ಪ್ರಯತ್ನ ನಿರಂತರ….

ಛಾಯಾಚಿತ್ರ : ಅಂಕಿತ  ಬರೆಹ:  ಶ್ರೀನಾಥ್ ಹರದೂರ ಚಿದಂಬರ  ನನ್ನ ಪ್ರಯತ್ನ ನಿರಂತರ....  ಇಷ್ಟು ಬೇಗ ನೀ ದಿನ ಮುಗಿಸಿ  ಹೊರಟರೆ ಹೇಗೆ  ಮನಸ್ಸಿಲ್ಲ ಮುಗಿಸಲು ಈ  ದಿನ ನನಗೆ ಇನ್ನು ಸ್ವಲ್ಪ ಹೊತ್ತು ಇರಲಾರೆಯ ಹೀಗೆ  ಸುತ್ತಲೂ ಕಟ್ಟಿರುವೆ ಎರಡು ಸುತ್ತಿನ ಕೋಟೆ ನಿನಗೆ  ನೋಡುವೆ ಹೇಗೆ ಹೋಗುವೆ ಇದರಿಂದ ನೀ ಹೊರಗೆ  ನನಗೆ ಗೊತ್ತು ಸಾಧ್ಯವಿಲ್ಲ ತಡೆಯಲು ಎನಗೆ  ಬಂದೆ ಬಿಟ್ಟಿದೆ  ನೀ ಹೊರಡುವ ಕೊನೆ ಘಳಿಗೆ  ತಡೆಯಲು ನನ್ನ ಪ್ರಯತ್ನ  ನಿರಂತರ ನೀ ಅಸ್ತಮವಾಗುವವರೆಗೆ. 

ಮಧ್ಯಾಹ್ನ ಮೂರು ಗಂಟೆ!! ಬಾಗ – ೩

ರಘುವಿಗೆ  " ಕೊಲೆಗಾರರು ಸಿಕ್ಕಿದ್ದಾರೆ  ನೀವು ಪೊಲೀಸ್ ಠಾಣೆಗೆ ಬರಲು ಎಸ್ಐ  ಕ್ರಾಂತಿಯವರು ಹೇಳಿ ಕಳಿಸಿದ್ದಾರೆ"  ಎಂದು ಪೊಲೀಸ್ ಪೇದೆ ಹೇಳಿದಾಗ ಕೂಡಲೇ ಪೊಲೀಸ್ ಠಾಣೆಗೆ ಹೊರಟ.  ಪೊಲೀಸ್ ಠಾಣೆ ಒಳಗಡೆ ಹೋಗಿ ಒಳಗಡೆ ಲಾಕ್ ಅಪ್ ನಲ್ಲಿ ಕುಳಿತ್ತಿದ್ದ ಅವರಿಬ್ಬರನ್ನು ನೋಡಿ ನಂಬಲು ಸಾಧ್ಯವೇ ಆಗಲಿಲ್ಲ, ಹಾಗೆ ಕುಸಿದು ಕುಳಿತ.     ಸ್ವಲ್ಪ ಹೊತ್ತು ಆದ ಮೇಲೆ ರಘು " ನನ್ನ ತಂಗಿ ಮತ್ತು ಅವಳ ಗಂಡ  ಹೀಗೆ ಮಾಡಲು ಸಾಧ್ಯವೇ?  ಯಾಕೆ ಕೊಲೆ ಮಾಡಿದರು?"  ಅಂತ ಕೇಳಿದ. ಎಸ್ಐ  ಕ್ರಾಂತಿಯವರು ಅವರು … Continue reading ಮಧ್ಯಾಹ್ನ ಮೂರು ಗಂಟೆ!! ಬಾಗ – ೩

ಮಧ್ಯಾಹ್ನ ಮೂರು ಗಂಟೆ!! ಬಾಗ – ೨

ಆಗಲೇ ಪವಿತ್ರ ಮತ್ತು ಮಗುವಿನ ಕೊಲೆ ನಡೆದು ಎರಡು ದಿನಗಳಾಗಿತ್ತು. ಎಸ್ಐ  ಕ್ರಾಂತಿಯವರಿಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹಾಡು ಹಗಲಲ್ಲೇ ಕೊಲೆ ನಡೆದಿದ್ದರಿಂದ ಎಲ್ಲ ಪತ್ರಿಕೆಗಳಲ್ಲಿ ವರದಿಯಾಗಿ ಜನರು ಭಯಬೀತರಾಗಿದ್ದರು.  ಊಹಾಪೋಹಗಳು ಒಬ್ಬರಿಂದ ಒಬ್ಬರಿಗೆ ಹರಡಿ,  ಬೇರೆ ಬೇರೆ ರೀತಿಯ ಕಥೆಗಳು ಹುಟ್ಟಿಕೊಳ್ಳತೊಡಗಿದ್ದವು.   ಎಸ್ಐ  ಕ್ರಾಂತಿಯವರಿಗೆ  ಅವರ ಮೇಲಿನ ಅಧಿಕಾರಿಗಳಿಂದ  ಒತ್ತಡ ಜಾಸ್ತಿಯಾಗತೊಡಗಿತು.   ಛಾಯಾಚಿತ್ರಗಳು,  ಮರಣೋತ್ತರ ವರದಿ, ವಿಧಿ ವಿಜ್ಞಾನ ವರದಿ, ರಘುವಿನ ಹೇಳಿಕೆ, ಅಕ್ಕ ಪಕ್ಕದ ಮನೆಯವರ ಹೇಳಿಕೆ, ಮಾಹಿತಿದಾರರು ಕೊಟ್ಟ ಮಾಹಿತಿಗಳು ಹೀಗೆ ಎಲ್ಲವನ್ನು ಮೇಜಿನ ಜೋಡಿಸಿಕೊಂಡು ಕೂಲಂಕುಷವಾಗಿ … Continue reading ಮಧ್ಯಾಹ್ನ ಮೂರು ಗಂಟೆ!! ಬಾಗ – ೨

ಮಧ್ಯಾಹ್ನ ಮೂರು ಗಂಟೆ!!

ಸಂಜೆ ಕೆಲಸ ಮುಗಿಸಿ ಬಂದ  ರಘು,  ಎಷ್ಟು ಹೊತ್ತು  ಮನೆಯ ಬೆಲ್ ಒತ್ತಿದರು,  ಒಳಗಿದ್ದ ಪವಿತ್ರ ಬಾಗಿಲು ತೆಗೆಯಲಿಲ್ಲ. ರಘುವಿಗೆ ಸ್ವಲ್ಪ ಗಾಬರಿಯಾಯಿತು, ಯಾಕಂದರೆ ಮಗು ಮಲಗಿದ್ದರೆ ರಘು ಬರುವ ಸಮಯದಲ್ಲಿ  ಬಾಗಿಲ ಬಳಿಯಲ್ಲೇ ಕುಳಿತಿರುತ್ತಿದ್ದಳು. ಮಗು ಮಲಗಿಲ್ಲ ಅಂದರೆ ಮಗುವನ್ನು ಎತ್ತಿಕೊಂಡು ಬಂದು ಬಾಗಿಲು ತೆಗೆಯುತ್ತಿದಳು. ಆದರೆ ಇವತ್ತು ಯಾಕೆ ಎಷ್ಟು ಬೆಲ್ ಮಾಡಿದರು ಬಾಗಿಲು ತೆಗೆಯುತ್ತಿಲ್ಲ ಅಂತ ಗೊತ್ತಾಗದೆ ಕಿಟಕಿಯಿಂದ ಬಗ್ಗಿ  ಮನೆಯ ಒಳಗಡೆ  ನೋಡಿದ. ಒಳಗಡೆ ಹಾಲಿನ ಅರ್ಧಭಾಗ ಮಾತ್ರ ಕಾಣಿಸುತ್ತಿತ್ತು. ಅಡುಗೆ ಮನೆಯಲ್ಲಿ ಮಲಗಿದಾಗ ಕಾಲು ಚಾಚುವಂತೆ ಪವಿತ್ರಳ ಕಾಲು … Continue reading ಮಧ್ಯಾಹ್ನ ಮೂರು ಗಂಟೆ!!

ನಾ ನಟಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ !!

ಅವತ್ತು ಊರಲೆಲ್ಲಾ ಬರಿ ಅದೇ  ಸುದ್ದಿ,  ಯಾರೋ ಸಿನಿಮಾ ಚಿತ್ರೀಕರಣಕ್ಕೆ  ಬರುತ್ತಾ  ಇದ್ದಾರೆ ಅಂತ.  ಕನ್ನಡ ಸಿನೆಮಾದ ಚಿತ್ರೀಕರಣ ಅಂತೇ,    ಸಾಹಸಮಯ ಚಿತ್ರ ಅಂತೇ,  ನಾಗಭರಣ ಅವರ ನಿರ್ದೇಶನ ಅಂತೇ, ಶ್ರೀಧರ ಹೀರೊ ಅಂತೇ, ದತ್ತಾತ್ರೇಯ ಕೇಡಿ ಅಂತೇ ,... ಹೀಗೆ ಅಂತೇ ಕಂತೆಗಳು ಹರಿದಾಡುತ್ತಿದ್ದವು.  ನಾನು ಯಾವತ್ತೂ ಸಿನಿಮಾ ಚಿತ್ರೀಕರಣ  ನೋಡಿರಲಿಲ್ಲ, ಹಾಗಾಗಿ ಚಿತ್ರೀಕರಣ  ನೋಡಲು ಸಿಕ್ಕಾಪಟ್ಟೆ ಉತ್ಸಾಹದಲ್ಲಿ ಇದ್ದೆ.  ಮೊದಲಿನಿಂದಲೂ ನನಗೆ  ಸಿನಿಮಾ ನೋಡುವುದೆಂದರೆ ಬಹಳ ಇಷ್ಟ.  ಸಾಹಸಮಯ ಸಿನಿಮಾಗಳೆಂದರೆ ಮುಗಿತು, ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆ. ಹೇಗೆ ಸಿನಿಮಾ ಚಿತ್ರೀಕರಣ ಮಾಡುತ್ತಾರೆ ಅನ್ನುವ ಕುತೂಹಲ ಪ್ರತಿ ಸಿನಿಮಾ ನೋಡುವಾಗಲೂ ಇರುತ್ತಿತ್ತು. ಅಂತೂ ಇಂತೂ … Continue reading ನಾ ನಟಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ !!

ಮಿಸ್ಡ್ ಕಾಲ್ !!

ಬಸ್ ನಿಲ್ದಾಣದಲ್ಲಿ  ಚಂದ್ರು ತನ್ನ ಕೈ ಗಡಿಯಾರದ ಕಡೆ ಪದೇ ಪದೇ ನೋಡುತ್ತಾ, " ಇಷ್ಟೋತ್ತಿಗೆ ಬಸ್ ಬರಬೇಕಿತ್ತಲ್ವಾ? ಈ ಬಿಎಂಟಿಸಿ ಬಸ್ ಯಾವಾಗಲು ಹಿಂಗೇನೆ,  ಯಾವಾಗ ಬೇಗ ಹೋಗಬೇಕೋ ಅವಾಗ ತಡವಾಗಿ ಬರುತ್ತೆ" ಅಂತ ಗೊಣಗುತ್ತ ಬಸ್ ಬರುವ ದಿಕ್ಕನ್ನು ನೋಡುತ್ತಾ  ನಿಂತಿದ್ದನು.  ಅವನ ಅಕ್ಕಪಕ್ಕದಲ್ಲಿ ಇವನಂತೆ ಬರುವ ಬಸ್ ಗೆ ಕಾಯುತ್ತ  ಹಲವರು ನಿಂತಿದ್ದರು.  ಆಗ  ಎದುರುಗಿದ್ದ ರಸ್ತೆಯ ಇನ್ನೊಂದು ಭಾಗದಿಂದ ರಸ್ತೆಯ ವಿಭಜಕವನ್ನು ಹಾರಿ ಒಬ್ಬ ವ್ಯಕ್ತಿ ಚಂದ್ರು ಕಾಯುತ್ತಿದ್ದ ಬಸ್ ನಿಲ್ದಾಣಕ್ಕೆ ಬಂದನು. ತುಂಬ … Continue reading ಮಿಸ್ಡ್ ಕಾಲ್ !!

ಹವಾಯಿ ಚಪ್ಪಲಿ !!!

ದಾರಿಯಲ್ಲಿ ಅಪ್ಪ ಮತ್ತು ಅವನ ನಾಲಕ್ಕು ವರುಷದ ಮಗ  ನಡೆದುಕೊಂಡು ಹೋಗುತ್ತಿದ್ದರು. ಮಗ  ತನ್ನ ಅಪ್ಪನ ಕೈ ಹಿಡಿದುಕೊಂಡು ಕುಣಿಯುತ್ತ, ಅಪ್ಪನ ಕೈಯನ್ನು ಜಗ್ಗುತ್ತಾ , ಆಟವಾಡಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ. ಅವತ್ತು ಮಗನ  ಸಂತೋಷಕ್ಕೆ ಪಾರವೇ ಇರಲಿಲ್ಲ.  ಯಾಕಂದರೆ   ಅಪ್ಪ ಅವನಿಗೆ ಹೊಸ ಚಪ್ಪಲಿ ಕೊಡಿಸುತ್ತೇನೆ ಅಂತ ಸಂತೆಗೆ   ಕರೆದುಕೊಂಡು ಹೋಗುತ್ತಿದ್ದರು. ಅದುವರೆಗೆ ಮಗ  ಯಾವತ್ತು ಚಪ್ಪಲಿಯೇ ಹಾಕಿರಲಿಲ್ಲ, ಹಾಗಾಗಿ ಅಪ್ಪ ಕೊಡಿಸುವ ಚಪ್ಪಲಿ ಹೇಗಿರಬಹುದು  ಎಂಬ ಕಾತುರ ಅವನನ್ನು ಹಾಗೆ ಕುಣಿಸುತ್ತಿತ್ತು.  ಹಳ್ಳಿಯಿಂದ ಸುಮಾರು ನಾಲ್ಕು ಕಿಲೋಮೀಟರು ನಡೆದು,  ಸಂತೆ ನಡೆಯುತ್ತಿದ್ದ್ದ ಜಾಗಕ್ಕೆ ಇಬ್ಬರು ಬಂದರು.  ಮಗ ಮನೆಯಲ್ಲಿ … Continue reading ಹವಾಯಿ ಚಪ್ಪಲಿ !!!

ಅವರುಗಳು ಹಾಡುತ್ತಿದ್ದ ಹಾಡುಗಳ ಹಿಂದೆ ಇದ್ದ ರಹಸ್ಯ !!

ಹರ್ಷ ಹುಟ್ಟಿ ಬೆಳೆದಿದ್ದೆಲ್ಲ ನಗರ ಪ್ರದೇಶದಲ್ಲೇ ಆಗಿದ್ದರಿಂದ ಅವನಿಗೆ ಹಳ್ಳಿಯ ಜೀವನ ಶೈಲಿ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ.  ಯಾವಾಗಲಾದರೂ ಅಪ್ಪ ಅಮ್ಮನ ಜೊತೆಗೆ  ಮದುವೆ ಅಥವಾ ಗೃಹಪ್ರವೇಶ ಅಂತ ಹಳ್ಳಿಗೆ ಹೋದರು,  ಬೆಳಿಗ್ಗೆ ಹೋಗಿ ಸಂಜೆ ಅಲ್ಲಿಂದ ಹೊರಟು ಬರುತ್ತಿದ್ದ.  ಹರ್ಷ ಯಾವತ್ತೂ ಹಳ್ಳಿಗಳಲ್ಲಿ ಒಂದೆರಡು ದಿವಸ ಕೂಡ  ಉಳಿದುಕೊಂಡಿರಲಿಲ್ಲ. ಒಂದು ದಿನ ಹಳ್ಳಿಯಲ್ಲಿದ್ದ ಅವನ ದೊಡ್ಡಪ್ಪನ ಮಗಳ ಮದುವೆ  ನಿಶ್ಚಯ ಆಯಿತು.  ದೊಡ್ಡಪ್ಪ   ಮದುವೆಯನ್ನು ತಮ್ಮ ಹಳ್ಳಿಯ ಮನೆಯಲ್ಲಿ ಮಾಡುವುದು ಅಂತ ತೀರ್ಮಾನ ಮಾಡಿದ್ದರು. ಹಾಗಾಗಿ ಮದುವೆಗೆ ಮೂರು ದಿವಸ ಮುಂಚೆನೇ ಬರಬೇಕು, ಅಂತ ದೊಡ್ಡಪ್ಪ ಹರ್ಷನ ಅಪ್ಪನಿಗೆ ತಾಕೀತು … Continue reading ಅವರುಗಳು ಹಾಡುತ್ತಿದ್ದ ಹಾಡುಗಳ ಹಿಂದೆ ಇದ್ದ ರಹಸ್ಯ !!

ಒಂದು ಉಪ್ಪಿಟ್ಟಿನ ಕಥೆ…

ರಾಜೀವನ ಹೆಂಡತಿ ಉಮಾ  ಒಂದು ದಿನದ ಮಟ್ಟಿಗೆ ಒಬ್ಬಳೇ ಯಾರದೋ ನೆಂಟರ ಮದುವೆಗೆ ಊರಿಗೆ ಹೋಗಿದ್ದಳು. ಬೆಳೆಗ್ಗೆ  ಊರಿಗೆ ಹೋಗುವ ಮುಂಚೆ  ರಾಜೀವನಿಗೆ ತಿಂಡಿ ಮತ್ತು ಮದ್ಯಾಹ್ನಕ್ಕೆ ಊಟದ ಡಬ್ಬಿ  ಕೂಡ ತಯಾರು ಮಾಡಿಟ್ಟು ಹೋಗಿದ್ದಳು.  ಹೇಗಿದ್ದರೂ ಸಂಜೆ ಮನೆಗೆ ವಾಪಸು ಬರುತ್ತೀನಿ,  ಬಂದ ಮೇಲೆ ಅನ್ನ ಒಂದು ಮಾಡಿದರಾಯಿತು,  ಮಾಡಿದ ಸಾಂಬಾರು ಹೇಗೂ ಇರತ್ತಲ್ಲ,  ಅಂತ ಅವಳ ಯೋಜನೆಯಾಗಿತ್ತು.  ರಾಜೀವ ಅವತ್ತಿನ ಕೆಲಸ ಮುಗಿಸಿ, ಸಂಜೆ ಮನೆಗೆ ಬಂದು ಕೈ ಕಾಲು ತೊಳೆದು ಟಿವಿ ನೋಡುತ್ತಾ ಕುಳಿತ.  ರಾಜೀವ  ಮದ್ಯಾಹ್ನ  ಬೇಗ ಊಟ ಮಾಡಿದ್ದರಿಂದ  ತಿಂದಿದ್ದೆಲ್ಲ  ಕರಗಿ  ಹಸಿವಾಗಿ ಹೊಟ್ಟೆ ಚುರುಗುಡುತ್ತಿತ್ತು. ತಿಂಡಿ ಏನಾದರೂ … Continue reading ಒಂದು ಉಪ್ಪಿಟ್ಟಿನ ಕಥೆ…

ಯಾರೋ ಪ್ರೋಕ್ಷಣೆ ಮಾಡಿದ್ದರು … ಆದರೆ ತೀರ್ಥದಿಂದ ಅಲ್ಲ!!

ಅವತ್ತು ಇಡೀ ಮನೆ ಬಹಳ ಚೆನ್ನಾಗಿ ಹೂವು, ಮಾವಿನ ಸೊಪ್ಪಿನಿಂದ  ಅಲಂಕಾರಗೊಂಡು  ಕಂಗೊಳಿಸುತ್ತಿತ್ತು. ಮದುವೆ ಮನೆಯ ಸಡಗರ ಎಲ್ಲಡೆ ಕಾಣಿಸುತ್ತಿತ್ತು. ಹುಡುಗರೆಲ್ಲ  ಬಹಳ ಗಡಿಬಿಡಿಯಿಂದ  ಒಂದೊಂದು ಕೆಲಸ ವಹಿಸಿಕೊಂಡು ಓಡಾಡುತ್ತಿದ್ದರು. ಮನೆಯ ಪಕ್ಕದಲ್ಲಿಯೇ ಇದ್ದ ದೇವಸ್ಥಾನದಲ್ಲಿ  ಮದುವೆ ಮಾಡುವುದು ಅಂತ ನಿರ್ಧಾರ ಆಗಿದ್ದರಿಂದ,  ಕಲ್ಯಾಣ ಮಂಟಪದ ಬದಲು ಮನೆಯಲ್ಲಿಯೇ ಎಲ್ಲ ನೆಂಟರು ಉಳಿದುಕೊಳ್ಳುವ  ವ್ಯವಸ್ಥೆಯನ್ನು ಮಾಡಿದ್ದರು. ಮರು ದಿನ ಮದುವೆ ಇದ್ದುದ್ದರಿಂದ ಒಬ್ಬೊಬ್ಬರೇ ನೆಂಟರು ಊರಿನಿಂದ  ಮನೆಗೆ ಬರುತ್ತಿದ್ದರು. ರಮೇಶ ಮತ್ತು ಅವನ ಸ್ನೇಹಿತರು ಮನೆಗೆ ನೀರನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿದ್ದರು. ನೀರು ತರಲು … Continue reading ಯಾರೋ ಪ್ರೋಕ್ಷಣೆ ಮಾಡಿದ್ದರು … ಆದರೆ ತೀರ್ಥದಿಂದ ಅಲ್ಲ!!