ಬ್ಯಾಂಕ್ ಲೂಟಿಯಲ್ಲಿ ಅವರು ದೋಚಿದ್ದು ಒಟ್ಟು ಎಂಬತ್ತು ಕೆಜಿ ಚಿನ್ನ!!

ಅವತ್ತು  ೩೧ ಡಿಸೆಂಬರ್ 2007 ಬೆಳಿಗ್ಗೆ  ಕೇರಳದ ಮಲಪ್ಪುರಂ ಜಿಲ್ಲೆಯ ಚೆಲಂಬ್ರ ಎಂಬ ಊರಿನಲ್ಲಿರುವ ಕೇರಳ ಗ್ರಾಮೀಣ     ಬ್ಯಾಂಕಿನವರು ಬೆಳಿಗ್ಗೆ  ಬ್ಯಾಂಕ್  ಒಳಗಡೆ ಬಂದು, ಲಾಕರ ( ಸ್ಟ್ರಾಂಗ್ ರೂಮ್)  ಕೋಣೆ ತೆರೆದು ನೋಡಿದಾಗ,  ಅಲ್ಲಿ ಕಂಡ ದೃಶ್ಯ ಅವರನ್ನು   ದಂಗು ಬಡಿಸಿಬಿಟ್ಟಿತ್ತು.  ಕಳ್ಳರು ಬ್ಯಾಂಕಿನ ಎಲ್ಲ ಲಾಕರುಗಳ ಜೊತೆಗೆ ಇದ್ದ ಬದ್ದ ದುಡ್ಡನ್ನೆಲ್ಲ  ಲೂಟಿ ಮಾಡಿಕೊಂಡು ಹೋಗಿದ್ದರು.  ಅದು ಅಂತಿಂತ ಲೂಟಿ ಆಗಿರಲಿಲ್ಲ,  ಬ್ಯಾಂಕಿನವರು ಕೊಟ್ಟ ಲೆಕ್ಕದ ಪ್ರಕಾರ ಕಳ್ಳರು ದೋಚಿದ್ದು ಎಂಬತ್ತು ಕೆಜಿ ಚಿನ್ನ ಮತ್ತು  ಐವತ್ತು ಲಕ್ಷ ರೂಪಾಯಿಗಳು. ಆಗಿನ ಚಿನ್ನದ ಬೆಲೆಯ  ಪ್ರಕಾರ ಹತ್ತಿರ … Continue reading ಬ್ಯಾಂಕ್ ಲೂಟಿಯಲ್ಲಿ ಅವರು ದೋಚಿದ್ದು ಒಟ್ಟು ಎಂಬತ್ತು ಕೆಜಿ ಚಿನ್ನ!!

ಕಾನ್ ಪತ್ತಿ ಮಾರ್ ಶಂಕರಿಯ !! ನೇಣಿಗೇರುವ ಮುನ್ನ ಹೇಳಿದ್ದು ಏನು ಗೊತ್ತಾ ?

ಸಾವಿರದ ಒಂಬೈನೂರ ಎಪ್ಪತ್ತೇಳರಿಂದ  ಎಪ್ಪತ್ತೆಂಟರ ಸಮಯದಲ್ಲಿ ರಾಜಸ್ತಾನದ  ಜೈಪುರದಲ್ಲಿ ವಾಸಿಸುತ್ತಿದ್ದ ಜನರು ಹಗಲು ಹೊತ್ತು ಹೊರಗೆ ಹೋಗಲು ಭಯ ಪಡುವಂತ ವಾತಾವರಣವಿತ್ತು.  ಕೇವಲ ಒಂದು ವರುಷದಲ್ಲಿ  ಜೈಪುರದಲ್ಲಿ  ಕೊಲೆಯಾಗಿ ಸತ್ತವರ ಸಂಖ್ಯೆ ಒಂದಲ್ಲ ಎರಡಲ್ಲ  ಬರೋಬ್ಬರಿ ಎಪ್ಪತ್ತೇಳು.   ಜನರು ಭಯಬೀತರಾಗಿದ್ದರು,  ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ಚಿತ್ರ ವಿಚಿತ್ರ ಕಥೆಗಳು ಹುಟ್ಟಿಕೊಂಡಿದ್ದವು.  ಈಗಿನ ತರಹ ಆಗ ನ್ಯೂಸ್ ಚಾನೆಲ್ ಇರಲಿಲ್ಲ ಅದೇ ಪುಣ್ಯ.  ಪ್ರತಿಯೊಬ್ಬರನ್ನು ಒಂದೇ ರೀತಿಯಾಗಿ ಕೊಲೆಮಾಡಿದ್ದರು ಆ ಕೊಲೆಗಾರರು.  " ಕುತ್ತಿಗೆ ಹಾಗು ಕಿವಿಯ ಕೆಳಗಡೆ ಬಾಗಕ್ಕೆ"  ಯಾವುದೊ … Continue reading ಕಾನ್ ಪತ್ತಿ ಮಾರ್ ಶಂಕರಿಯ !! ನೇಣಿಗೇರುವ ಮುನ್ನ ಹೇಳಿದ್ದು ಏನು ಗೊತ್ತಾ ?

ಜಿಮ್ ಪು(ಹೈ)ರಾಣ !! !!

ಅಂಗಿ ಪ್ಯಾಂಟಿನೊಳಗೆ ಸೇರಿಸಿ , ಹೊಟ್ಟೆಯನ್ನು  ಪ್ಯಾಂಟ್ ಸಮೇತ ಎಳೆದು  ಬೆಲ್ಟ್ ನಿಂದ ಕಟ್ಟಿದರೂ , ಹಾಕಿದ ಬೆಲ್ಟ್ ಅನ್ನೇ ತಳ್ಳಿ ಹೊಟ್ಟೆ ಹೊರಗಡೆ ಕಾಣಿಸತೊಡಗಿತು ಅಂದರೆ ಸಾಕು,   ಮನೆಯಲ್ಲಿ ನಿದಾನವಾಗಿ ಹೆಂಡತಿ  ಹೊಟ್ಟೆ ಬರುತ್ತಾ ಇದೆ,  ವಾಕ್ ಶುರು ಮಾಡಿ ಅಂತ ಹೇಳಲು ಶುರು ಮಾಡುತ್ತಾಳೆ. ಅದನ್ನು ಕೇಳಿದರು  ಕೇಳದೆ ಇದ್ದ ಹಾಗೆ  ಇರುತ್ತೇವೆ.  ಆಫೀಸ್ನಲ್ಲಿ ಆಗಲೇ ಅನೇಕರ  ಹೊಟ್ಟೆ ಮುಂದೆ ಬಂದಿರುವುದರಿಂದ ನಮಗೆ ಯಾರು ಕೇಳುವುದು ಇಲ್ಲ ಮತ್ತು ಅದರ ಬಗ್ಗೆ ಗಮನ ಕೊಡುವುದು ಇಲ್ಲ. ಇನ್ನು  ಜೊತೆಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಮುಂದೆ … Continue reading ಜಿಮ್ ಪು(ಹೈ)ರಾಣ !! !!

ಹನಿಗವನಗಳು

ಆಗಮನ  ಮದುವೆಯ ಹೊಸತರಲ್ಲಿ  ಬಿಡದಂತೆ ಕಣ್ಣರಳಸಿ  ನೋಡುತ್ತಿದ್ದೆ  ಆದಾಗೆಲ್ಲ  ನನ್ನ ಕಡೆ  ಅವಳ   ಆಗಮನ  ವರುಷ ಮುಗಿಯುವಷ್ಟರಲ್ಲಿ    ಮೊದಲಿನಂತೆ ಅವಳನರಸಿ ನೋಡುವುದು  ಬಿಟ್ಟಿದ್ದೆ  ಕೇಳಿದಳಲ್ಲ  ಕೊಡುತ್ತಿಲ್ಲ  ಯಾಕೆ ನನ್ನ ಕಡೆ   ಆ ' ಗಮನ ' ಖರ್ಚು    ಹೆಂಡತಿಗೆ ಕೇಳಿದೆ ಯಾಕೆ  ಖರ್ಚು    ಅನವಶ್ಯಕವಾಗಿ  ಉತ್ತರ ಕೊಟ್ಟಳು ಸುಮ್ಮನಿರಿ  ಮಾಡುತ್ತಿರುವ  ಖರ್ಚೆಲ್ಲ  ನಿಮ್ಮ ಅವಶ್ಯಕತೆಗಾಗಿ.   ಜಗಳ ಸಣ್ಣ ಪುಟ್ಟದಕ್ಕೆಲ್ಲ ಜಗಳವೇ ನಡೆಯಲ್ಲ  ನಮ್ಮಿಬ್ಬರಲ್ಲಿ  ಕಣ್ಣು ಬಿಟ್ಟರೆ ಅವಳು ಸಾಕಲ್ಲ  ಜಗಳ ಇನ್ನೆಲ್ಲಿ.  ಮುಂಗುರುಳು ಮೊದಲು  ಆಡುತ್ತಿದ್ದೆ ಅವಳ  ಮುಂಗುರುಳೊಂದಿಗೆ  ಈಗ ಆಡುತ್ತಿದ್ದೇನೆ … Continue reading ಹನಿಗವನಗಳು

ಹಾಗೆ ಹೀಗೆ ಎಂದು ಅಂದುಕೊಳ್ಳುವುದು ಏಕೆ? ನೇರವಾಗಿ ಕೇಳಿಬಿಡಿ.

ಬೆಳಿಗ್ಗೆ ಎದ್ದು ಮೊಬೈಲ್ ಪರದೆ ತೆರೆದಾಗ ಫೇಸ್ಬುಕ್ ನಲ್ಲಿ ಕೆಲವು ಫ್ರೆಂಡ್ ರಿಕ್ವೆಸ್ಟ್ ಬಂದಿದ್ದವು. ಯಾರು ಅಂತ ನೋಡುವಾಗ ಒಬ್ಬ ಸ್ನೇಹಿತೆಯ ರಿಕ್ವೆಸ್ಟ್ ನೋಡಿ ಬಹಳ ಆಶ್ಚರ್ಯ ಆಯಿತು.  ಬರೋಬ್ಬರಿ ಇಪ್ಪತ್ತೈದು  ವರುಷಗಳ ಹಿಂದಿನ ಪರಿಚಯ ಅವಳದು,  ಹೈಸ್ಕೂಲು ಮತ್ತು ಕಾಲೇಜು ಓದುವಾಗ ನನ್ನ  ತರಗತಿಯಲ್ಲೇ ಓದುತ್ತಿದ್ದಳು.  ನನ್ನ ಆತ್ಮೀಯ ಸ್ನೇಹಿತೆ ಅಂತಾನೂ ಹೇಳಲಿಕ್ಕೆ ಆಗಲ್ಲ. ನನ್ನ ಆತ್ಮೀಯ  ಸ್ನೇಹಿತ, ಸ್ನೇಹಿತೆಯರ ಜೊತೆಗೆ ಇದ್ದಾಗ ಅವಳು ಕೂಡ ಅಲ್ಲಿ ಇದ್ದರೆ ಆಗಾಗ ನನ್ನ ಜೊತೆ ಮಾತನಾಡುತ್ತಿದ್ದಳು ಅಷ್ಟೇ.  ಕಾಲೇಜು ದಿನಗಳು ಮುಗಿಯುವ ಸಮಯದಲ್ಲಿ ಇದ್ದಕ್ಕಿದ್ದಂತೆ ನನ್ನ ಜೊತೆ ಮಾತು … Continue reading ಹಾಗೆ ಹೀಗೆ ಎಂದು ಅಂದುಕೊಳ್ಳುವುದು ಏಕೆ? ನೇರವಾಗಿ ಕೇಳಿಬಿಡಿ.

ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ? ಬಾಗ ೨

ಒಗಟು ಬಿಡಿಸುವಾಗ ಒಂದೇ ಪದಕ್ಕೆ ಅದೆಷ್ಟು ಒಗಟುಗಳು ಇವೆಯಲ್ಲ ಅನಿಸುತ್ತೆ. ಎರಡನೇ ಬಾಗದಲ್ಲಿ ಮತ್ತೆ ಐವತ್ತು ಒಗಟುಗಳಿವೆ. ಬಿಡಿಸಲು ಪ್ರಯತ್ನಿಸಿ.   ೧. ಬಣ್ಣದ ಸೀರೆ ಉಟ್ಕೊಂಡು ಮಣ್ಣಲ್ಲಿ ಕುಂತವಳೇ  -  ?  ೨. ಹಗ್ಗ  ಹಾಸಿದೆ, ಕೋಣ  ಮಲಗಿದೆ - ? ೩. ಬಿಳಿ ಕುದುರೆ, ಹಸಿರು ಬಾಲ - ? ೪. ಚಿಕ್ಕ ಮನೆಗೆ ಚಿನ್ನದ ಬೀಗ -  ?  ೫. ಮುಳ್ಳು ಉಂಟು  ಮರವಲ್ಲ, ಅಂಕೆಯುಂಟು ಪುಸ್ತಕವಲ್ಲ, ಚಕ್ರವಿದೆ ಗಾಡಿಯಲ್ಲ, ಗಂಟೆ ಇದೆ ದೇವಸ್ಥಾನವಲ್ಲ - ?  … Continue reading ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ? ಬಾಗ ೨

ಗೋಲಗಪ್ಪ ಮತ್ತು ಮೊದಲ ಪ್ರೀತಿ !!

ಪ್ರಜ್ವಲ್ ಆಗಾಗ ಮನೆ ಹತ್ತಿರವೇ   ಸಿಗುತ್ತಿದ್ದ   ಗೋಲಗಪ್ಪ ತಿನ್ನಲು ಹೋಗುತ್ತಿದ್ದ.  ಗೋಲಗಪ್ಪ ಮಾರುವವನು ಸರಿಯಾಗಿ ಮೂರೂವರೆಗೆ ಅವನ ಮನೆ ಹತ್ತಿರ ಇದ್ದ ಒಂದು ಮರದ ಕೆಳಗೆ ಬಂದು ನಿಲ್ಲುತ್ತಿದ್ದ.  ವಾರದಲ್ಲಿ ಎರಡು ಬಾರಿಯಾದರೂ ಪ್ರಜ್ವಲ್ ಗೋಲಗಪ್ಪ ತಿನ್ನಲು ಅವನ ಹತ್ತಿರ ಹೋಗುತ್ತಿದ್ದ.  ಒಮ್ಮೊಮ್ಮೆ ಅವನ ಕಾಲೇಜು ಸ್ನೇಹಿತರು ಎಲ್ಲ ಸೇರಿ ಅವನ ಹತ್ತಿರ ಗೋಲಗಪ್ಪ ತಿನ್ನಲು ಹೋಗುತ್ತಿದ್ದರು.  ಗೋಲಗಪ್ಪ ಮಾರುವವನಿಗೆ   ಕನ್ನಡ ಮಾತನಾಡಲು ಅಷ್ಟಾಗಿ ಬರುತ್ತಿರಲಿಲ್ಲ.  ತನಗೆ ಬರುತ್ತಿದ್ದ ಹರುಕು ಮುರುಕು ಕನ್ನಡದಲ್ಲೇ ಮಾತನಾಡುತ್ತಿದ್ದ. ಅವನಿಗೆ ಹೆಚ್ಚೆಂದರೆ ಹತ್ತೊಂಬತ್ತರಿಂದ ಇಪ್ಪತ್ತು ವಯಸಾಗಿತ್ತು. … Continue reading ಗೋಲಗಪ್ಪ ಮತ್ತು ಮೊದಲ ಪ್ರೀತಿ !!

ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ?

ಹಿಂದೆ ನಮ್ಮ ಆಟಗಳಲ್ಲಿ ಒಗಟು ಬಿಡಿಸುವುದು ಕೂಡ ಒಂದು ಆಟವಾಗಿತ್ತು. ಈಗಿನ ಮಕ್ಕಳು ಅದನ್ನೇ ರಿಡ್ಡಲ್ಸ್ ಅಂತ ಇಂಗ್ಲಿಷಿನ ಕೆಲವು ಒಗಟುಗಳನ್ನು ನಮಗೆ ಕೇಳುತ್ತಾರೆ. ಮಕ್ಕಳಿಗೋಸ್ಕರ  ಕನ್ನಡದ  ಒಗಟುಗಳನ್ನು ಸಂಗ್ರಹ ಮಾಡಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ.   ನಿಮ್ಮ ಮಕ್ಕಳೊಂದಿಗೆ ಬಿಡುವಿನ ಸಮಯದಲ್ಲಿ ಅವರಿಗೆ ಕೇಳಿ ಅವರೊಂದಿಗೆ ಕಾಲ ಕಳೆಯಿರಿ. ಮೊದಲ ಬಾಗದಲ್ಲಿ ಐವತ್ತು ಒಗಟುಗಳಿವೆ ಹಾಗು ಅದರ ಉತ್ತರಗಳನ್ನೂ  ಕೆಳಗಡೆ ಅಂಕಿಗಳ ಕ್ರಮಾನುಸಾರ ಕೊಟ್ಟಿದ್ದೇನೆ. ಉತ್ತರ ನೋಡುವ ಮೊದಲು ಬಿಡಿಸಲು ಪ್ರಯತ್ನಿಸಿ.  ೧. ಎರಡು ಮನೆಗೆ ಒಂದೇ … Continue reading ಒಗಟುಗಳು – ಬಿಡಿಸುವ ಪ್ರಯತ್ನ ಮಾಡುವಿರಾ ?

ಇಂತವರು ಸಮಾಜಕ್ಕೆ ಬೇಕಲ್ಲವೇ?

ಯಾವುದೋ ಒಬ್ಬ ಪ್ರಸಿದ್ಧ ನಟನೋ ಅಥವಾ ಆಟಗಾರನೋ  ದೀಪಾವಳಿಗೆ ಪಟಾಕಿ ಹೊಡಿಬೇಡಿ ಅಂತ ಹೇಳಿದ ತಕ್ಷಣ ನಮ್ಮಲ್ಲಿ ಕೋಪ, ಅಸಹನೆ ಉಕ್ಕಿ ಬರುತ್ತೆ, ಇವನ್ಯಾರು ಪಟಾಕಿ ಹೊಡಿಬೇಡಿ ಅಂತ ಹೇಳೋದು, ಅವರ  ಮದುವೇಲಿ ಪಟಾಕಿ ಹೊಡೆದಾಗ ಪರಿಸರ ಹಾಳಾಗಿರಲಿಲ್ಲ, ಈಗ ಮಾತ್ರ ಆಗುತ್ತಾ? ಅಂತ ಅವನನ್ನು ಉಗಿಯುತ್ತೀವಿ. ಇನ್ಯಾರೋ  ಪ್ರೊಫೆಸರ್ ನಾವು ಇಷ್ಟು  ದಿವಸ ನಂಬಿಕೊಂಡು, ಪೂಜಿಸಿಕೊಂಡು ಬಂದ ದೇವರನ್ನು ಬೈದಾಗ ಅವನ ಮೇಲೆ ಕೋಪ ಉಕ್ಕಿ ಬರುತ್ತೆ, ಆತ ಹೇಳುವುದನ್ನು ಟಿವಿ ಯಲ್ಲಿ,  ಸಾಮಾಜಿಕ ಜಾಲತಾಣಗಳಲ್ಲಿ  ನೋಡಿ ಅವನನ್ನು ಮನಸಾರೆ ಬೈಯುತ್ತೇವೆ.  ಮೇಲಿನ … Continue reading ಇಂತವರು ಸಮಾಜಕ್ಕೆ ಬೇಕಲ್ಲವೇ?

ಗುಂಡ ಕಳೆದುಹೋದಾಗ…

ಗುಂಡನ   ಇಡೀ ಮೈ ಗಡಗಡನೆ ಚಳಿಗೆ ನಡುಗುತ್ತಿತ್ತು.  ಅವನಿಗೆ  ಹಸಿವಿನಿಂದ  ಹೊಟ್ಟೆಯಲ್ಲಿ ಸಂಕಟ ಶುರುವಾಗಿ, ಒಂದು ಮರದ ಕೆಳಗಡೆ ಬಂದು ನಿಂತ.  ಅವನಿಗೆ ಬೆಳೆಗ್ಗಿನಿಂದ  ತಾನು ಇದ್ದ  ಮನೆಯ ದಾರಿ ಯಾಕೋ ಎಷ್ಟು ತಿರುಗಿದರು ಸಿಗುತ್ತಿರಲಿಲ್ಲ. ದಾರಿ ತಪ್ಪಿ ಮನೆಗೆ ಹೋಗಲು ಗೊತ್ತಾಗದೆ ಕಳೆದುಹೋಗಿದ್ದ.   ಜೋರಾಗಿ ಶುರುವಾಗಿದ್ದ ಮಳೆ ಕೊಂಚ ನಿಂತಿದ್ದರೂ,   ಮರದ ಎಲೆಗಳ ಮೇಲಿದ್ದ  ಆಗಾಗ ನೀರು ತೊಟ್ಟಿಕ್ಕಿ ಗುಂಡನ  ಮೇಲೆ ಬೀಳುತ್ತಿತ್ತು.  ಮೈ ಮೇಲೆ ನೀರು ಬಿದ್ದಾಗೆಲ್ಲ ಚಳಿ ಆಗಿ, ಸ್ವಲ್ಪ ಸ್ವಲ್ಪ ಆ ಕಡೆ ಈ ಕಡೆ ಜರುಗುತ್ತಾ,   ಅಲ್ಲಿಯೇ ಮರದ ಕೆಳಗಡೆ  ನಡುಗುತ್ತ ಹಾಗೆ ಮುದುಡಿ … Continue reading ಗುಂಡ ಕಳೆದುಹೋದಾಗ…