ಛಾಯಾಚಿತ್ರಣ: ಅಂಕಿತ
ಕಥೆ : ಶ್ರೀನಾಥ್ ಹರದೂರ ಚಿದಂಬರ

ಸೂರ್ಯ ಮುಳುಗಿ ಕತ್ತಲಾಗುತ್ತ ಬಂದಿತ್ತು. ಕತ್ತಲಾಗುವುದೊರಳಗೆ ಬೇಗ ಮನೆ ಸೇರಿಕೊಳ್ಳಬೇಕು ಅನ್ನುವ ಗಡಿಬಿಡಿಯಲ್ಲಿ ಕೆಲವರು ಇದ್ದರೆ, ಪಾರ್ಕಿನಲ್ಲಿ ಕುಳಿತ ಪ್ರೇಮಿಗಳಿಗೆ ಬೇಗ ಕತ್ತಲಾದರೆ ಇನ್ನು ಅಂಟಿಕೊಂಡು ಕೂರಬಹುದಲ್ಲ ಎಂಬ ಆಲೋಚನೆ. ನಿಧಾನವಾಗಿ ಕತ್ತಲು ಕವಿಯತೊಡಗಿತು, ಪ್ರೇಮಿಗಳು ಅಂಟಿಕೊಳ್ಳಲಾರಂಭಿಸಿದರು. ಪಾರ್ಕಿನಲ್ಲಿ ಪ್ರೇಮಿಗಳು ಬಿಟ್ಟರೆ ಬೇರೆ ಯಾರು ಇರಲಿಲ್ಲ. ದೂರದಲ್ಲಿ ಪೊಲೀಸ್ ಪೀಪಿ ಊದುತ್ತಾ ಎಲ್ಲರನ್ನು ಪಾರ್ಕಿನಿಂದ ಹೊರಗಡೆ ಕಳುಹಿಸಲು ಬರತೊಡಗಿದ. ಬೆಂಚಿನ ಮೇಲೆ ಕುಳಿತ ಪ್ರೇಮಿಗಳು ತಮ್ಮ ಪರ್ಸಿನಿಂದ ದುಡ್ಡು ತೆಗೆದು ಕೈಯಲ್ಲಿ ಇಟ್ಟುಕೊಳ್ಳಲು ಶುರು ಮಾಡಿದರು. ಪೊಲೀಸ್ ಓದುತ್ತ ತಮ್ಮ ಹತ್ತಿರ ಬಂದಾಗ ಆ ದುಡ್ಡನ್ನು ಅವನ ಕೈಯಲ್ಲಿ ಇಡತೊಡಗಿದರು. ಅವನು ದುಡ್ಡು ತೆಗೆದುಕೊಂಡು ಪೀಪಿ ಓದುತ್ತ ಮುಂದೆ ಹೋಗುತ್ತಿದ್ದನು. ಯಾರು ಕೊಡುತ್ತಿರಲಿಲ್ಲವೋ ಅವರನ್ನು ಹೊರಗಡೆ ಕಳಿಸುತ್ತಿದ್ದನು. ಕತ್ತಲಲ್ಲಿ ಪ್ರೇಮಿಗಳ ಮುಖ ಇವನಿಗೆ ಕಾಣಿಸುತ್ತಿರಲಿಲ್ಲ. ಪೊಲೀಸನ ಮುಖ ಪ್ರೇಮಿಗಳಿಗೆ ಕಾಣಿಸುತ್ತಿರಲಿಲ್ಲ. ಪ್ರೇಮಿಗಳಿಗೆ ಪೊಲೀಸ್ ಡ್ರೆಸ್ ಕಂಡರೆ, ಪೋಲಿಸಿಗೆ ದುಡ್ಡು ಮಾತ್ರ ಕಾಣಿಸುತ್ತಿತ್ತು. ದುಡ್ಡು ಇಸಿದುಕೊಂಡು “ಅರ್ಧ ಗಂಟೆ ಮಾತ್ರ” ಅಂತ ಹೇಳುತ್ತಾ ಮುಂದೆ ಹೋಗುತ್ತಿದ್ದ. ಸ್ವಲ್ಪ ಮುಂದೆ ಹೋಗಿ ಇಬ್ಬರು ಪ್ರೇಮಿಗಳ ಮುಂದೆ ನಿಂತು ಪೀಪಿ ಊದಿದ, ಅವರು ಎಷ್ಟು ಕೊಡಬೇಕು ಅಂತ ಕೇಳಿದರು. ಅದಕ್ಕೆ ಪೊಲೀಸ್ ” ಏನು ಹೊಸಬರ ? ನೂರು ರೂಪಾಯಿ ಕೊಡಿ” ಅಂದ. ಅದಕ್ಕೆ ಹುಡುಗಿ ನಮ್ಮ ಹತ್ತಿರ ಅಷ್ಟು ಇಲ್ಲ ಐವತ್ತು ರೂಪಾಯಿ ಮಾತ್ರ ಇದೆ” ಅಂತ ಅಂದಳು. ಪೋಲಿಸಿಗೆ ಆ ಧ್ವನಿ ಎಲ್ಲೋ ಕೇಳಿಸಿದ ಹಾಗೆ ಅನಿಸಿತು. ಆದರೂ ಆ ದುಡ್ಡನ್ನೇ ಇಸಿದುಕೊಂಡು ಮುಂದೆ ಹೋದ. ಆ ಹುಡುಗ ಹುಡುಗಿ ದುಡ್ಡು ಕೊಟ್ಟು ಕೂಡಲೇ ಅಲ್ಲಿಂದ ಹೊರಟು ಹೋಗತೊಡಗಿದರು. ಪೊಲೀಸ್ ಆ ಧ್ವನಿ ಎಲ್ಲೋ ಕೇಳಿಸಿದ ಹಾಗಿದೆಯಲ್ಲ ಅಂತ ಯೋಚನೆ ಮಾಡುತ್ತಲೇ ಇದ್ದ. ಅಂತೂ ಕೊನೆಗೆ ಧ್ವನಿ ಯಾರದು ಅಂತ ಗೊತ್ತಾಗಿ ಹಿಂದೆ ಓಡಿ ಬಂದ. ಅಲ್ಲಿ ಆ ಹುಡುಗ ಹುಡುಗಿ ಇಬ್ಬರು ಇರಲಿಲ್ಲ. ಅಪ್ಪ ಮಗಳನ್ನು ಗುರುತಿಸಿರಲಿಲ್ಲ. ಮಗಳು ಅಪ್ಪನನ್ನು ಗುರುತಿಸಿದ್ದಳು. ಬೆಳಿಗ್ಗೆ ಮಗಳಿಗೆ ಕೊಟ್ಟ ಪಾಕೆಟ್ ಮನಿ ವಾಪಸು ಅವನ ಕೈಗೆ ಬಂದಿತ್ತು.
ಬದುಕಿನ ವ್ಯಂಗ್ಯ ಚಿತ್ರಣ.. ಬಹಳ ಚೆನ್ನಾಗಿದೆ.🙂.
LikeLike
ಧನ್ಯವಾದಗಳು …
LikeLike
Beautiful photo
LikeLike
Thank you 😊
LikeLike
ಹ…ಹ…
LikeLike
😀
LikeLike