ಥಿಂಕ್ ರೈಟ್ | Think Right

ನಮ್ಮ ಬದುಕಿನುದ್ದಕ್ಕೂ ನಾವು ಸಾಗುವ ಹಾದಿಯಲ್ಲಿ ಸಿಗುವ ವ್ಯಕ್ತಿಗಳು, ನೋಡುವ ಸ್ಥಳಗಳು , ಮತ್ತು ಆಗುವ ಅನುಭವಗಳು ವಿವಿಧ ರೀತಿಯಲ್ಲಿ ನಮಗೆ ಜೀವನದ ಪಾಠ ಕಲಿಸುತ್ತವೆ. ಆ ಪಾಠಗಳು ನಮಗೆ ಸರಿಯಾದ ಸಮಯದಲ್ಲಿ ಸರಿಯಾದ ಆಲೋಚನೆ ಮಾಡುವ ಶಕ್ತಿ ಕೊಡುತ್ತದೆ. ಈ ಶಕ್ತಿ ನಮ್ಮ ಬದುಕಿನ ಎಲ್ಲ ಪ್ರಮುಖ ಘಟ್ಟಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯ ತುಂಬುತ್ತದೆ.

…..ಶ್ರೀ

ಹೊಸ ಬರಹಗಳು 

ಪ್ರಯತ್ನ ನಿರಂತರ….

ಛಾಯಾಚಿತ್ರ : ಅಂಕಿತ  ಬರೆಹ:  ಶ್ರೀನಾಥ್ ಹರದೂರ ಚಿದಂಬರ  ನನ್ನ ಪ್ರಯತ್ನ ನಿರಂತರ….  ಇಷ್ಟು ಬೇಗ ನೀ ದಿನ ಮುಗಿಸಿ  ಹೊರಟರೆ ಹೇಗೆ  ಮನಸ್ಸಿಲ್ಲ ಮುಗಿಸಲು ಈ  ದಿನ ನನಗೆ ಇನ್ನು ಸ್ವಲ್ಪ ಹೊತ್ತು ಇರಲಾರೆಯ ಹೀಗೆ  ಸುತ್ತಲೂ ಕಟ್ಟಿರುವೆ ಎರಡು ಸುತ್ತಿನ ಕೋಟೆ ನಿನಗೆ  ನೋಡುವೆ ಹೇಗೆ ಹೋಗುವೆ ಇದರಿಂದ ನೀ ಹೊರಗೆ  ನನಗೆ ಗೊತ್ತು ಸಾಧ್ಯವಿಲ್ಲ ತಡೆಯಲು ಎನಗೆ  ಬಂದೆ ಬಿಟ್ಟಿದೆ  ನೀ ಹೊರಡುವ ಕೊನೆ ಘಳಿಗೆ  ತಡೆಯಲು ನನ್ನ ಪ್ರಯತ್ನ  ನಿರಂತರ ನೀ ಅಸ್ತಮವಾಗುವವರೆಗೆ. 

ಮಧ್ಯಾಹ್ನ ಮೂರು ಗಂಟೆ!! ಬಾಗ – ೩

ರಘುವಿಗೆ  ” ಕೊಲೆಗಾರರು ಸಿಕ್ಕಿದ್ದಾರೆ  ನೀವು ಪೊಲೀಸ್ ಠಾಣೆಗೆ ಬರಲು ಎಸ್ಐ  ಕ್ರಾಂತಿಯವರು ಹೇಳಿ ಕಳಿಸಿದ್ದಾರೆ”  ಎಂದು ಪೊಲೀಸ್ ಪೇದೆ ಹೇಳಿದಾಗ ಕೂಡಲೇ ಪೊಲೀಸ್ ಠಾಣೆಗೆ ಹೊರಟ.  ಪೊಲೀಸ್ ಠಾಣೆ ಒಳಗಡೆ ಹೋಗಿ ಒಳಗಡೆ ಲಾಕ್ ಅಪ್ ನಲ್ಲಿ ಕುಳಿತ್ತಿದ್ದ ಅವರಿಬ್ಬರನ್ನು ನೋಡಿ ನಂಬಲು ಸಾಧ್ಯವೇ ಆಗಲಿಲ್ಲ, ಹಾಗೆ ಕುಸಿದು ಕುಳಿತ.     ಸ್ವಲ್ಪ ಹೊತ್ತು ಆದ ಮೇಲೆ ರಘು ” ನನ್ನ ತಂಗಿ ಮತ್ತು ಅವಳ ಗಂಡ  ಹೀಗೆ ಮಾಡಲು ಸಾಧ್ಯವೇ?  ಯಾಕೆ ಕೊಲೆ ಮಾಡಿದರು?”  ಅಂತ ಕೇಳಿದ. ಎಸ್ಐ  ಕ್ರಾಂತಿಯವರು ಅವರು … Continue reading ಮಧ್ಯಾಹ್ನ ಮೂರು ಗಂಟೆ!! ಬಾಗ – ೩

ಮಧ್ಯಾಹ್ನ ಮೂರು ಗಂಟೆ!! ಬಾಗ – ೨

ಆಗಲೇ ಪವಿತ್ರ ಮತ್ತು ಮಗುವಿನ ಕೊಲೆ ನಡೆದು ಎರಡು ದಿನಗಳಾಗಿತ್ತು. ಎಸ್ಐ  ಕ್ರಾಂತಿಯವರಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹಾಡು ಹಗಲಲ್ಲೇ ಕೊಲೆ ನಡೆದಿದ್ದರಿಂದ ಎಲ್ಲ ಪತ್ರಿಕೆಗಳಲ್ಲಿ ವರದಿಯಾಗಿ ಜನರು ಭಯಬೀತರಾಗಿದ್ದರು.  ಊಹಾಪೋಹಗಳು ಒಬ್ಬರಿಂದ ಒಬ್ಬರಿಗೆ ಹರಡಿ,  ಬೇರೆ ಬೇರೆ ರೀತಿಯ ಕಥೆಗಳು ಹುಟ್ಟಿಕೊಳ್ಳತೊಡಗಿದ್ದವು.   ಎಸ್ಐ  ಕ್ರಾಂತಿಯವರಿಗೆ  ಅವರ ಮೇಲಿನ ಅಧಿಕಾರಿಗಳಿಂದ  ಒತ್ತಡ ಜಾಸ್ತಿಯಾಗತೊಡಗಿತು.   ಛಾಯಾಚಿತ್ರಗಳು,  ಮರಣೋತ್ತರ ವರದಿ, ವಿಧಿ ವಿಜ್ಞಾನ ವರದಿ, ರಘುವಿನ ಹೇಳಿಕೆ, ಅಕ್ಕ ಪಕ್ಕದ ಮನೆಯವರ ಹೇಳಿಕೆ, ಮಾಹಿತಿದಾರರು ಕೊಟ್ಟ ಮಾಹಿತಿಗಳು ಹೀಗೆ ಎಲ್ಲವನ್ನು ಮೇಜಿನ ಜೋಡಿಸಿಕೊಂಡು ಕೂಲಂಕುಷವಾಗಿ … Continue reading ಮಧ್ಯಾಹ್ನ ಮೂರು ಗಂಟೆ!! ಬಾಗ – ೨

ಮಧ್ಯಾಹ್ನ ಮೂರು ಗಂಟೆ!!

ಸಂಜೆ ಕೆಲಸ ಮುಗಿಸಿ ಬಂದ  ರಘು,  ಎಷ್ಟು ಹೊತ್ತು  ಮನೆಯ ಬೆಲ್ ಒತ್ತಿದರು,  ಒಳಗಿದ್ದ ಪವಿತ್ರ ಬಾಗಿಲು ತೆಗೆಯಲಿಲ್ಲ. ರಘುವಿಗೆ ಸ್ವಲ್ಪ ಗಾಬರಿಯಾಯಿತು, ಯಾಕಂದರೆ ಮಗು ಮಲಗಿದ್ದರೆ ರಘು ಬರುವ ಸಮಯದಲ್ಲಿ  ಬಾಗಿಲ ಬಳಿಯಲ್ಲೇ ಕುಳಿತಿರುತ್ತಿದ್ದಳು. ಮಗು ಮಲಗಿಲ್ಲ ಅಂದರೆ ಮಗುವನ್ನು ಎತ್ತಿಕೊಂಡು ಬಂದು ಬಾಗಿಲು ತೆಗೆಯುತ್ತಿದಳು. ಆದರೆ ಇವತ್ತು ಯಾಕೆ ಎಷ್ಟು ಬೆಲ್ ಮಾಡಿದರು ಬಾಗಿಲು ತೆಗೆಯುತ್ತಿಲ್ಲ ಅಂತ ಗೊತ್ತಾಗದೆ ಕಿಟಕಿಯಿಂದ ಬಗ್ಗಿ  ಮನೆಯ ಒಳಗಡೆ  ನೋಡಿದ. ಒಳಗಡೆ ಹಾಲಿನ ಅರ್ಧಭಾಗ ಮಾತ್ರ ಕಾಣಿಸುತ್ತಿತ್ತು. ಅಡುಗೆ ಮನೆಯಲ್ಲಿ ಮಲಗಿದಾಗ ಕಾಲು ಚಾಚುವಂತೆ ಪವಿತ್ರಳ ಕಾಲು … Continue reading ಮಧ್ಯಾಹ್ನ ಮೂರು ಗಂಟೆ!!

ನಾ ನಟಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ !!

ಅವತ್ತು ಊರಲೆಲ್ಲಾ ಬರಿ ಅದೇ  ಸುದ್ದಿ,  ಯಾರೋ ಸಿನಿಮಾ ಚಿತ್ರೀಕರಣಕ್ಕೆ  ಬರುತ್ತಾ  ಇದ್ದಾರೆ ಅಂತ.  ಕನ್ನಡ ಸಿನೆಮಾದ ಚಿತ್ರೀಕರಣ ಅಂತೇ,    ಸಾಹಸಮಯ ಚಿತ್ರ ಅಂತೇ,  ನಾಗಭರಣ ಅವರ ನಿರ್ದೇಶನ ಅಂತೇ, ಶ್ರೀಧರ ಹೀರೊ ಅಂತೇ, ದತ್ತಾತ್ರೇಯ ಕೇಡಿ ಅಂತೇ ,… ಹೀಗೆ ಅಂತೇ ಕಂತೆಗಳು ಹರಿದಾಡುತ್ತಿದ್ದವು.  ನಾನು ಯಾವತ್ತೂ ಸಿನಿಮಾ ಚಿತ್ರೀಕರಣ  ನೋಡಿರಲಿಲ್ಲ, ಹಾಗಾಗಿ ಚಿತ್ರೀಕರಣ  ನೋಡಲು ಸಿಕ್ಕಾಪಟ್ಟೆ ಉತ್ಸಾಹದಲ್ಲಿ ಇದ್ದೆ.  ಮೊದಲಿನಿಂದಲೂ ನನಗೆ  ಸಿನಿಮಾ ನೋಡುವುದೆಂದರೆ ಬಹಳ ಇಷ್ಟ.  ಸಾಹಸಮಯ ಸಿನಿಮಾಗಳೆಂದರೆ ಮುಗಿತು, ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆ. ಹೇಗೆ ಸಿನಿಮಾ ಚಿತ್ರೀಕರಣ ಮಾಡುತ್ತಾರೆ ಅನ್ನುವ ಕುತೂಹಲ ಪ್ರತಿ ಸಿನಿಮಾ ನೋಡುವಾಗಲೂ ಇರುತ್ತಿತ್ತು. ಅಂತೂ ಇಂತೂ … Continue reading ನಾ ನಟಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ !!

ಮಿಸ್ಡ್ ಕಾಲ್ !!

ಬಸ್ ನಿಲ್ದಾಣದಲ್ಲಿ  ಚಂದ್ರು ತನ್ನ ಕೈ ಗಡಿಯಾರದ ಕಡೆ ಪದೇ ಪದೇ ನೋಡುತ್ತಾ, ” ಇಷ್ಟೋತ್ತಿಗೆ ಬಸ್ ಬರಬೇಕಿತ್ತಲ್ವಾ? ಈ ಬಿಎಂಟಿಸಿ ಬಸ್ ಯಾವಾಗಲು ಹಿಂಗೇನೆ,  ಯಾವಾಗ ಬೇಗ ಹೋಗಬೇಕೋ ಅವಾಗ ತಡವಾಗಿ ಬರುತ್ತೆ” ಅಂತ ಗೊಣಗುತ್ತ ಬಸ್ ಬರುವ ದಿಕ್ಕನ್ನು ನೋಡುತ್ತಾ  ನಿಂತಿದ್ದನು.  ಅವನ ಅಕ್ಕಪಕ್ಕದಲ್ಲಿ ಇವನಂತೆ ಬರುವ ಬಸ್ ಗೆ ಕಾಯುತ್ತ  ಹಲವರು ನಿಂತಿದ್ದರು.  ಆಗ  ಎದುರುಗಿದ್ದ ರಸ್ತೆಯ ಇನ್ನೊಂದು ಭಾಗದಿಂದ ರಸ್ತೆಯ ವಿಭಜಕವನ್ನು ಹಾರಿ ಒಬ್ಬ ವ್ಯಕ್ತಿ ಚಂದ್ರು ಕಾಯುತ್ತಿದ್ದ ಬಸ್ ನಿಲ್ದಾಣಕ್ಕೆ ಬಂದನು. ತುಂಬ … Continue reading ಮಿಸ್ಡ್ ಕಾಲ್ !!