
ನಾವು ಯಾವಾಗಲೂ ಅಭಿವೃದ್ಧಿ ಹೊಂದಿದ ದೇಶದ ದುಡ್ಡಿನ ಜೊತೆಗೆ ನಮ್ಮ ರೂಪಾಯಿಯನ್ನು ಹೋಲಿಸಿಕೊಂಡು ಬೇಜಾರು ಪಟ್ಟುಕೊಳ್ಳುತ್ತ ಇರುತ್ತೀವಿ. ಅಮೇರಿಕಾದ ಒಂದು ಡಾಲರ್ ಅಂದರೆ ಈಗ ಸದ್ಯಕ್ಕೆ ಎಪ್ಪತ್ತಮೂರು ರೂಪಾಯಿ ಇದೆ. ಹಾಗಾಗಿ ಎಲ್ಲಾರಿಗೂ ಅದರ ಮೇಲೆ ಆಕರ್ಷಣೆ ಜಾಸ್ತಿ. ನೀವು ಅಲ್ಲಿ ಕೆಲಸ ಮಾಡಿ ಕೇವಲ ಒಂದು ಸಾವಿರ ಡಾಲರನ್ನು ಭಾರತಕ್ಕೆ ಕಳಿಸಿದರೆ ಇಲ್ಲಿ ಅದು ಈಗಿನ ಮೌಲ್ಯದ ಪ್ರಕಾರ ಎಪ್ಪತ್ತೈದು ಸಾವಿರ ಆಗಿ ಹೋಗಿಬಿಡುತ್ತೆ. ನಮ್ಮ ಒಂದು ಸಾವಿರ ಅಲ್ಲಿ ಕೇವಲ ೧೪ ಡಾಲರ್ ಅಷ್ಟೇ. ಒಂದು ಸಾವಿರ ಡಾಲರ ಖರ್ಚು ಮಾಡಬೇಕೆಂದರೆ ನಮಗೆ ಅದು ಬಹಳ ದೊಡ್ಡ ಮೊತ್ತವಾಗಿಬಿಡುತ್ತದೆ. ಹಾಗಾಗಿ ನಾವು ಅಮೇರಿಕ, ಯುರೋಪ್ ಸುತ್ತಿ ಬರಬೇಕೆಂದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗುತ್ತೆ. ಅಲ್ಲಿ ಖರ್ಚು ಮಾಡುವ ಪ್ರತಿ ಡಾಲರನ್ನು ರೂಪಾಯಿಗೆ ಹೋಲಿಕೆ ಮಾಡಿ ನೋಡಿದರೆ ಎಲ್ಲವು ಬಹಳ ದುಬಾರಿ ಅನ್ನಿಸುತ್ತದೆ. ಅಲ್ಲಿ ಕೇವಲ ಒಂದು ದಿನದ ಹೋಟೆಲ್ ಹಾಗು ಮೂರು ಹೊತ್ತು ಊಟಕ್ಕೆ ನಮಗೆ ಹತ್ತರಿಂದ ಹದಿನೈದರಿಂದ ಸಾವಿರ ರೂಪಾಯಿಗಳಾಗುತ್ತದೆ. ಆದರೆ ಪ್ರಪಂಚದಲ್ಲಿ ಕೆಲವು ದೇಶಗಳಲ್ಲಿ ಮಾತ್ರ ನಾವು ಈ ರೀತಿಯಾಗಿ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ರೂಪಾಯಿಯಾ ಮೌಲ್ಯ ಆ ದೇಶಗಳ ಕರೆನ್ಸಿಗಿಂತ ಬಹಳ ಜಾಸ್ತಿ ಇದೆ. ಅಂತಹ ದೇಶಗಳಲ್ಲಿ ನಾವು ಕೋಟ್ಯಾಧಿಪತಿಗಳಾಗಿ ಇದ್ದು ಕೆಲವು ದಿನಗಳನ್ನು ಕಳೆದು ಬರಬಹುದು. ಅಂತಹ ದೇಶಗಳಲ್ಲಿ ಒಂದು ದೇಶ – ಇಂಡೋನೇಷ್ಯಾ.
ಸದ್ಯಕ್ಕೆ ನಮ್ಮ ಒಂದು ರೂಪಾಯಿಗೆ ಅಲ್ಲಿನ ಕರೆನ್ಸಿಯಾ ಮೌಲ್ಯ ನೂರಾ ತೊಂಬತ್ತೊಂದು ಇದೆ . ಅಂದರೆ ನಾವು ಒಂದು ಲಕ್ಷ ರೂಪಾಯಿ ತೆಗೆದುಕೊಂಡು ಹೋದರೆ ಅದರ ಮೌಲ್ಯ ಒಂದು ಕೋಟಿ ತೊಂಬತ್ತೊಂದು ಲಕ್ಷ ರೂಪಾಯಿಗಳು ಆಗುತ್ತೆ.
ಆ ದೇಶದಲ್ಲಿ ನಮಗೆ ನೂರು, ಇನ್ನೂರು, ಐನೂರು ಹಾಗು ಸಾವಿರ ರೂಪಾಯಿಯ ನಾಣ್ಯಗಳು ಕೂಡ ಸಿಗುತ್ತವೆ. ಐದು ಸಾವಿರ, ಹತ್ತು ಸಾವಿರ, ಐವತ್ತು ಸಾವಿರ ಹಾಗು ಒಂದು ಲಕ್ಷ ರೂಪಾಯಿಯ ನೋಟುಗಳು ಚಲಾವಣೆಯಲ್ಲಿವೆ. ಅಲ್ಲಿನ ಹೋಟೆಲ್ಗಳು, ಟ್ಯಾಕ್ಸಿಗಳು, ಮಸಾಜ್ ಸೆಂಟರ್ಗಳು ಎಲ್ಲಿ ಹೋದರು ನೀವು ಕೊಡುವ ದುಡ್ಡು ಲಕ್ಷ ಲಕ್ಷಗಳಲ್ಲಿ ಇರುತ್ತದೆ. ಅಲ್ಲಿ ಕೇವಲ ಒಂದು ಲೀಟರ ನೀರಿನ ಬಾಟಲಿಗೆ ನೀವು ಕೊಡ ಬೇಕಾದ ಮೊತ್ತ ಹತ್ತರಿಂದ ಹದಿನೈದು ಸಾವಿರ ಅಷ್ಟೇ. ಹೋಟೆಲ್ಗೆ ಹೋಗಿ ಊಟ ಮಾಡಿ ಬಂದರೆ ಏನಿಲ್ಲ ಅಂದರು ನೀವು ಮೂರರಿಂದ ನಾಲ್ಕು ಲಕ್ಷ ಇಂಡೋನೇಷಿಯನ್ ರೂಪಾಯಿ ಕೊಡಬೇಕು. ನೀವು ಮಾಡುವ ಖರ್ಚು ಸಾವಿರ ಅಥವಾ ಲಕ್ಷದಲ್ಲಿರುತ್ತದೆ.
ಈಗ ನಿಮಗೆ ಅರ್ಥವಾಗಿರಬೇಕು, ಅಲ್ಲಿ ದುಡ್ಡಿನ ಬೆಲೆಗೂ ಮೌಲ್ಯಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಅವರು ಉಪಯೋಗಿಸುವ ಒಂದು ಲಕ್ಷದ ನೋಟಿನಲ್ಲಿ ಕೊನೆಯ ಮೂರು ಸೊನ್ನೆಗೆ ಬೆಲೆನೇ ಇಲ್ಲ. ಆದರೆ ಜೇಬಿನ ತುಂಬಾ ಲಕ್ಷ ಲಕ್ಷ ಹಣ ಇಟ್ಟುಕೊಂಡು ಒಡಾಡಬಹುದು ಅಷ್ಟೇ.
ಇಂಡೋನೇಷ್ಯಾದಲ್ಲಿ ಅತ್ಯಧ್ಭುತ ಹಾಗು ಆಕರ್ಷಣೀಯ ಸ್ಥಳಗಳಿವೆ. ಅವುಗಳಲ್ಲಿ ಪ್ರಮುಖವಾಗಿ Bali, Ubud , Kuta Denpsar, papua, Java. ಈ ಸ್ಥಳಗಳನ್ನು ಒಮ್ಮೆ ನೀವು ನೋಡಲೇಬೇಕು. ನಿಮಗೆ ಈ ದೇಶಕ್ಕೆ ಹೋಗಲು ವೀಸಾದ ಅವಶ್ಯಕತೆ ಇಲ್ಲ. ಭಾರತೀಯ ಪಾಸ್ಪೋರ್ಟ್ ಸಾಕು.
ಸಮಯ ಮಾಡಿಕೊಂಡು ಇಂಡೊನೇಷ್ಯಾಗೆ ಹೋಗಿಬನ್ನಿ. ಕೆಲವು ದಿನವಾದರೂ ಅಲ್ಲಿ ಕೋಟ್ಯಾಧಿಪತಿಗಳಾಗಿ ಇದ್ದು ಬನ್ನಿ.
ಇದೆ ರೀತಿ ನಮ್ಮ ದೇಶದ ರೂಪಾಯಿಗೆ ಅತಿ ಹೆಚ್ಚು ಮೌಲ್ಯ ಸಿಗುವ ದೇಶಗಳೆಂದರೆ ಅಲಜೇರಿಯಾ, ವಿಯೆಟ್ನಾಯಂ, ಕಾಂಬೋಡಿಯಾ, ಮಂಗೋಲಿಯಾ, ಶ್ರೀಲಂಕಾ, ಕೋಸ್ಟರೀಕಾ, ಹಂಗೇರಿ.
ವಿಯೆಟ್ನಾಯಂನಲ್ಲಿ ನಮ್ಮ ದೇಶದ ಒಂದು ರೂಪಾಯಿಗೆ ಸಿಗುವ ಹಣ ಎಷ್ಟು ಗೊತ್ತಾ ? ಮುನ್ನೂರ ಐವತ್ತು Vietnam dong.( ಅಲ್ಲಿನ ಕರೆನ್ಸಿ)
– ಶ್ರೀನಾಥ್ ಹರದೂರ ಚಿದಂಬರ
Superb
LikeLike
Thank you 😊
LikeLike
Superb
LikeLike
Thank you Rashmi 😊
LikeLike
👍👍👍
LikeLike