ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ
ಬರೆಹ : ಶ್ರೀನಾಥ್ ಹರದೂರ ಚಿದಂಬರ
ಹನಿ ಕೊಂಬೆಗೆ ಹೇಳಿತು…..
ಇಂದು ಬಿಟ್ಟು ಬಿಡು ಮತ್ತೆ ಬರುವೆ
ಕೆಳಗಿಳಿಯಲು ತುದಿಗಾಲಲ್ಲಿ ನಿಂತಿರುವೆ
ಬಿಡಲಾರೆನೆಂದು ಏಕೆ ತಡೆದಿರುವೆ
ನೀನೆಷ್ಟೇ ತಡೆದರು ನಾ ಜಾರುವುದು ಖಚಿತವೇ
ನಾ ಧರತಿಗೆ ಸೇರಲು ಹೊರಟಿರುವೆ
ಈ ಹುಸಿ ಕೋಪ ಬಿಟ್ಟುಬಿಡು ಕೊಂಚವೇ
ಮೋಡದಿಂದ ಚಿಮ್ಮಿ ನಿನ್ನ ಸೇರಲು ಮತ್ತೆ ಬರುವೆ
ಈಗ ಹೋಗಲು ಅನುಮತಿ ಕೋರುತ್ತಿರುವೆ
ಇಗೋ… ಹೊರಟೆ ನಾನು ಜಾರುತ್ತಿರುವೆ.
ಬಹಳ ಚೆನ್ನಾಗಿದೆ.ಇದೇ ಥೀಮ್ ಇರುವ ಕವನ ನಾನೂ ಬರೆದಿದ್ದೆ ಬಹಳ ಹಿಂದೆ ಸಂಪದ ಬ್ಲಾಗ್ ನಲ್ಲಿ..
LikeLike
ಧನ್ಯವಾದಗಳು… ಸಾಧ್ಯವಾದರೆ ದಯವಿಟ್ಟು ನೀವು ಬರೆದದ್ದನ್ನ ನನ್ನೊಂದಿಗೆ ಹಂಚಿಕೊಳ್ಳಿ.
LikeLiked by 1 person
ಧನ್ಯವಾದಗಳು ಸರ್.ನನ್ನ ಬ್ಲಾಗ್ನಲ್ಲಿ ಪೋಸ್ಟ್ ಮಾಡಿದ್ದೇನೆ.ದಯವಿಟ್ಟು ಓದಿ ಅಭಿಪ್ರಾಯ ತಿಳಿಸಿ🙂
LikeLike
ಅವಳ
ಒಲವು ಪ್ರೇಮಿಗೊಲಿದು
ಅಲ್ಲೇ ಪ್ರೇಮ
ಕಾವ್ಯ ಸೃಷ್ಟಿಯಾಯಿತು…. these last lines are wonderful… Thank you…
LikeLike
Thank you sir, I’m glad you like it..😊
LikeLike