ಛಾಯಾಚಿತ್ರಣ : ಪ್ರತಿಮಾ
ಬರಹ: ಶ್ರೀನಾಥ್ ಹರದೂರ ಚಿದಂಬರ

ದಿನದ ಪಯಣ ಮುಗಿಸಿ ಪಿಸುಗುಟ್ಟಿದ
ಪ್ರಕೃತಿಗೆ, ಆ ರವಿ
ಮನಸೋತು ನಿನ್ನ ಸೌಂದರ್ಯಕ್ಕೆ
ನಾನಾದೆ , ಇಂದು ಕವಿ
ಪಯಣ ಮುಗಿಸುವ ಮುನ್ನ
ನಿನಗೆ ನನ್ನ ಕೊನೆಯ ಬೆಳಕಿನ ಚುಂಬಕ
ಹೋಗಬೇಕಾಗಿದೆ, ಈ ಅಗಲಿಕೆ
ನಾಳೆ ಬೆಳಗಾಗುವ ತನಕ
ನಿನ್ನ ನೆನಪಿನಲ್ಲಿಯೇ ನಾ ಇರುತ್ತೇನೆ
ಅಲ್ಲಿಯ ತನಕ
ಅಳಿಯುವುದಿಲ್ಲ, ನಮ್ಮಬ್ಬಿರ ಪ್ರೀತಿ
ಪ್ರಪಂಚ ಇರುವ ತನಕ
ಕಾಯುವೆಯಲ್ಲ, ನಾನು ನಾಳೆ
ಮತ್ತೆ ಹುಟ್ಟಿ ಬರುವ ತನಕ.
ಹೇ ಪ್ರಕೃತಿ, ಈಗ ನಾ ಹೋಗಿ ಬರಲೇ ….
ಸೂರ್ಯ ಕೇಳುವ ಪ್ರಶ್ನೆ…… ಈಗ
ನಾ ಹೋಗಿ ಬರಲೇ….. ನನಗೆ ತುಂಬಾ ಇಷ್ಟವಾಯ್ತು
LikeLike
ತುಂಬ ಧನ್ಯವಾದಗಳು…
LikeLike
👌👌
LikeLike
Thank you Renuka 😊
LikeLike