ಛಾಯಾಚಿತ್ರ : ಅಂಕಿತ
ಬರಹ : ಶ್ರೀನಾಥ್ ಹರದೂರ ಚಿದಂಬರ

ಸುತ್ತುವ ಕನಸಿರಲಿ
ಇಡೀ ಜಗವ, ಅಲೆಮಾರಿಯ ತರಹ
ಪಯಣ ಸಾಗುತ್ತಿರಲಿ
ಭೂಮಿ ಸೂರ್ಯನ ಸುತ್ತುವ ತರಹ
ಅನುಭವ ಸಿಗುತ್ತಿರಲಿ
ಒಂದರ ಹಿಂದೆ ಒಂದು ಉಗಿ ಬಂಡಿಯ ಬೋಗಿಗಳ ತರಹ
ನಿನಗೆ ನೆನಪಿರಲಿ
ಮುಗಿಯುವುದು ಜೀವನ ಮೇಣದ ದೀಪದ ತರಹ
ಹೀಗೆ ಸಾಗುತ್ತಿರಲಿ
ನಿರಂತರ ಪಯಣ ಗಡಿಯಾರದ ಮುಳ್ಳಿನ ತರಹ