ಶ್ರೀ ರಾಮಚಂದ್ರನು ತನ್ನ ಇಡೀ ಜೀವನದಲ್ಲಿ ನಡೆಯುವ ಪ್ರತಿಯೊಂದು ಕಷ್ಟದ ಸಂದರ್ಭದಲ್ಲಿ ಯಾವತ್ತೂ ಧರ್ಮದ ಗಡಿ ಮೀರದೆ, ಸತ್ಯಮಾರ್ಗವನ್ನು ಬಿಡದೆ, ಪರಿಸ್ಥಿಗಳನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕೋ ಅದೇ ರೀತಿಯಲ್ಲಿ ನಿಭಾಯಿಸಿ, ಮರ್ಯಾದ ಪುರುಷೋತ್ತಮನಾಗಿ ಬದುಕಿ ತೋರಿಸಿದನು. ಅವನ ಬದುಕನ್ನು ಅರ್ಥ ಮಾಡಿಕೊಂಡವರಿಗೆ ಮುಕ್ತಿಯ ಮಾರ್ಗ ಬಹಳ ಸುಲಭವಾಗಿ ಗೋಚರವಾಗುತ್ತದೆ.
ಶ್ರೀ ರಾಮಚಂದ್ರನು ರಾವಣನನ್ನು ಸಂಹಾರ ಮಾಡಿ ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಅಯೋಧ್ಯೆಗೆ ಬರುತ್ತಾನೆ. ಭರತನು ಶ್ರೀ ರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಿ ಅವನ ಸೇವೆಯಲ್ಲಿ ನಿರತನಾಗುತ್ತಾನೆ. ಜನರಿಂದ ತನ್ನ ಮೇಲೆ ಬರುವ ಆಪಾದನೆಗೆ ಶ್ರೀ ರಾಮಚಂದ್ರನು ರಾಜ ಧರ್ಮ ಪಾಲಿಸಲು ಗರ್ಭಿಣಿಯಾದ ಸೀತೆಯನ್ನು ವಾಲ್ಮೀಕಿ ಆಶ್ರಮಕ್ಕೆ ಲಕ್ಷ್ಮಣನ ಜೊತೆಯಲ್ಲಿ ಕಳುಹಿಸುತ್ತಾನೆ. ಲಕ್ಷ್ಮಣ ಸೀತೆಯನ್ನು ವಾಲ್ಮೀಕಿಯ ಆಶ್ರಮದಲ್ಲಿ ಬಿಟ್ಟು ಬರುತ್ತಾನೆ. ಅಲ್ಲಿಯೇ ಸೀತಾ ದೇವಿಯು ಲವ ಮತ್ತು ಕುಶರಿಗೆ ಜನ್ಮ ನೀಡುತ್ತಾಳೆ. ಅನೇಕ ವರ್ಷಗಳ ನಂತರ ಲವ ಕುಶರು ತನ್ನ ತಂದೆ ಶ್ರೀ ರಾಮಚಂದ್ರ ರಾಜಸೂಯ ಯಜ್ಞ ಮಾಡುವಾಗ ದೇಶ ವಿಸ್ತರಣೆಗೋಸ್ಕರ ಬಿಡುವ ಕುದುರೆಯನ್ನು ಕಟ್ಟಿ ಹಾಕಿ ತನ್ನ ತಂದೆ ಎಂದು ಗೊತ್ತಿಲ್ಲದೇ ಅವನ ಜೊತೆಯಲ್ಲೇ ಯುದ್ಧ ಮಾಡಿ ಗೆಲ್ಲುತ್ತಾರೆ. ನಂತರ ಅವರು ತನ್ನ ಮಕ್ಕಳೆಂದೇ ಗೊತ್ತಾಗಿ ಶ್ರೀ ರಾಮಚಂದ್ರ ಅತೀವ ಸಂತೋಷ ಪಡುತ್ತಾನೆ. ಸೀತೆಯು ಅಗ್ನಿ ಪ್ರವೇಶ ಮಾಡಿದ ನಂತರ ಮಕ್ಕಳನ್ನು ಕರೆದುಕೊಂಡು ತನ್ನ ರಾಜ್ಯಕ್ಕೆ ತಿರುಗಿ ಬಂದು ಮಕ್ಕಳ ಜೊತೆಯಲ್ಲಿ ರಾಜ್ಯ ಭಾರ ಮುಂದುವರೆಸುತ್ತಾನೆ.
ಪದ್ಮ ಪುರಾಣ ಪ್ರಕಾರ ಶ್ರೀ ರಾಮಚಂದ್ರನು ೧೧೦೦೦ ವರ್ಷಗಳ ಕಾಲ ರಾಜ್ಯಭಾರ ನಡೆಸುತ್ತಾನೆ. ವಿಷ್ಣುವಿನ ಅವತಾರವಾದ ಶ್ರೀ ರಾಮಚಂದ್ರನು ಧರ್ಮ ಸಂಸ್ಥಾಪನೆ ಮತ್ತು ತನ್ನ ರಾಜ್ಯದ ಪ್ರಜೆಗಳ ಸುಖ ನೆಮ್ಮದಿಗೋಸ್ಕರ ಕೆಲಸ ಮಾಡುತ್ತಾ , ಹನುಮಂತ ಮತ್ತು ಸುಗ್ರೀವನ ಸ್ನೇಹ ಸುಳಿಯಲ್ಲಿ ಸಿಕ್ಕು, ಮಕ್ಕಳ ಮೇಲಿನ ಪ್ರೀತಿ ಮತ್ತು ಮಮತೆಯಲ್ಲಿ ಬಂದಿಯಾಗಿ, ತಾನೇ ಸೃಷ್ಟಿಸಿದ ಮಾಯೆಯಲ್ಲಿ ಎಷ್ಟು ಮುಳುಗಿ ಹೋಗುತ್ತಾನೆಂದರೆ, ಶ್ರೀ ರಾಮಚಂದ್ರನ ಅವತಾರವನ್ನು ಮುಗಿಸಿ, ಭೂಲೋಕ ಬಿಟ್ಟು ಹೊರಡುವುದನ್ನು ಮರೆತು ಬಿಡುತ್ತಾನೆ.
ಹೀಗಿರುವಾಗ ಒಂದು ದಿವಸ ಶ್ರೀ ರಾಮಚಂದ್ರನು ಆಸ್ಥಾನಕ್ಕೆ ಋಷಿ ಮುನಿ ಒಬ್ಬರು ಬರುತ್ತಾರೆ. ಶ್ರೀ ರಾಮಚಂದ್ರನು ಋಷಿ ಮುನಿಗೆ ನಮಸ್ಕರಿಸಿ ತನ್ನಿಂದ ಏನು ಸೇವೆ ಆಗಬೇಕು ಎಂದು ಕೇಳುತ್ತಾನೆ. ಆಗ ಋಷಿ ಮುನಿಯು ನಿನ್ನ ಹತ್ತಿರ ನಾನು ಏಕಾಂತವಾಗಿ ಸ್ವಲ್ಪ ಸಮಯ ಮಾತಾಡಬೇಕು ಮತ್ತು ನಾವು ಮಾತನಾಡುವಾಗ ಏಕಾಂತಕ್ಕೆ ಯಾರು ಭಂಗ ತರಕೂಡದು ಎಂದು ಷರತ್ತು ವಿಧಿಸುತ್ತಾನೆ. ಶ್ರೀ ರಾಮಚಂದ್ರನು ಅದಕ್ಕೆ ಒಪ್ಪಿಕೊಂಡು ಲಕ್ಷ್ಮಣನಿಗೆ ಯಾರೇ ಆದರೂ ನಾವಿಬ್ಬರು ಒಳಗಡೆ ಮಾತನಾಡುವಾಗ ಅದಕ್ಕೆ ಭಂಗ ತರುತ್ತಾರೋ ಅವರಿಗೆ ಮರಣದಂಡನೆ ಕೊಡಬೇಕು ಎಂದು ಹೇಳಿ ಋಷಿ ಮುನಿಯೊಂದಿಗೆ ಏಕಾಂತ ಕೋಣೆಯೊಳೆಗೆ ಹೋಗುತ್ತಾನೆ. ಲಕ್ಷ್ಮಣ ಕೊಣೆಯ ಹೊರಗಡೆ ಅವರಿಬ್ಬರ ಮಾತುಕತೆಗೆ ಯಾರು ಭಂಗ ತರದಂತೆ ನೋಡಿಕೊಳ್ಳಲು ನಿಲ್ಲುತ್ತಾನೆ.
ಕೋಣೆಯ ಒಳಗಡೆ ಶ್ರೀ ರಾಮಚಂದ್ರನು ಋಷಿ ಮುನಿಗೆ ವಿಷಯ ಏನೆಂದು ಕೇಳಿದಾಗ ಋಷಿ ಮುನಿಯು ತನ್ನ ನಿಜ ರೂಪವನ್ನು ತೋರಿಸುತ್ತಾನೆ. ಆತ ಬೇರೆ ಯಾರು ಆಗಿರದೆ ಸ್ವಯಂ ಕಾಲದೇವರಾಗಿರುತ್ತಾನೆ. ಬ್ರಹ್ಮನು ವಿಷ್ಣುವಿನ ಅವತಾರವಾದ ಶ್ರೀ ರಾಮಚಂದ್ರನ ಅಪ್ಪಣೆ ಇಲ್ಲದೆ ಅವನ ಜೀವವನ್ನು ತೆಗೆದುಕೊಂಡು ಬರುವ ಆಜ್ಞೆಯನ್ನು ಕಾಲ ದೇವನಿಗೆ ಕೊಡುವಂತಿರಲಿಲ್ಲ. ಹಾಗಾಗಿ ಬ್ರಹ್ಮನ ಆದೇಶದ ಮೇಲೆ ಕಾಲ ದೇವನು ಮುನಿ ವೇಷ ಧರಿಸಿ ಶ್ರೀ ರಾಮಚಂದ್ರನ ಬಳಿ ಬಂದಿರುತ್ತಾನೆ. ಕಾಲ ದೇವರು ಶ್ರೀ ರಾಮಚಂದ್ರನಿಗೆ ನೀನು ಭೂಲೋಕಕ್ಕೆ ಬಂದ ಕಾರ್ಯ ಸಂಪನ್ನವಾಗಿದೆ ಹಾಗು ನೀನು ಶ್ರೀ ರಾಮಚಂದ್ರನ ಅವತಾರವನ್ನು ಕೊನೆಗೊಳಿಸುವ ಸಮಯ ಸನ್ನಿಹಿತವಾಗಿದೆ ಎಂದು ನೆನಪಿಸುತ್ತಾನೆ. ಹೀಗೆ ಮಾತನಾಡುತ್ತಿರುವಾಗ ಹೊರಗಡೆ ದೂರ್ವಾಸ ಮುನಿಗಳು ಬಂದು ನಾನು ಶ್ರೀ ರಾಮಚಂದ್ರನನ್ನ ಈಗಲೇ ನೋಡಬೇಕು ಎಂದು ಹೇಳುತ್ತಾರೆ. ಲಕ್ಷ್ಮಣನು ದೂರ್ವಾಸ ಮುನಿಗಳಿಗೆ ಸ್ವಲ್ಪ ಸಮಯಯದಲ್ಲಿ ಶ್ರೀ ರಾಮಚಂದ್ರನು ನಿಮ್ಮನ್ನು ನೋಡುತ್ತಾರೆ ಎಂದು ಹೇಳಿದರೆ ಕೇಳದ ದೂರ್ವಾಸ ಮುನಿಗಳು ಕೋಪಗೊಂಡು ಶ್ರೀ ರಾಮಚಂದ್ರನಿಗೆ ಶಾಪ ಕೊಡುವೆ ಎಂದು ಹೇಳುತ್ತಾರೆ. ಅದಕ್ಕೆ ಲಕ್ಷ್ಮಣನು ಚಿಂತೆಗೆ ಒಳಗಾಗಿ ಶ್ರೀ ರಾಮಚಂದ್ರನ ಆಜ್ಞೆಯನ್ನು ಮೀರಿ ಒಳಗಡೆ ಬಂದು ಶ್ರೀ ರಾಮಚಂದ್ರ ಮತ್ತು ಕಾಲ ದೇವರ ಮಾತುಕತೆಗೆ ಭಂಗ ತರುತ್ತಾನೆ. ಶ್ರೀ ರಾಮಚಂದ್ರನು ತನ್ನ ಆಜ್ಞೆಯ ಅನುಸಾರ ಲಕ್ಷ್ಮಣನಿಗೆ ಮರಣದಂಡನೆ ನೀಡುವ ಪ್ರಸಂಗ ಎದುರಾಗುತ್ತದೆ. ಇದರಿಂದ ತುಂಬ ಚಿಂತಾಕ್ರಾಂತನಾದ ಶ್ರೀ ರಾಮಚಂದ್ರನಿಗೆ ಲಕ್ಷ್ಮಣನು ಸಮಾಧಾನ ಪಡಿಸಿ ಸರಯು ನದಿಯಲ್ಲಿ ಜೀವವನ್ನು ತ್ಯಾಗ ಮಾಡಿ ಆದಿಶೇಷನ ರೂಪದೊಂದಿಗೆ ಭೂಲೋಕವನ್ನು ತ್ಯಜಿಸುತ್ತಾನೆ. ಲಕ್ಶ್ಮಣನ ವಿಯೋಗದಿಂದ ಶ್ರೀ ರಾಮಚಂದ್ರನು ತಾನು ಈ ಜೀವನವನ್ನು ಅಂತ್ಯಗೊಳಿಸುವುದಾಗಿ ಹೇಳಿ ತನ್ನ ಮಕ್ಕಳಿಗೆ ರಾಜ್ಯಭಾರವನ್ನು ವಹಿಸಿ ಸರಯೂ ನದಿಯ ಹತ್ತಿರ ಬರುತ್ತಾನೆ. ಶ್ರೀ ರಾಮಚಂದ್ರನ ಜೊತೆಗೆ ಜೀವ ತ್ಯಾಗ ಮಾಡಲು ತಮ್ಮಂದಿರಾದ ಭರತ ಮತ್ತು ಶತ್ರುಘ್ನ , ಅವನ ಆತ್ಮೀಯ ಸ್ನೇಹಿತ ಸುಗ್ರೀವ, ಅವನ ಅಖಂಡ ಭಕ್ತರು ಮತ್ತು ವಾನರರು ಕೂಡ ಬರುತ್ತಾರೆ. ಇದನ್ನು ನೋಡಲು ಬ್ರಹ್ಮ, ಈಶ್ವರ, ಹನುಮಂತ, ಜಾಂಬವಂತ ಆದಿಯಾಗಿ ದೇವತೆಗಳು ಬಂದು ಸೇರುತ್ತಾರೆ. ಸರಯೂ ನದಿಯಲ್ಲಿ ಸುಗ್ರೀವ ಜೀವವನ್ನು ಅರ್ಪಿಸಿ ತನ್ನ ತಂದೆ ಸೂರ್ಯನ ರೂಪದೊಂದಿಗೆ ಅವನ ಲೋಕವನ್ನು ಸೇರುತ್ತಾನೆ. ಭರತ ಮತ್ತು ಶತ್ರುಜ್ಞ ಇಬ್ಬರು ವಿಷ್ಣುವಿನಲ್ಲಿ ಲೀನರಾಗುತ್ತಾರೆ. ಶ್ರೀ ರಾಮಚಂದ್ರನ ಅಖಂಡ ಭಕ್ತರು ಸರಯು ನದಿಯಲ್ಲಿ ತಮ್ಮ ಜೀವವನ್ನು ತ್ಯಾಗ ಮಾಡಿ ಸ್ವರ್ಗಕ್ಕಿಂತ ಮೇಲೆ ಮತ್ತು ಬ್ರಹ್ಮಲೋಕಕ್ಕೆ ಹತ್ತಿರ ಇರುವ ಸಂತಾನಕ್ ಲೋಕಕ್ಕೆ ಹೋಗುತ್ತಾರೆ. ಎಲ್ಲ ವಾನರರು ಯಾವ ಯಾವ ದೇವತೆಗಳಿಂದ ಉತ್ಪನವಾಗಿದ್ದರೋ ಅವರ ರೂಪವನ್ನು ಪಡೆದು ಸ್ವರ್ಗ ಲೋಕವನ್ನು ಸೇರುತ್ತಾರೆ.
ಬ್ರಹ್ಮನ ಅಪೇಕ್ಷೆಯಂತೆ ವಿಶ್ವರೂಪ ದರ್ಶನ ಮಾಡಿಸಿ ಶ್ರೀ ರಾಮಚಂದ್ರನ ಅವತಾರವನ್ನು ಕೊನೆಗೊಳಿಸಿ ತನ್ನ ವಾಹನವಾದ ಗರುಡನ ಮೇಲೆ ಕುಳಿತು ವಿಷ್ಣುವು ವೈಕುಂಠಕ್ಕೆ ತೆರಳುತ್ತಾನೆ.
ಹನುಮಂತನು ಶ್ರೀ ರಾಮಚಂದ್ರನ ಕಥೆಯನ್ನು ಯುಗ ಯುಗಗಳಿಗೂ ತಲುಪಿಸುತ್ತ ಭೂಲೋಕದಲ್ಲಿಯೇ ಉಳಿಯುತ್ತಾನೆ.
ಶ್ರೀ
ಥಿಂಕ್ ರೈಟ್
👍👍👍
LikeLike
Thank you 😊
LikeLike