
ಪ್ರತಿ ಎರಡು ದಿನಕ್ಕೊಮ್ಮೆ ವಯಸ್ಸಾದ ವ್ಯಕ್ತಿಯೊಬ್ಬರು ಬ್ಯಾಂಕಿಗೆ ತಪ್ಪದೆ ಬಂದು ಅವರ ಲಾಕರ್ ಚೆಕ್ ಮಾಡುತ್ತಿದ್ದರು. ಲಾಕರ್ ಓಪನ್ ಮಾಡಲು ೨ ಕೀಗಳಿದ್ದವು. ಒಂದು ಕೀ ಬ್ಯಾಂಕ್ನವರ ಹತ್ತಿರ ಇರುತ್ತಿತ್ತು , ಇನ್ನೊಂದು ಕೀ ಆ ವ್ಯಕ್ತಿಯ ಹತ್ತಿರ ಇರುತ್ತಿತ್ತು. ಕ್ಲರ್ಕ್ ಕೂಡ ಬೇಜಾರಿಲ್ಲದೆ ಅವರನ್ನು ಲಾಕರ್ ರೂಮ್ಗೆ ಕರೆದುಕೊಂಡು ಹೋಗಿ ಒಂದು ಕೀಯಿಂದ ಲಾಕರ್ ಓಪನ್ ಮಾಡಿಕೊಟ್ಟು ಹೊರಗಡೆ ಬರುತ್ತಿದ್ದರು. ೩ ನಿಮಿಷದಲ್ಲಿ ಆ ವ್ಯಕ್ತಿಯು ಕೂಡ ಲಾಕರ್ ಕ್ಲೋಸ್ ಮಾಡಿ ಹೊರಗಡೆ ಬರುತ್ತಿದ್ದರು. ಎಲ್ಲರಿಗು ಆ ವ್ಯಕ್ತಿ ಏನು ಚೆಕ್ ಮಾಡುತ್ತಾರೆ ಅನ್ನುವ ಕುತೂಹಲ ಇದ್ದರು ಯಾರು ಏನು ಅಂತ ಕೇಳಿರಲಿಲ್ಲ. ಕೆಲವು ತಿಂಗಳುಗಳ ಕಾಲ ಇದು ಮುಂದುವರೆಯಿತು. ನಂತರ ಇದ್ದಕ್ಕಿದ್ದಂತೆ ಅವರು ಬರುವುದು ನಿಂತು ಹೋಯಿತು. ೧೫ ದಿನಗಳ ನಂತರ ಒಬ್ಬರು ಬಂದು ಆ ವ್ಯಕ್ತಿ ಫೋಟೋ ತೋರಿಸಿ ಇವರು ನಮ್ಮ ತಂದೆ, ೧೫ ದಿನಗಳ ಹಿಂದೆ ದೈವಾಧೀನರಾದರು, ಅವರ ಲಾಕರ್ ಈ ಬ್ಯಾಂಕಿನಲ್ಲಿ ಇತ್ತು, ಅದರ ಡಾಕ್ಯುಮೆಂಟ್ ಇಲ್ಲಿದೆ ನೋಡಿ, ನಾವು ಲಾಕರ್ ಓಪನ್ ಮಾಡಬೇಕು ಅಂತ ಹೇಳಿದರು. ಮ್ಯಾನೇಜರ್ ಬ್ಯಾಂಕಿನ ಪ್ರೊಸೀಜರ್ ಎಲ್ಲ ಮುಗಿಸಿ ಲಾಕರ್ ಓಪನ್ ಮಾಡಲು ಒಪ್ಪಿಗೆ ಕೊಟ್ಟರು. ಬ್ಯಾಂಕಿನ ಎಲ್ಲ ಸಿಬ್ಬಂದಿಗೆ ಲಾಕರ್ನಲ್ಲಿ ಏನಿತ್ತು ಅಂತ ಬಹಳ ಕುತೂಹಲ ಇತ್ತು. ಅವರು ಎರಡು ದಿನಕ್ಕೊಮ್ಮೆ ಲಾಕರ್ ನೋಡಲು ಬರುತ್ತಿದ್ದರು ಅಂತ ಅವರ ಮಗನಿಗೆ ಹೇಳಿದಾಗ ಮಗನಿಗೂ ಕೂಡ ಆಶ್ಚರ್ಯವಾಯಿತು. ಎಲ್ಲರು ಕುತೂಹಲದಿಂದ ಲಾಕರ್ ಓಪನ್ ಮಾಡಿ ನೋಡಿದಾಗ ಬ್ಯಾಂಕಿನ ಸಿಬ್ಬಂದಿ ಹಾಗು ಮಗ ಕಕ್ಕಾಬಿಕ್ಕಿಯಾದರು. ಲಾಕರ್ನಲ್ಲಿ ಅರ್ಧ ಕೇಜಿ ಸ್ವೀಟ್ಸ್ ಇತ್ತು. ಅವರಿಗೆ ಶುಗರ್ ಇತ್ತು, ಮನೆಯಲ್ಲಿ ಸ್ವೀಟ್ ತಿನ್ನಲು ಬಿಡುತ್ತಿರಲಿಲ್ಲವಾದ್ದರಿಂದ ಅವರು ಬ್ಯಾಂಕಿಗೆ ಬಂದು ಲಾಕರ್ನಲ್ಲಿ ಇಟ್ಟುಕೊಂಡಿದ್ದ ಸ್ವೀಟ್ ತಿಂದು ಹೋಗುತ್ತಿದ್ದರು.
– ಶ್ರೀನಾಥ್ ಹರದೂರ ಚಿದಂಬರ
ಇದೂ ಒಂದು ಐಡಿಯಾ 👌👌😀
LikeLike
Amazing idea
LikeLike