ಛಾಯಾಚಿತ್ರಣ: ಅಂಕಿತ
ಕಥೆ: ಶ್ರೀನಾಥ್ ಹರದೂರ ಚಿದಂಬರ

ಸೂರ್ಯ ಮುಳುಗಿ ಕತ್ತಲು ಆವರಿಸುತ್ತಾ ಬಂದಿತ್ತು. ಒಬ್ಬಂಟಿ ಇರುವೆ ತನ್ನ ಗುಂಪಿನಿಂದ ಬೇರೆ ಆಗಿ ತನ್ನ ಗೂಡಿಗೆ ವಾಪಸು ಹೋಗಲು ಪರದಾಡುತಿತ್ತು. ಅದಕ್ಕೆ ಗೊತ್ತಿಲ್ಲದೇ ಒಂದು ಸಣ್ಣ ಮರವನ್ನು ಹತ್ತುತ್ತ ಹೋಗುತಿತ್ತು. ಮೇಲೆ ಹೋದ ಮೇಲೆ ಅದಕ್ಕೆ ದಾರಿ ಕಾಣದೆ ತಿರುಗಿ ಇಳಿಯಲು ಹೋದಾಗ ಆಯಾ ತಪ್ಪಿ ಕೆಳಗೆ ಬೀಳಲು ಶುರು ಮಾಡಿತು. ಅದಕ್ಕೆ ತನ್ನ ಸಾವು ಖಂಡಿತ ಅಂತ ಅನಿಸಲು ಶುರುಮಾಡಿ, ದೇವರನ್ನು , ನನ್ನನ್ನು ಕೆಳಗೆ ಬೀಳದಂತೆ ನೋಡಿಕೋ ಅಂತ ಪ್ರಾರ್ಥಿಸತೊಡಗಿತು. ಆಗ ಇದ್ದಕ್ಕಿದ್ದಂತೆ ಯಾರೋ ಇರುವೆಯನ್ನು ಹಿಡಿದುಕೊಂಡಂತಾಯಿತು. ಕತ್ತಲಲ್ಲಿ ಯಾರು ಕಾಣುತ್ತಿರಲಿಲ್ಲ. ಗಾಳಿಯಲ್ಲಿ ತೇಲಿದಂತೆ ಆಗುತ್ತಿತ್ತು. ಆದರೆ ಕೆಳಗೆ ಬೀಳದೆ ಇದ್ದಲ್ಲೇ ಇತ್ತು. ಅದಕ್ಕೆ ದೇವರು ನಾನು ಕೇಳಿದ್ದನ್ನು ದಯಪಾಲಿಸಿದ ಅಂತ ಬಹಳ ಸಂತೋಷವಾಯಿತು. ಸ್ವಲ್ಪ ಹೊತ್ತಿನಲ್ಲಿ ಇರುವೆಗೆ ತನ್ನನ್ನು ಯಾರೋ ಎಳೆದಂತೆ ಅನಿಸತೊಡಗಿತು. ನೋಡನೋಡುತ್ತಿದ್ದಂತೆ ಜೋರಾಗಿ ಇರುವೆಯನ್ನು ಯಾರೋ ಎಳೆಯತೊಡಗಿದರು. ಕತ್ತಲಲ್ಲಿ ಏನಾಗುತ್ತಿದೆ ಅಂತ ಗೊತ್ತಾಗುವಷ್ಟರಲ್ಲಿ ಇರುವೆ ಜೇಡದ ಬಾಯಲ್ಲಿತ್ತು. ಇರುವೆ ಕೆಳಗೆ ಬೀಳುವಾಗ ಅದನ್ನು ಯಾರು ಹಿಡಿದುಕೊಂಡಿರಲಿಲ್ಲ ಅದು ಜೇಡ ಹೆಣೆದ ಬಲೆಯಲ್ಲಿ ಸಿಕ್ಕಿಕೊಂಡಿತ್ತು.
” ದೇವರ ಕೇಳಿದ್ದನ್ನು ಕೊಡುತ್ತಾನೆ. ಆದರೆ ಕೇಳುವದನ್ನು ಸರಿಯಾಗಿ ಕೇಳಬೇಕು ಅಷ್ಟೇ” ಅಲ್ವಾ ?
Good one👍👍👍
LikeLike
Thank you 😊
LikeLike