ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ? ಬಾಗ ೨

ಒಗಟು ಬಿಡಿಸುವಾಗ ಒಂದೇ ಪದಕ್ಕೆ ಅದೆಷ್ಟು ಒಗಟುಗಳು ಇವೆಯಲ್ಲ ಅನಿಸುತ್ತೆ. ಎರಡನೇ ಬಾಗದಲ್ಲಿ ಮತ್ತೆ ಐವತ್ತು ಒಗಟುಗಳಿವೆ. ಬಿಡಿಸಲು ಪ್ರಯತ್ನಿಸಿ.  

೧. ಬಣ್ಣದ ಸೀರೆ ಉಟ್ಕೊಂಡು ಮಣ್ಣಲ್ಲಿ ಕುಂತವಳೇ  –  ? 

೨. ಹಗ್ಗ  ಹಾಸಿದೆ, ಕೋಣ  ಮಲಗಿದೆ – ?

೩. ಬಿಳಿ ಕುದುರೆ, ಹಸಿರು ಬಾಲ – ?

೪. ಚಿಕ್ಕ ಮನೆಗೆ ಚಿನ್ನದ ಬೀಗ –  ? 

೫. ಮುಳ್ಳು ಉಂಟು  ಮರವಲ್ಲ, ಅಂಕೆಯುಂಟು ಪುಸ್ತಕವಲ್ಲ, ಚಕ್ರವಿದೆ ಗಾಡಿಯಲ್ಲ, ಗಂಟೆ ಇದೆ ದೇವಸ್ಥಾನವಲ್ಲ – ? 

೬.  ಅಪ್ಪನಿಗಿಂತ ಮಗನೆ ಮೊದಲು ಹುಟ್ಟುತ್ತಾನೆ – ?

೭. ಅಂಗೈಯಗಲದ ಗದ್ದೆ, ಗದ್ದೆಗೆ ನೀರು, ನೀರಿಗೆ ಬೇರು, ಬೇರಿಗೆ ಬೆಂಕಿ –  ?

೮. ಅಗಲವಾದ ಮಾಳಿಗೆಗೆ ಒಂದೇ ಕಂಬ – ?

೯. ಒಂದೇ ಹಸ್ತಕ್ಕೆ ನೂರೆಂಟು ಬೆರಳು –  ?

೧೦. ಸಂಜೆ ತನಕ ಬಡಿದ್ರೂ ಸದಾಗಲ್ಲ – ?

೧೧. ಚೋಟುದ್ದ ರಾಜ, ಮೇಲುದ್ದ ಟೋಪಿ ಹಾಕ್ಕೊಂಡು ಜಟ್ಪಟ್ ಅಂತ ಓಡಾಡಿದರೆ ಒಂದು ನಿಮಿಷದಲ್ಲಿ ಬೂದಿ – ?

೧೨. ಇಬ್ಬರು ಸಹೋದರರು ನೆರೆಕೆರೆಯವರಾದರು ಒಬ್ಬರೊನ್ನಬ್ಬರು ನೋಡಲಾರರು – ?

೧೪. ಉಣ್ಣೆಯಂತೆ ನುಣ್ಣಗಾದ ರೋಮ, ರೋಮದ ಮೇಲೆ ಮೂರು ಬಿಳಿ ಗೆರೆ – ?

೧೫.  ಹಸಿರು ಮರದಲ್ಲಿ ಮೊಸರು ಚೆಲ್ಲಿದೆ – ? 

೧೬. ಬಿಳಿ ತೊಟ್ಟಿಯಲ್ಲಿ ಕರಿ ದ್ರಾಕ್ಷಿ –  ?

೧೭. ಕಲ್ಲರಳಿ ಹೂವಾಗಿ, ಎಲ್ಲರಿಗು ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾದವನು –  ? 

೧೮. ಅಂಕು ಡೊಂಕಿನ ಬಾವಿ ಶಂಖ ಚಕ್ರದ ಬಾವಿ, ಇಣುಕಿ ನೋಡಿದರೆ ಹನಿ ನೀರು ಇಲ್ಲ –  ?

೧೯. ಅಜ್ಜನ ದುಡ್ಡು ಎಣಿಸಲಾರೆ, ಅಮ್ಮನ ಸೀರೆ ಮಡಿಚಲಾರೆ – ?

೨೦. ಅಟ್ಟಣ ಬಟ್ಟಣ ಅರಣ್ಯದಲ್ಲಿ ಶೆಟ್ಟಿ ಅಂಗಡಿ ಇಟ್ಟಿರುವವನು – ?

೨೧. ಬಂಗಾರದ ಗುಬ್ಬಿ, ಬಾಲದಿಂದ ನೀರು ಕುಡಿಯುತ್ತೆ – ?

೨೨. ಮೇಲೆ ಬೆಂಕಿ, ಕೆಳಗೆ ಬೇರು, ಬೇರಿನ ಕೆಳಗೆ ನೀರು –  ?

೨೩.  ಗುಡ್ಡದ ಹಿಂದೆ ಗುಂಡುಕಲ್ಲು ಇಟ್ಟಿದೆ –  ? 

೨೪. ಗಿಡಗಿಡಕ್ಕೆ ಕುಡುಗೋಲು ಕಟ್ಟಿದೆ – ?

೨೫. ಮನೆ ಮೇಲೆ ಮಲ್ಲಿಗೆ ಹೂವು –  ?

೨೬.  ಹಾರಿದರೆ ಹನುಮಂತ ಕೂಗಿದರೆ ಶಂಖ –  ?

೨೭.  ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು – ?

೨೮. ಹಸಿರು ಮುಖಕ್ಕೆ ವಿಪರೀತ ಕೋಪ –  ? 

೨೯. ಅಜ್ಜಿ ಗುದ್ದಿದರೆ ಮನೆಯಲ್ಲ ಮಕ್ಕಳು – ? 

೩೦. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ – ? 

೩೧. ತಲೆ ಇಲ್ಲ,  ನಡು ಇಲ್ಲ, ಕೈಗಳಿದ್ದರು ಬೆರಳಿಲ್ಲ –  ?

೩೨. ಹೋಗೋದು, ಮುಳುಗೋದು ಮತ್ತೆ ತರೋದು –  ?

೩೩. ಕಿರೀಟ ಇದೆ ರಾಜನಲ್ಲ,  ಸಮಯ ತಿಳಿಸುತ್ತೆ ಗಡಿಯಾರವಲ್ಲ  – ?

೩೪. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತು ಮೂವತ್ತು ಬೀಜ – ?

೩೬. ಗುಂಡಾಕಾರ , ಮೈಯೆಲ್ಲಾ ತೂತು – ?

೩೭.  ಅನ್ನ ಮಾಡಲು ಬರದಂತ ಅಕ್ಕಿ – ? 

೩೮. ಲಟಪಟ  ಲೇಡಿಗೆ  ಒಂದೇ ಕಣ್ಣು – ?

೩೯. ಹಸಿರು ಕೋಲಿಗೆ ಕೆಂಪು ತುರಾಯಿ – ? 

೪೦. ನೀಲಿ ಕೆರೇಲಿ ಬಿಳಿ ಮೀನು – ? 

೪೧. ಹಿಡಿ ಹಿಡಿದರೆ ಬಿಟ್ಟರೆ ಮನೆ ತುಂಬಾ – ?

೪೨. ಕುಡುಕೆಯಲ್ಲಿ ಮೆಣಸು –  ? 

೪೩. ಸುತ್ತಮುತ್ತ ಗರಿಕೆ ನಡುವೆ ಕುಡುಕೆ  -? 

೪೪. ಮುಳ್ಳು ಮುಳ್ಳು ಮರದಲ್ಲಿ ಮುತ್ತು ಮುತ್ತು ಕಾಯಿ –  ? 

೪೫. ಕರಿ ಮಂಚದ ಮೇಲೆ ಹಾಸುವ ಹಾಸಿಗೆ, ತೆಗೆಯುವ ಹಾಸಿಗೆ  – ?

೪೬. ಉದ್ದ ಮರದಲ್ಲಿ ಕೆಂಪು ಸನ್ಯಾಸಿ – ?

೪೭. ಅಣ್ಣ ಅಂದರೆ ದೂರ ಹೋಗ್ತಾವೆ, ತಮ್ಮ ಅಂದರೆ ಹತ್ತಿರ ಬರ್ತಾವೆ – ? 

೪೮. ಅಪ್ಪ ಅಮ್ಮ ನಮಗೆ ಅಂತ ಇಡುತ್ತಾರೆ, ಆದರೆ ಅವರೇ ಹೆಚ್ಚು ಬಳಸ್ತಾರೆ –  ?

೪೯. ಹತ್ತಲಾಗದ ಮರ ಎಣಿಸಲಾಗದ ಕಾಯಿ – ?

೫೦. ಬಂಡೆ ಮೇಲೆ ಮಲಗುತ್ತೆ, ತಂತಿ ಮೇಲೆ ಕುಣಿಯುತ್ತೆ –  ?

ಉತ್ತರಗಳು :

೧. ಬಣ್ಣದ ಸೀರೆ ಉಟ್ಕೊಂಡು ಮಣ್ಣಲ್ಲಿ ಕುಂತವಳೇ  –  ಕ್ಯಾರೆಟ್ 

೨. ಹಗ್ಗ  ಹಾಸಿದೆ, ಕೋಣ  ಮಲಗಿದೆ – ಕುಂಬಳ ಕಾಯಿ 

೩. ಬಿಳಿ ಕುದುರೆ, ಹಸಿರು ಬಾಲ – ಮೂಲಂಗಿ 

೪. ಚಿಕ್ಕ ಮನೆಗೆ ಚಿನ್ನದ ಬೀಗ –  ಮೂಗುತಿ 

೫. ಮುಳ್ಳು ಉಂಟು  ಮರವಲ್ಲ, ಅಂಕೆಯುಂಟು ಪುಸ್ತಕವಲ್ಲ, ಚಕ್ರವಿದೆ ಗಾಡಿಯಲ್, ಗಂಟೆ ಇದೆ ದೇವಸ್ಥಾನವಲ್ಲ – ಗಡಿಯಾರ 

೬.  ಅಪ್ಪನಿಗಿಂತ ಮಗನೆ ಮೊದಲು ಹುಟ್ಟುತ್ತಾನೆ – ಹೊಗೆ  

೭. ಅಂಗೈಯಗಲದ ಗದ್ದೆ, ಗದ್ದೆಗೆ ನೀರು, ನೀರಿಗೆ ಬೇರು, ಬೇರಿಗೆ ಬೆಂಕಿ –  ದೀಪ 

೮. ಅಗಲವಾದ ಮಾಳಿಗೆಗೆ ಒಂದೇ ಕಂಬ – ಛತ್ರಿ 

೯. ಒಂದೇ ಹಸ್ತಕ್ಕೆ ನೂರೆಂಟು ಬೆರಳು –  ಬಾಳೆಗೊನೆ 

೧೦. ಸಂಜೆ ತನಕ ಬಡಿದ್ರೂ ಸದಾಗಲ್ಲ – ಕಣ್ಣಿನ ರೆಪ್ಪೆ 

೧೧. ಚೋಟುದ್ದ ರಾಜ, ಮೇಲುದ್ದ ಟೋಪಿ ಹಾಕ್ಕೊಂಡು ಜಟ್ಪಟ್ ಅಂತ ಓಡಾಡಿದರೆ ಒಂದು ನಿಮಿಷದಲ್ಲಿ ಬೂದಿ – ಬೆಂಕಿ ಕಡ್ಡಿ 

೧೨. ಇಬ್ಬರು ಸಹೋದರರು ನೆರೆಕೆರೆಯವರಾದರು ಒಬ್ಬರೊನ್ನಬ್ಬರು ನೋಡಲಾರರು – ಕಣ್ಣುಗಳು 

೧೪. ಉಣ್ಣೆಯಂತೆ ನುಣ್ಣಗಾದ ರೋಮ, ರೋಮದ ಮೇಲೆ ಮೂರು ಬಿಳಿ ಗೆರೆ – ಅಳಿಲು 

೧೫.  ಹಸಿರು ಮರದಲ್ಲಿ ಮೊಸರು ಚೆಲ್ಲಿದೆ –  ಮಲ್ಲಿಗೆ 

೧೬. ಬಿಳಿ ತೊಟ್ಟಿಯಲ್ಲಿ ಕರಿ ದ್ರಾಕ್ಷಿ –  ಕಣ್ಣು 

೧೭. ಕಲ್ಲರಳಿ ಹೂವಾಗಿ, ಎಲ್ಲರಿಗು ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾದವನು –  ಸುಣ್ಣ 

೧೮. ಅಂಕು ಡೊಂಕಿನ ಬಾವಿ ಶಂಖ ಚಕ್ರದ ಬಾವಿ, ಇಣುಕಿ ನೋಡಿದರೆ ಹನಿ ನೀರು ಇಲ್ಲ –  ಕಿವಿ 

೧೯. ಅಜ್ಜನ ದುಡ್ಡು ಎಣಿಸಲಾರೆ, ಅಮ್ಮನ ಸೀರೆ ಮಡಿಚಲಾರೆ – ನಕ್ಷತ್ರ ಮತ್ತು ಆಕಾಶ 

೨೦. ಅಟ್ಟಣ ಬಟ್ಟಣ ಅರಣ್ಯದಲ್ಲಿ ಶೆಟ್ಟಿ ಅಂಗಡಿ ಇಟ್ಟಿರುವವನು – ಜೇನುಗೂಡು 

೨೧. ಬಂಗಾರದ ಗುಬ್ಬಿ, ಬಾಲದಿಂದ ನೀರು ಕುಡಿಯುತ್ತೆ – ದೀಪ 

೨೨. ಮೇಲೆ ಬೆಂಕಿ, ಕೆಳಗೆ ಬೇರು, ಬೇರಿನ ಕೆಳಗೆ ನೀರು –  ಚಿಮಣಿ 

೨೩.  ಗುಡ್ಡದ ಹಿಂದೆ ಗುಂಡುಕಲ್ಲು ಇಟ್ಟಿದೆ –  ತುರುಬು 

೨೪. ಗಿಡಗಿಡಕ್ಕೆ ಕುಡುಗೋಲು ಕಟ್ಟಿದೆ – ಹುಣಸೆಕಾಯಿ 

೨೫. ಮನೆ ಮೇಲೆ ಮಲ್ಲಿಗೆ ಹೂವು –  ಮಂಜು

೨೬.  ಹಾರಿದರೆ ಹನುಮಂತ ಕೂಗಿದರೆ ಶಂಖ –  ಕಪ್ಪೆ 

೨೭.  ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು – ಸುಣ್ಣ 

೨೮. ಹಸಿರು ಮುಖಕ್ಕೆ ವಿಪರೀತ ಕೋಪ –  ಮೆಣಸಿನಕಾಯಿ 

೨೯. ಅಜ್ಜಿ ಗುದ್ದಿದರೆ ಮನೆಯಲ್ಲ ಮಕ್ಕಳು – ಬೆಳ್ಳುಳ್ಳಿ 

೩೦. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ – ನಕ್ಷತ್ರ 

೩೧. ತಲೆ ಇಲ್ಲ,  ನಡು ಇಲ್ಲ, ಕೈಗಳಿದ್ದರು ಬೆರಳಿಲ್ಲ –  ಕೋಟು ಅಂಗಿ 

೩೨. ಹೋಗೋದು, ಮುಳುಗೋದು ಮತ್ತೆ ತರೋದು –  ಬಿಂದಿಗೆ 

೩೩. ಕಿರೀಟ ಇದೆ ರಾಜನಲ್ಲ,  ಸಮಯ ತಿಳಿಸುತ್ತೆ ಗಡಿಯಾರವಲ್ಲ  – ಕೋಳಿ 

೩೪. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತು ಮೂವತ್ತು ಬೀಜ – ವರ್ಷ 

೩೬. ಗುಂಡಾಕಾರ , ಮೈಯೆಲ್ಲಾ ತೂತು – ದೋಸೆ 

೩೭.  ಅನ್ನ ಮಾಡಲು ಬರದಂತ ಅಕ್ಕಿ – ಏಲಕ್ಕಿ 

೩೮. ಲಟಪಟ  ಲೇಡಿಗೆ  ಒಂದೇ ಕಣ್ಣು – ಸೂಜಿ 

೩೯. ಹಸಿರು ಕೋಲಿಗೆ ಕೆಂಪು ತುರಾಯಿ – ಜೋಳದ ತೆನೆ 

೪೦. ನೀಲಿ ಕೆರೇಲಿ ಬಿಳಿ ಮೀನು – ಚಂದ್ರ 

೪೧. ಹಿಡಿ ಹಿಡಿದರೆ ಬಿಟ್ಟರೆ ಮನೆ ತುಂಬಾ – ಸಾಸಿವೆ 

೪೨. ಕುಡುಕೆಯಲ್ಲಿ ಮೆಣಸು –  ಪಪ್ಪಾಯಿ ಹಣ್ಣು 

೪೩. ಸುತ್ತಮುತ್ತ ಗರಿಕೆ ನಡುವೆ ಕುಡುಕೆ  – ಕಣ್ಣು 

೪೪. ಮುಳ್ಳು ಮುಳ್ಳು ಮರದಲ್ಲಿ ಮುತ್ತು ಮುತ್ತು ಕಾಯಿ –  ನಿಂಬೆ ಕಾಯಿ 

೪೫. ಕರಿ ಮಂಚದ ಮೇಲೆ ಹಾಸುವ ಹಾಸಿಗೆ, ತೆಗೆಯುವ ಹಾಸಿಗೆ  – ದೋಸೆ ಕಾವಲಿ 

೪೬. ಉದ್ದ ಮರದಲ್ಲಿ ಕೆಂಪು ಸನ್ಯಾಸಿ – ಅಡಿಕೆ 

೪೭. ಅಣ್ಣ ಅಂದರೆ ದೂರ ಹೋಗ್ತಾವೆ, ತಮ್ಮ ಅಂದರೆ ಹತ್ತಿರ ಬರ್ತಾವೆ – ತುಟಿಗಳು 

೪೮. ಅಪ್ಪ ಅಮ್ಮ ನಮಗೆ ಅಂತ ಇಡುತ್ತಾರೆ, ಆದರೆ ಅವರೇ ಹೆಚ್ಚು ಬಳಸ್ತಾರೆ –  ಹೆಸರು 

೪೯. ಹತ್ತಲಾಗದ ಮರ ಎಣಿಸಲಾಗದ ಕಾಯಿ – ರಾಗಿ 

೫೦. ಬಂಡೆ ಮೇಲೆ ಮಲಗುತ್ತೆ, ತಂತಿ ಮೇಲೆ ಕುಣಿಯುತ್ತೆ –  ಒಣಗಲು ಹಾಕಿದ ಬಟ್ಟೆ – ( ಸಂಗ್ರಹ)  ಶ್ರೀನಾಥ್ ಹರದೂರ ಚಿದಂಬರ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s