ನೋಡಿ ಸ್ವಾಮಿ, ನಾವ್ ಅಂತಿರೋದು ಹೀಗೆ

ಈಗಿನ ಶಾಲಾ ಶಿಕ್ಷಣ ಸರಿ ಇಲ್ಲಾರಿ ಎಲ್ಲ ಖಾಸಗಿಯವರದೇ ದರಬಾರು  ಅಂತೀವಿ – ಖಾಸಗಿ   ಶಾಲೆಗೆ ಮಕ್ಕಳನ್ನ  ಸೇರಿಸ್ತೀವಿ.

ಮಕ್ಕಳು ಅವರಾಗಿ ಬೆಳೀಬೇಕು ಅಂತೀವಿ –  ಜಾಸ್ತಿ ಅಂಕಗಳು  ತರಬೇಕು, ಇಂಜಿನಿಯರಿಂಗ್, ಡಾಕ್ಟರ ಆಗ್ಬೇಕು   ಅಂತ ಮಕ್ಕಳಿಗೆ ತಾಕೀತು ಮಾಡ್ತೀವಿ.

ಆರೋಗ್ಯ ತುಂಬಾ ಮುಖ್ಯ ಅಂತೀವಿ – ಸಂಜೆ ಜಂಕ್ ಫುಡ್ ತಿನ್ನುವುದಕ್ಕೆ  ಹೋಗ್ತಿವಿ.

ಕುಟುಂಬ  ಮುಖ್ಯ  ಕೆಲಸ ಅಲ್ಲ  ಅಂತೀವಿ –  ದಿನವಿಡೀ ಕೆಲಸದಲ್ಲಿ ಸಮಯ ಕಳೆದು  ಅವರನ್ನೇ ಮರೆತುಬಿಡ್ತಿವಿ.

ಭಾರತ ಸ್ವಚ್ಛ ಇಲ್ಲ ಅಂತೀವಿ – ನಾವೇ ಕಸನ ದಾರಿಯಲ್ಲಿ ಎಸೀತೀವಿ.

ಸಿಕ್ಕಾಪಟ್ಟೆ ಟ್ರಾಫಿಕ್ ಅಂತೀವಿ –  ನಾವೇ ಟ್ರಾಫಿಕ್ ರೂಲ್ಸ್   ಬ್ರೇಕ್ ಮಾಡ್ತೀವಿ.

ಎಲ್ಲಕಡೆ ಲಂಚ ತೆಗೊಳ್ತಾರೆ ಅಂತೀವಿ –  ನಮ್ಮ ಕೆಲಸ ಬೇಗ ಆಗ್ಲಿ ಅಂತ ನಾವೇ ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡು ಬರುತ್ತಿವಿ.

ರಾಜಕೀಯ ಸರಿ ಎಲ್ಲ ಅಂತೀವಿ – ಯಾವುದೇ ಒಂದು ಪಕ್ಷದ ಪರವಾಗಿ ನಿಂತುಬಿಡ್ತಿವಿ.

ಮತದಾರನೇ ಪ್ರಭು ಅಂತ ಅಂತೀವಿ –  ಐದು ವರ್ಷ ನಾವೇ  ಮತದಾರ ಅನ್ನುವುದು  ಮರೆತುಬಿಡ್ತಿವಿ.

ಯಾರು ಏನು ಮಾಡ್ತಾ ಇಲ್ಲ ಅಂತೀವಿ –  ಎಲ್ಲ ನಾವೇ ಮಾಡಿ  ದೇಶ ಸರಿಯಿಲ್ಲ , ಎಲ್ಲ ಹಾಳಾಗೋಯ್ತು ಅಂತೀವಿ.

ನೋಡಿ ಸ್ವಾಮಿ ನಾವ್ ಅಂತಿರೋದು   ಹೀಗೆ.

ಶ್ರೀ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s