ಅವರು ಬಹಳ ಪ್ರಸಿದ್ಧ ರಾಜಕಾರಣಿ ಆಗಿದ್ದರು. ಸರಕಾರದಲ್ಲಿ ಅನೇಕ ಸಲ ಮಂತ್ರಿ ಕೂಡ ಆಗಿದ್ದರು. ವಿಪರೀತ ಹಣ, ಆಸ್ತಿ, ಕಾರುಗಳು, ಬಂಗಲೆಗಳು ಮಾಡಿದ್ದರು. ಆರೋಗ್ಯ ಇಲಾಖೆಯಲ್ಲಿ ಮಂತ್ರಿ ಆದ ಮೇಲಂತೂ ಅವರ ಆಸ್ತಿ ಮೂರು ಪಟ್ಟು ಜಾಸ್ತಿ ಆಗಿತ್ತು. ಅಂದು ಅವರ ಮನೆಗೆ ಇಬ್ಬರು ವ್ಯಕ್ತಿಗಳು ಬಂದು ಅವರಿಗಾಗಿ ಕಾಯುತ್ತ ಇದ್ದರು. ಮಂತ್ರಿಗಳ ಅಸಿಸ್ಟಂಟ್ ಅವರನ್ನು ಮಂತ್ರಿಗಳ ಹತ್ತಿರ ಕರೆದುಕೊಂಡು ಹೋದ. ಅವರು ಒಂದು ಡೂಪ್ಲಿಕೇಟ್ ಮೆಡಿಕಲ್ ಇಕ್ವಿಪ್ಮೆಂಟ್ ತಯಾರು ಮಾಡುವ ಕಂಪನಿಯನ್ನು ನಡೆಸುತ್ತಿದ್ದರು. ರೋಗಿಗಳಿಗೆ ಉಸಿರಾಡಲು ಸಹಾಯ ಮಾಡುವ ವೆಂಟಿಲೇಟರ್ ಅನ್ನು ಎಲ್ಲ ಕಡೆ ಮಾರುವ ಪ್ಲಾನ್ ಮಾಡಿಕೊಂಡು ಬಂದಿದ್ದರು. ಆದರೆ ಅದು ಡೂಪ್ಲಿಕೇಟ್ ಆಗಿದ್ದರಿಂದ ನೀವು ನಮಗೆ ಮಾರಲು ಸಹಾಯ ಮಾಡಿದರೆ ನೀವು ಕೇಳಿದಷ್ಟು ದುಡ್ಡು ಕೊಡುತ್ತೇವೆ ಎಂದರು. ಅದಕ್ಕೆ ಮಂತ್ರಿಗಳು ಕೋಟಿ ಕೋಟಿ ದುಡ್ಡು ಮಾಡಬಹುದು ಅಂತ ಅಂದುಕೊಂಡು ಅದಕ್ಕೆ ಒಪ್ಪಿಗೆ ನೀಡಿದರು. ಕೆಲವೇ ದಿನಗಳಲ್ಲಿ ಎಲ್ಲ ವೆಂಟಿಲೇಟರ್ ಗಳು ಮಾರುಕಟ್ಟೆಗೆ ಬಂದು ಆಸ್ಪತ್ರೆಗಳನ್ನು ಸೇರಿತು. ಅದು ಸರಿಯಾಗಿ ಕೆಲಸ ಮಾಡಿದಿದ್ದ ಕಾರಣ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಆದರೆ ಸರಕಾರೀ ಆಸ್ಪತ್ರೆಯ ಮೇಲಧಿಕಾರಿಗಳು, ದೊಡ್ಡ ದೊಡ್ಡ ಆಸ್ಪತ್ರೆಯ ಮ್ಯಾನೇಜ್ಮೆಂಟ್ ಅವರು ಮಂತ್ರಿಯ ಪ್ರಭಾವದಿಂದ ಕಾರಣವನ್ನು ಮುಚ್ಚಿಟ್ಟಿದ್ದರಿಂದ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಒಂದು ದಿನ ಮಂತ್ರಿಯ ಮಗ ತನ್ನ ಐಷಾರಾಮಿ ಕಾರಿನಲ್ಲಿ ಕುಡಿದ ಮತ್ತಿನಲ್ಲಿ ಹೋಗುವಾಗ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಯಿತು. ತಲೆಗೆ ಹಾಗು ಹೊಟ್ಟೆಗೆ ತುಂಬಾ ಪೆಟ್ಟು ಬಿದ್ದು ಆಸ್ಪತ್ರೆಗೆ ಸೇರಿದ. ಶ್ವಾಸಕೋಶಕ್ಕೆ ತುಂಬಾ ಪೆಟ್ಟು ಬಿದ್ದು ಉಸಿರಾಟದ ತೊಂದರೆ ಶುರುವಾಯಿತು. ಆದರೆ ಮಂತ್ರಿಗಳ ಮಗ ಬದುಕಲಿಲ್ಲ. ಐಸಿಯು ನಲ್ಲಿದ್ದ ವೆಂಟಿಲೇಟರ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರಿಂದ ಅವನ ಸಾವು ಉಂಟಾಗಿತ್ತು. ಅದನ್ನು ಆಸ್ಪತ್ರೆಯ ಮ್ಯಾನೇಜ್ಮೆಂಟ್ ಅವರು ಅದನ್ನು ಮುಚ್ಚಿಟ್ಟರು. ಸಾವಿನ ಕಾರಣ ಮಂತ್ರಿಗೂ ಗೊತ್ತಾಗಲಿಲ್ಲ.
– ಶ್ರೀನಾಥ್ ಹರದೂರ ಚಿದಂಬರ
ಕಾಲ ಚಕ್ರವೇ ಹಾಗೆ.. ಯಾರನ್ನೂ ಬಿಡುವುದಿಲ್ಲ, ತಲೆಗೆ ಹಾಕಿದ ನೀರು ಕಾಲಿಗೆ ಬರಲೇ ಬೇಕು
LikeLike
ಕಾಲ ಚಕ್ರವೇ ಹಾಗೆ.. ಯಾರನ್ನೂ ಬಿಡುವುದಿಲ್ಲ, ತಲೆಗೆ ಹಾಕಿದ ನೀರು ಕಾಲಿಗೆ ಬರಲೇ ಬೇಕು
LikeLike
Good one
LikeLike
Thank you 😊
LikeLike