ಯಾಕೋ ಗೊತ್ತಿಲ್ಲ ಬೆಳಗ್ಗಿನಿಂದ ನನ್ನ ಮನದನ್ನೆ ಮುನಿಸಿಕೊಂಡಿದ್ದಳು
ಕೋಪಕ್ಕೆ ಮುಖ ದಪ್ಪವಾಗಿದ್ದರಿಂದ ಕಾಣುತ್ತಿರಲಿಲ್ಲ ಕೆನ್ನೆಯ ಗುಳಿಗಳು
ತಟ್ಟೆಯಲ್ಲಿ ಉಪ್ಪಿಟ್ಟು ಹಾಕಿ ಸಿಟ್ಟಿನಿಂದ ತಂದು ನನ್ನ ಮುಂದೆ ಕುಕ್ಕಿದಳು
ಚಡಪಡಿಸಿ ಯೋಚಿಸಿದೆ ಏನಪ್ಪಾ ಈ ಸಿಟ್ಟಿನ ಹಿಂದಿನ ಕಾರಣಗಳು
ಮಾತಾನಾಡದೇ ಉಪ್ಪಿಟ್ಟು ನುಂಗುತ್ತಿದ್ದ ಮಗಳು ಕಿವಿಯಲ್ಲಿ ಪಿಸುಗುಟ್ಟಿದಳು
ಗೊತ್ತಿಲ್ವಾ ನಿಮಗೆ, ಬಂದಿಲ್ಲ ಎರಡು ದಿನದಿಂದ ಮನೆ ಕೆಲಸದವಳು
ನಿಧಾನವಾಗಿ ಉಪ್ಪಿಟ್ಟು ಮುಗಿಸಿ, ಕೈ ಹಾಕಿದೆ ಸಿಂಕಿಗೆ ತೊಳೆಯಲು ಪಾತ್ರೆಗಳು
ಕಿರುಗಣ್ಣಿನಲ್ಲಿ ನೋಡಿದೆ, ಮೂಡುತ್ತಿದ್ದವು ಮತ್ತೆ ಅವಳ ಸುಂದರ ಕೆನ್ನೆ ಗುಳಿಗಳು.
– ಶ್ರೀನಾಥ್ ಹರದೂರ ಚಿದಂಬರ
ಹಹಹಹ್ಹಾ! ಚನಾಗಿದೆ, ಸ್ವ-ಅನುಭವದ ನುಡಿಗಳಾ?
LikeLike
Howdu 😊 🤪thank you 😊
LikeLike