ಸಣ್ಣ ಕಥೆ : ಶ್ರೀನಾಥ್ ಹರದೂರ ಚಿದಂಬರ
ಗುಮಾಸ್ತರಾಗಿ ಕೆಲಸ ಶುರು ಮಾಡಿದ ಅವರು, ಅದೇ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಬಡ್ತಿ ಹೊಂದಿದ್ದರು. ಇವತ್ತಿನವರೆಗೂ ಒಬ್ಬರ ಹತ್ತಿರವು ಲಂಚಕ್ಕಾಗಿ ಕೈ ಚಾಚಿರಲಿಲ್ಲ ಮತ್ತು ಲಂಚ ಕೊಡಲು ಬಿಡುತ್ತಿರಲಿಲ್ಲ. ಪ್ರಾಮಾಣಿಕತೆಯೇ ಜೀವನ ಎಂಬಂತೆ ಬದುಕಿದ್ದರು. ಅವರನ್ನು ಕಂಡರೆ ಊರಿನ ಜನ, ಪಕ್ಕದ ಹಳ್ಳಿಯ ಜನರು ಸಹ ಬಹಳ ಗೌರವ ಕೊಡುತ್ತಿ ದ್ದರು. ಅವರ ಪ್ರಾಮಾಣಿಕತೆ ಬಗ್ಗೆ ಪ್ರತಿಯೊಬ್ಬರು ಮೆಚ್ಚಿ ಹೊಗಳುತ್ತಿದ್ದರು. ಕೊನೆಗೆ 32ವರುಷ ಸೇವೆ ಸಲ್ಲಿಸಿ ನಿವೃತ್ತರಾದರು. ಒಂದು ವಾರ ಕಳೆದ ಮೇಲೆ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಿದರು. ತಿಂಗಳುಗಳು ಉರುಳಿದರು ಅವರ ಪಿಂಚಣಿ ಬರಲಿಲ್ಲ. ಮೇಲಾಧಿಕಾರಿಗೆ ಪತ್ರ ಬರೆದರೂ ಪಿಂಚಣಿ ಸಿಗಲಿಲ್ಲ . ಲಂಚ ಕೊಡದೆ ಪಿಂಚಣಿ ದೊರಕುವುದಿಲ್ಲ ಎಂಬ ಅರಿವಾಯಿತು. ಎರಡು ದಿನಗಳ ನಂತರ ಅವರು ದೈವಾಧೀನರಾಗಿದ್ದ ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಯಿತು. ಪ್ರಾಮಾಣಿಕತೆ ಸತ್ತು ಹೋಗಿತ್ತು.