
ಬರಹಗಾರರು : ಶ್ರೀನಾಥ್ ಹರದೂರ ಚಿದಂಬರ
ಒಲೆಯ ಮೇಲಿಟ್ಟಿರುವ ಬಾಂಡಲಿಯಲ್ಲಿ ಮಾಡಿತು ಎಣ್ಣೆ ಚಟಪಟ ಸ್ವರ
ಬಾಂಡಲಿಯ ಕೆಳಗಡೆ , ಒಲೆಯಲ್ಲಿ ನಡೆಯುತು ಬೆಂಕಿಯ ಸುಂದರ ನರ್ತನ
ಎಣ್ಣೆಯೊಳಗೆ ಬೋಂಡಾ ಬಿಡುತ್ತಿದ್ದ ಅಮ್ಮನ ಕೈಗಳ ಬಳೆಗಳು ಹೊರಡಿಸಿತು ನಾದ
ಎಣ್ಣೆಯಲ್ಲಿ ಬೋಂಡಾ ಮುಳುಗಿ ಎದ್ದು ನೊರೆಯಾ ನಡುವೆ ಕುಣಿದು ಹಾಕಿತು ತಾಳ
ಬೆಂದಿದೆಯಾ ಎಂದು ಜಾರದಲ್ಲಿ ಎತ್ತಿ ನೋಡಿದಾಗ ಕೆಳಗೆ ಬೀಳುತ್ತಾ ಎಣ್ಣೆ ಚರ್ ಎಂದು ಮಾಡಿತು ಆಲಾಪನೆ
ಬೋಂಡದ ಸುವಾಸನೆ ಪಕ್ಕದ ಮನೆಗೆ ತಲುಪಿ ಅವರು ” ಹೂಂ” ಎಂದು ಹಿಡಿದುಕೊಂಡರು ಶ್ರುತಿ
ಬಿಸಿ ಬಿಸಿ ಬೋಂಡ ಬಾಯಲ್ಲಿ ಇಟ್ಟು ರುಚಿ ನೋಡಿ “ಹಾಆಹ ” ಎಂದ ತೆಗೆದರು ರಾಗ
ನೋಡ ನೋಡುತ್ತಲೇ ತಿಂದು ಕಾಲಿ ಮಾಡಿ ” ವೋಕ್ ” ಎಂದು ತೇಗಿ ಮುಗಿಸಿದರು ಈ ” ರಸ ಸಂಜೆ”