ಛಾಯಾಚಿತ್ರಣ : ಅಂಕಿತ
ಬರೆಹ : ಶ್ರೀನಾಥ್ ಹರದೂರ ಚಿದಂಬರ

ಜೀವನದಲ್ಲಿ ಎತ್ತರಕ್ಕೆ ಏರಬೇಕಾದರೆ
ನೆನಪಿರಲಿ ….
ಭಕ್ತಿ ಇರಲಿ ದೇವರಲ್ಲಿ
ಕನಸುಗಳಿರಲಿ ಕಣ್ಣಿನಲ್ಲಿ
ಗುರಿಯಿರಲಿ ಬಾಳಿನಲ್ಲಿ
ನಂಬಿಕೆಯಿರಲಿ ಪ್ರಯತ್ನದಲ್ಲಿ
ವಿಶ್ವಾಸ ಇರಲಿ ಗುರುವಿನಲ್ಲಿ
ಶ್ರದ್ದೆ ಇರಲಿ ಓದಿನಲ್ಲಿ
ಹುಮ್ಮಸ್ಸಿರಲಿ ಆಟದಲ್ಲಿ
ಸಂಸ್ಕಾರವಿರಲಿ ಮಾತಿನಲ್ಲಿ
ಗಮನವಿರಲಿ ಕೆಲಸದಲ್ಲಿ
ಛಲವಿರಲಿ ಸಾಧನೆಯಲ್ಲಿ
ನಗುವಿರಲಿ ಸೋಲಿನಲ್ಲಿ
ಹೆಮ್ಮೆಯಿರಲಿ ಗೆಲುವಿನಲ್ಲಿ
ಗೌರವವಿರಲಿ ಹೆಣ್ಣಿನಲ್ಲಿ
ಮಮತೆ ಇರಲಿ ಮಕ್ಕಳಲ್ಲಿ
ಕಪಟವಿರದಿರಲಿ ಸ್ನೇಹದಲ್ಲಿ
ಮೋಸವಿರದಿರಲಿ ಪ್ರೀತಿಯಲ್ಲಿ
ಬಾಂಧ್ಯವ್ಯವಿರಲಿ ಒಡಹುಟ್ಟಿದವರಲ್ಲಿ
ಸಾಗುತಿರಲಿ ಜೀವನ ಈ ನಿಟ್ಟಿನಲ್ಲಿ.
Exactly correct 👏👏
LikeLike
Truly spoken, values of life, very much needed for this kaliyug
LikeLike
Thank you 😊
LikeLike