ಜಗತ್ತಿನಲ್ಲೇ ಅತಿ ಉದ್ದವಾದ ಗೋಡೆ ಇರುವುದು ಚೀನಾದಲ್ಲಿ ( ಗ್ರೇಟ್ ವಾಲ್ ಆ ಚೀನಾ) ಅಂತ ಎಲ್ಲರಿಗು ತಿಳಿದಿದೆ, ಆದರೆ ಎರಡನೇ ಅತಿ ಉದ್ದವಾದ ಗೋಡೆ ಎಲ್ಲಿರುವುದು ಗೊತ್ತೇ ? ಅದು ಇರುವುದು ನಮ್ಮ ದೇಶದ ರಾಜಸ್ತಾನದಲ್ಲಿ. ಅದರ ಉದ್ದ ಸರಿ ಸುಮಾರು ಮೂವತ್ತಾರು ಕಿಲೋಮೀಟರ್ಗಳಷ್ಟು.
ಆ ಪ್ರಸಿದ್ಧ ಸ್ಥಳದ ಹೆಸರು ” ಕುಂಬಲ್ಗಡ್ ಕೋಟೆ”.

ರಾಜಸ್ತಾನದಲ್ಲಿರುವ ಅರಾವಳಿ ಬೆಟ್ಟಗಳ ಶ್ರೇಣಿಯಲ್ಲಿದೆ ಈ ಪ್ರಸಿದ್ದವಾದ ಕೋಟೆ. ಕುಂಬಲ್ಗಡ್ ಕೋಟೆ ರಾಜಸ್ತಾನದ ರಾಜಸಮಂಡ್ ಜಿಲ್ಲೆಯಲ್ಲಿದೆ ಹಾಗು ಉದಯಪುರಕ್ಕೆ ಬಹಳ ಹತ್ತಿರ ಇದೆ. ಈ ಬೃಹತ್ ಕೋಟೆ ಮಹಾ ರಾಣಾ ಕುಂಭ ಎಂಬ ರಾಜನಿಂದ ಹದಿನೈದನೇ ಶತಮಾನದಲ್ಲಿ ಕಟ್ಟಲ್ಪಟ್ಟಿತು. ಈ ಕೋಟೆ ಸಮುದ್ರ ಮಟ್ಟದಿಂದ ಸುಮಾರು ೧೧೦೦ಮೀಟರ್ ಎತ್ತರದಲ್ಲಿದೆ. ಈ ಕೋಟೆಯ ಒಟ್ಟು ಪರಿಧಿ ಮೂವತ್ತಾರು ಕಿಲೋಮೀಟರ್ಗಳಷ್ಟು. ಕೋಟೆಯ ಮುಂದಿನ ಗೋಡೆಯು ಹದಿನೈದು ಅಡಿಗಳಷ್ಟು ದಪ್ಪ ಇದೆ. ಕೋಟೆಯು ಅನೇಕ ಭದ್ರವಾದ ಬಾಗಿಲುಗಳಿಂದ ಕೂಡಿದೆ. ಇಡೀ ಕೋಟೆಯಲ್ಲಿ ಸರಿಸುಮಾರು ಮುನ್ನೂರ ಅರವತ್ತು ದೇವಸ್ಥಾನಗಳಿವೆ. ಕೋಟೆಯ ಮೇಲುಗಡೆಯಿಂದ ಅರಾವಳಿ ಬೆಟ್ಟಗಳ ಶ್ರೇಣಿ ಹಾಗು ಥಾರ್ ಮರುಭೂಮಿಯ ಮರಳು ದಿಣ್ಣೆಗಳನ್ನು ನೋಡಬಹುದು.

ಕೋಟೆಯ ಪ್ರಮುಖ ಆಕರ್ಷಣೆ ಅಂದರೆ ಲಾಖೋಲ ಟ್ಯಾಂಕ್. ಕೋಟೆಯ ಪಶ್ಚಿಮ ಭಾಗದಲ್ಲಿರುವ ಈ ಟ್ಯಾಂಕ್ ಸುಮಾರು ೫ ಕಿಲೋಮೀಟರು ಉದ್ದ ಇದ್ದು, ೩೦೦ ಮೀಟರ್ನಷ್ಟು ಅಗಲ ಹಾಗು ೬೦ ಅಡಿ ಆಳ ಇದೆ. ಇದನ್ನು ರಾಣಾ ಲಾಖ 1382–1421 CE ಸಮಯದಲ್ಲಿ ಕಟ್ಟಿಸಿದ್ದು. ಕೋಟೆಗೆ ರಾಮ್ ಪೋಲ್, ಹನುಮಾನ್ ಪೋಲ್, ಆರೇಟ್ ಪೋಲ್, ಹಾಲ್ಲ ಪೊಲ್… ಎಂಬ ಅನೇಕ ದ್ವಾರ ಬಾಗಿಲುಗಳಿವೆ. ಅದರಲ್ಲಿ ರಾಮ್ ಪೋಲ್ ಮತ್ತು ಹನುಮಾನ್ ಪೋಲ್ ಅತಿ ದೊಡ್ಡ ಹಾಗು ಮುಖ್ಯ ದ್ವಾರ ಬಾಗಿಲುಗಳಾಗಿವೆ. ಕೋಟೆಯಲ್ಲಿರುವ ಗಣೇಶ ಮತ್ತು ನೀಲಕಂಠ ಮಹಾದೇವ ದೇವಸ್ಥಾನಗಳು ನೋಡಲು ಅದ್ಭುತವಾಗಿವೆ.
ಹಿಂದೆ ಮಹಾ ರಾಣಾ ಕುಂಭನು ಕೋಟೆಯ ಒಂದು ಭಾಗದಲ್ಲಿ ಭಾರಿ ಗಾತ್ರದ ಒಂದು ದೀಪವನ್ನು ರಾತ್ರಿಯ ಹೊತ್ತು ಹಚ್ಚುತ್ತಿದ್ದನಂತೆ. ಆ ದೀಪಕ್ಕೆ ೫೦ ಕೆಜಿಯಷ್ಟು ತುಪ್ಪ ಮತ್ತು ನೂರಾರು ಕೆಜಿಯಷ್ಟು ಹತ್ತಿಯನ್ನು ಉಪಯೋಗಿಸುತ್ತಿದ್ದರಂತೆ. ಆ ದೀಪವನ್ನು ಯಾಕೆ ಹಚ್ಚುತ್ತಿದ್ದ ಅಂದರೆ ಅದರ ಬೆಳಕಿನಿಂದ ಕೋಟೆಯ ಪಕ್ಕದ ಕಣಿವೆಯಲ್ಲಿ ರಾತ್ರಿ ಹೊತ್ತು ವ್ಯವಸಾಯ ಮಾಡುತ್ತಿದ್ದ ರೈತರಿಗೆ ಬೆಳಕು ಸಿಗಲಿ ಅಂತ. ಇದನ್ನು ಕೇಳುವಾಗ ಅಬ್ಬಾ ಅನಿಸದೇ ಇರುವುದಿಲ್ಲ.

ಅನೇಕ ಮುಘಲ್ ರಾಜರು ಈ ಕೋಟೆಯನ್ನು ವಶಪಡಿಸಿಕೊಳ್ಳಲು ಅನೇಕ ಬಾರಿ ಪ್ರಯತ್ನ ಪಟ್ಟಿದ್ದರು. ಆದರೆ ಅವರಿಗೆ ಗೆಲ್ಲಲು ಸಾಧ್ಯವಾಗಿರಲಿಲ್ಲ. ಮೊಹಮ್ಮದ್ ಖಿಲ್ಜಿ ಮೂರು ಬಾರಿ ಕೋಟೆಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನ ಪಟ್ಟು ಸೋತಿದ್ದ. ಅಕ್ಬರನ ಜನರಲ್ ಶಾಬಾಜ್ಹ್ ಖಾನ್ ಮಾತ್ರ ಇದನ್ನು ಒಮ್ಮೆ ವಶಪಡಿಸಿಕೊಂಡಿದ್ದ. ನಂತರ ಮಹಾವೀರ ಮಹಾ ರಾಣಾ ಪ್ರತಾಪನ ಕೈಲಿ ಸೋತು ಸುಣ್ಣವಾಗಿ ಹೋಗಿದ್ದ . ಬಹಳ ಪ್ರಮುಖ ವಿಷಯ ಏನೆಂದರೆ ಮಹಾರಾಣಾ ರಾಣಾ ಪ್ರತಾಪ್ ಹುಟ್ಟಿದ್ದು ಇದೆ ಜಾಗದಲ್ಲಿ.
ಈ ಅದ್ಭುತ ಕೋಟೆಯನ್ನು ಜೀವಮಾನದಲ್ಲಿ ಒಮ್ಮೆಯಾದರೂ ನೋಡಲೇಬೇಕು, ಅಷ್ಟು ಸುಂದರ ಹಾಗು ರಮಣೀಯವಾಗಿದೆ. ವಿಪರ್ಯಾಸ ಅಂದರೆ ನಮ್ಮಲ್ಲಿ ಅನೇಕರಿಗೆ ಜಗತ್ತಿನ ಎರಡನೇ ಅತ್ಯಂತ ಉದ್ದವಾದ ಗೋಡೆ ಇರುವ ಈ ಕೋಟೆಯ ಬಗ್ಗೆ ಗೊತ್ತೇ ಇಲ್ಲ. ಇದರ ಬಗ್ಗೆ ತಿಳಿದುಕೊಳ್ಳಲು ನಮ್ಮ ಪಠ್ಯ ಪುಸ್ತಕಗಳಲ್ಲಿ ಇದರ ಬಗ್ಗೆ ಹೇಳಿಯೂ ಇಲ್ಲ. ಕೇವಲ ಬೇರೆ ದೇಶದಲ್ಲಿರುವ ಅತಿ ಉದ್ದವಾದ ಗೋಡೆಯಾ ಬಗ್ಗೆ ಹೇಳಿ ಸುಮ್ಮನಾಗಿಬಿಟ್ಟಿದ್ದಾರೆ. ನಮಗೆ ಹೆಮ್ಮೆ ತರುವ ಅನೇಕ ವಿಷ್ಯಗಳು ಪಠ್ಯಪುಸ್ತಕಗಳಲ್ಲಿ ಇರದೇ ಇದ್ದರೆ, ಹೇಗೆ ತಾನೇ ಮಕ್ಕಳಿಗೆ ದೇಶದ ಬಗ್ಗೆ ಹಿರಿಮೆ ಇರುತ್ತದೆ ಅಲ್ವಾ ?
ನಮ್ಮ ದೇಶದ ಇತಿಹಾಸ ನಾವು ನಮ್ಮ ಮಕ್ಕಳಿಗೆ ಹೇಳಿಕೊಡುವ ನೆಪದಲ್ಲಿ ನಾವು ಕಲಿಯೋಣ ಅಲ್ಲವೇ !!
– ಶ್ರೀನಾಥ್ ಹರದೂರ ಚಿದಂಬರ
ಚಿತ್ರ ಕೃಪೆ: ಗೂಗಲ್
Interesting , did not know about this.
LikeLike
Thank you 😊.. many things which are not included in our school history books😌
LikeLiked by 1 person
See we had a small subject called Karnataka history teaching Abbakka , chennamma etc . I hope Rajasthan had similar subject and taught them this.
LikeLike
Yes, definitely it will be there in school books.. history should not be restricted to statewise… for example India’s biggest falls is in Karnataka (jog falls) but many my North Indian friends don’t know.. if not everything at least great things like this should include school books.. right?😊
LikeLike