೆ   ಸ್ನೇಹಿತರ  ದೊಡ್ಡ ಗುಂಪೇ ಸೇರಿತ್ತು.  ಮದ್ಯಪಾನ ಮಾಡುವವರು ಹಾಗು ಮಾಡದವರು ಎಲ್ಲರು ಸೇರಿದ್ದರು.  ಮದ್ಯಪಾನ ಮಾಡುವವರ ಗುಂಪಿನಲ್ಲಿ  ಆಗಲೇ ಒಂದು  ಸುತ್ತು ಮುಗಿದಿತ್ತು.  ವೈಯುಕ್ತಿಕ ಕುಶಲೋಪರಿ ಸುತ್ತು ಮುಗಿದು ಸಾಮಾಜಿಕ ಕಳಕಳಿಯ ವಿಷ್ಯ ಆರಂಭ ಆಗಿತ್ತು.  ಆಗ ಒಬ್ಬ ಮದ್ಯಪಾನ ಮಾಡದ ಸ್ನೇಹಿತರೊಬ್ಬರು    ಕುಡಿಯುವದರಿಂದ ದೇಶಕ್ಕೆ ಏನು ಉಪಯೋಗ ಇಲ್ಲ , ಏನಕ್ಕೆ ಕುಡಿತೀರೋ  ಅಂತ ಅಂದಿದ್ದಕ್ಕೆ ಇನ್ನೊಬ್ಬ ಮದ್ಯಪಾನ … Continue reading ಮದಿರೆಯ ಮತ್ತಿನಲ್ಲಿ…….. ಮತ್ತಿನ ಮಾತುಗಳು..

ಹೀಗೊಂದು ರಸ ಸಂಜೆ ಕಾರ್ಯಕ್ರಮ……

ಬರಹಗಾರರು : ಶ್ರೀನಾಥ್ ಹರದೂರ ಚಿದಂಬರ  ಒಲೆಯ  ಮೇಲಿಟ್ಟಿರುವ  ಬಾಂಡಲಿಯಲ್ಲಿ   ಮಾಡಿತು   ಎಣ್ಣೆ   ಚಟಪಟ ಸ್ವರ    ಬಾಂಡಲಿಯ ಕೆಳಗಡೆ ,  ಒಲೆಯಲ್ಲಿ  ನಡೆಯುತು   ಬೆಂಕಿಯ  ಸುಂದರ ನರ್ತನ ಎಣ್ಣೆಯೊಳಗೆ ಬೋಂಡಾ ಬಿಡುತ್ತಿದ್ದ ಅಮ್ಮನ ಕೈಗಳ ಬಳೆಗಳು ಹೊರಡಿಸಿತು   ನಾದ  ಎಣ್ಣೆಯಲ್ಲಿ  ಬೋಂಡಾ ಮುಳುಗಿ ಎದ್ದು ನೊರೆಯಾ ನಡುವೆ  ಕುಣಿದು ಹಾಕಿತು   ತಾಳ ಬೆಂದಿದೆಯಾ ಎಂದು ಜಾರದಲ್ಲಿ  ಎತ್ತಿ ನೋಡಿದಾಗ ಕೆಳಗೆ ಬೀಳುತ್ತಾ ಎಣ್ಣೆ   ಚರ್ ಎಂದು ಮಾಡಿತು  ಆಲಾಪನೆ  ಬೋಂಡದ ಸುವಾಸನೆ ಪಕ್ಕದ ಮನೆಗೆ ತಲುಪಿ ಅವರು ” ಹೂಂ” … Continue reading ಹೀಗೊಂದು ರಸ ಸಂಜೆ ಕಾರ್ಯಕ್ರಮ……

ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 – ಅನುಕೂಲಗಳೇನು ? ಸವಾಲುಗಳೇನು ?

ನಮ್ಮ ದೇಶದ ಬಹುತೇಕ ಸಮಸ್ಯೆಗಳ ಬಗ್ಗೆ ಚರ್ಚೆ ಶುರುವಾದರೆ, ಎಲ್ಲ ಸಮಸ್ಯೆಗಳಿಗೆ  ಮೂಲ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪದೋಷಗಳೇ ಕಾರಣ ಎಂದು ಕೊನೆಯಾಗುತ್ತದೆ.  ವಿಪರ್ಯಾಸ ಅಂದರೆ ನಮ್ಮ ದೇಶದ ಪುರಾತನ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿ ಬ್ರಿಟಿಷರು ತಮ್ಮಲ್ಲಿ ಅದೇ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದು. ಭಾರತದಲ್ಲಿ ಮಕ್ಕಳು ಜಾಸ್ತಿ ಅಂಕ  ಪಡೆಯುವದಕ್ಕಿಂತ ಜಾಸ್ತಿ  ಜ್ಞಾನ ಪಡೆಯಬೇಕು ಎಂಬ ಮೂಲ ಉದ್ದೇಶವನ್ನಿಟ್ಟುಕೊಂಡು,  ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಯತ್ನ ಪಡುತ್ತಿರುವುದು  ಸಂತಸದ  ವಿಚಾರ.  ಇದನ್ನು ಕೂಡ ವಿರೋಧ ಮಾಡುತ್ತಿರುವದನ್ನು ನೋಡಿದರೆ,  ಶಿಕ್ಷಣದಿಂದ ಜನರಲ್ಲಿ ವಿಚಾರತೆ ಬೆಳೆದರೆ ಅವರ ಬೇಳೆ ಮುಂದೆ … Continue reading ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 – ಅನುಕೂಲಗಳೇನು ? ಸವಾಲುಗಳೇನು ?