
ಒಂದೆಲ್ಲಾ ಎರಡಲ್ಲ ಸಾವಿರ ಸಾವಿರ ಹಾಡುಗಳು
ಹಾಡಿದ ಎಲ್ಲ ಹಾಡುಗಳು ಹೊಳೆವ ಮುತ್ತುಗಳು
ಗುನುಗುನಿಸುತ್ತಲೇ ಇರುತ್ತೇವೆ ಪ್ರತಿ ಹಾಡುಗಳು
ಹಾಡಿದ್ದ ಹಾಡುಗಳು ಎಲ್ಲರ ಹೃದಯವನ್ನೇ ಗೆದ್ದಿತ್ತು
ಭಾಷೆಗಳ ಹಂಗಿಲ್ಲದೆ ಎಲ್ಲರನ್ನು ಮೋಡಿ ಮಾಡಿತ್ತು
ಯುವ ಗಾಯಕರಿಗೆ ಹಾಡಲು ಸ್ಪೂರ್ತಿಯಾಗಿತ್ತು
ಬರಿದಾಗಿದೆ ಇಂದು ನೀನಿಲ್ಲದೆ ಹಾಡುಗಳ ಜಗತ್ತು.
ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ.
ನಿಮ್ಮ ಮನೆಯವರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ.
– ಶ್ರೀನಾಥ್ ಹರದೂರ ಚಿದಂಬರ