ಛಾಯಾಚಿತ್ರಣ : ಅಂಕಿತ
ಬರಹ : ಶ್ರೀನಾಥ್ ಹರದೂರ ಚಿದಂಬರ

ಒಂದರೊಳಗೊಂದು ಹುದುಗಿದೆ ಮನಸ್ಸಿನಲ್ಲಿ ನೂರಾರು ನೆನಪುಗಳು
ನವಿಲ ಗರಿಯಂತೆ ಬಿಚ್ಚಿ ಕುಣಿಯುತ್ತಿದೆ ಮನಸ್ಸಿನಲ್ಲಿ ಸಾವಿರ ಕನಸುಗಳು
ಯಾವುದನ್ನೂ ಹಿಡಿದಿಡಲಿ ಮೇಲೆ ಬರುತ್ತಿವೆ ಒಂದರ ಮೇಲೊಂದು
ತಡೆಯಲು ಮನಸ್ಸಿಲ್ಲ ಸುಮದುರ ಪ್ರತಿಯೊಂದು
ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದೆ ಇವುಗಳಿಂದು
ಬತ್ತದಿರಲಿ ಹುಟ್ಟುತ್ತಿರಲಿ ಹೊಸ ಹೊಸ ಕನಸುಗಳು
ಹೀಗೆ ಸಾಗಲಿ ಪ್ರತಿಯೊಂದು ಕ್ಷಣಗಳು
Wow.. Wow… 👌👌ಬರುವ ಕನಸುಗಳೆಲ್ಲ ನನಸಾಗಲಿ 😍
LikeLike
Thank you so much 😊
LikeLike