ಛಾಯಾಚಿತ್ರ : ಅಂಕಿತ
ಬರೆಹ: ಶ್ರೀನಾಥ್ ಹರದೂರ ಚಿದಂಬರ

ನನ್ನ ಪ್ರಯತ್ನ ನಿರಂತರ….
ಇಷ್ಟು ಬೇಗ ನೀ ದಿನ ಮುಗಿಸಿ ಹೊರಟರೆ ಹೇಗೆ
ಮನಸ್ಸಿಲ್ಲ ಮುಗಿಸಲು ಈ ದಿನ ನನಗೆ
ಇನ್ನು ಸ್ವಲ್ಪ ಹೊತ್ತು ಇರಲಾರೆಯ ಹೀಗೆ
ಸುತ್ತಲೂ ಕಟ್ಟಿರುವೆ ಎರಡು ಸುತ್ತಿನ ಕೋಟೆ ನಿನಗೆ
ನೋಡುವೆ ಹೇಗೆ ಹೋಗುವೆ ಇದರಿಂದ ನೀ ಹೊರಗೆ
ನನಗೆ ಗೊತ್ತು ಸಾಧ್ಯವಿಲ್ಲ ತಡೆಯಲು ಎನಗೆ
ಬಂದೆ ಬಿಟ್ಟಿದೆ ನೀ ಹೊರಡುವ ಕೊನೆ ಘಳಿಗೆ
ತಡೆಯಲು ನನ್ನ ಪ್ರಯತ್ನ ನಿರಂತರ ನೀ ಅಸ್ತಮವಾಗುವವರೆಗೆ.