ನಾಯಿ ಪಾಡು !!

ನಿಯತ್ತಿಗೆ ಇನ್ನೊಂದು ಹೆಸರು ಅಂದಾಗ ಮೊದಲು ನಮಗೆ ನೆನಪಾಗುವುದು " ನಾಯಿ". ಅದೇ ರೀತಿ ನಮ್ಮಲ್ಲಿ ಒಬ್ಬ ಮನುಷ್ಯನಿಗೆ ತೊಂದರೆ ಬಂದಾಗ,   ಬಹಳ ಕಷ್ಟ ಅನುಭವಿಸುವಾಗ, ಶೋಚನೀಯ ಸ್ಥಿತಿಯಲ್ಲಿದ್ದಾಗ  ಅಥವಾ ಬಹಳ ಹೆದರಿದಾಗ  ಅಂತಹ  ಸಂದರ್ಭಗಳಲ್ಲಿ  ನಾವು ಉಪಯೋಗಿಸುವ ಮಾತುಗಳಲ್ಲಿ ಒಂದು  ಮಾತು  "  ನಾಯಿ ಪಾಡು" ಅಂತ.  ಅನೇಕ ಬಾರಿ ಹೊರಗಡೆ ಹೋದಾಗ ಮಳೆಯಲ್ಲಿ ಸಿಕ್ಕು ಒದ್ದೆಯಾದರು ಈ ಮಾತನ್ನು ಹೇಳುತ್ತೇವೆ.  ಸರಿಯಾಗಿ ಊಟ ಸಿಗದಿದ್ದರೂ ಕೂಡ "ಇವತ್ತು, ನಂದು ನಾಯಿ ಪಾಡು ಮಾರಾಯ " ಅಂತ ಹೇಳುತ್ತೇವೆ. ಯಾಕೆಂದರೆ ನಮ್ಮಲ್ಲಿ  ಸಾಕು … Continue reading ನಾಯಿ ಪಾಡು !!

ಹನಿಗವನಗಳು

ಆಗಮನ  ಮದುವೆಯ ಹೊಸತರಲ್ಲಿ  ಬಿಡದಂತೆ ಕಣ್ಣರಳಸಿ  ನೋಡುತ್ತಿದ್ದೆ  ಆದಾಗೆಲ್ಲ  ನನ್ನ ಕಡೆ  ಅವಳ   ಆಗಮನ  ವರುಷ ಮುಗಿಯುವಷ್ಟರಲ್ಲಿ    ಮೊದಲಿನಂತೆ ಅವಳನರಸಿ ನೋಡುವುದು  ಬಿಟ್ಟಿದ್ದೆ  ಕೇಳಿದಳಲ್ಲ  ಕೊಡುತ್ತಿಲ್ಲ  ಯಾಕೆ ನನ್ನ ಕಡೆ   ಆ ' ಗಮನ ' ಖರ್ಚು    ಹೆಂಡತಿಗೆ ಕೇಳಿದೆ ಯಾಕೆ  ಖರ್ಚು    ಅನವಶ್ಯಕವಾಗಿ  ಉತ್ತರ ಕೊಟ್ಟಳು ಸುಮ್ಮನಿರಿ  ಮಾಡುತ್ತಿರುವ  ಖರ್ಚೆಲ್ಲ  ನಿಮ್ಮ ಅವಶ್ಯಕತೆಗಾಗಿ.   ಜಗಳ ಸಣ್ಣ ಪುಟ್ಟದಕ್ಕೆಲ್ಲ ಜಗಳವೇ ನಡೆಯಲ್ಲ  ನಮ್ಮಿಬ್ಬರಲ್ಲಿ  ಕಣ್ಣು ಬಿಟ್ಟರೆ ಅವಳು ಸಾಕಲ್ಲ  ಜಗಳ ಇನ್ನೆಲ್ಲಿ.  ಮುಂಗುರುಳು ಮೊದಲು  ಆಡುತ್ತಿದ್ದೆ ಅವಳ  ಮುಂಗುರುಳೊಂದಿಗೆ  ಈಗ ಆಡುತ್ತಿದ್ದೇನೆ … Continue reading ಹನಿಗವನಗಳು

ಕೆನ್ನೆ ಗುಳಿಗಳು …

ಯಾಕೋ ಗೊತ್ತಿಲ್ಲ  ಬೆಳಗ್ಗಿನಿಂದ ನನ್ನ ಮನದನ್ನೆ  ಮುನಿಸಿಕೊಂಡಿದ್ದಳು  ಕೋಪಕ್ಕೆ ಮುಖ ದಪ್ಪವಾಗಿದ್ದರಿಂದ ಕಾಣುತ್ತಿರಲಿಲ್ಲ ಕೆನ್ನೆಯ ಗುಳಿಗಳು  ತಟ್ಟೆಯಲ್ಲಿ ಉಪ್ಪಿಟ್ಟು ಹಾಕಿ ಸಿಟ್ಟಿನಿಂದ ತಂದು ನನ್ನ ಮುಂದೆ ಕುಕ್ಕಿದಳು  ಚಡಪಡಿಸಿ ಯೋಚಿಸಿದೆ  ಏನಪ್ಪಾ ಈ ಸಿಟ್ಟಿನ ಹಿಂದಿನ ಕಾರಣಗಳು  ಮಾತಾನಾಡದೇ ಉಪ್ಪಿಟ್ಟು ನುಂಗುತ್ತಿದ್ದ  ಮಗಳು ಕಿವಿಯಲ್ಲಿ ಪಿಸುಗುಟ್ಟಿದಳು  ಗೊತ್ತಿಲ್ವಾ  ನಿಮಗೆ,   ಬಂದಿಲ್ಲ  ಎರಡು ದಿನದಿಂದ ಮನೆ ಕೆಲಸದವಳು  ನಿಧಾನವಾಗಿ ಉಪ್ಪಿಟ್ಟು ಮುಗಿಸಿ,  ಕೈ ಹಾಕಿದೆ ಸಿಂಕಿಗೆ ತೊಳೆಯಲು ಪಾತ್ರೆಗಳು  ಕಿರುಗಣ್ಣಿನಲ್ಲಿ ನೋಡಿದೆ, ಮೂಡುತ್ತಿದ್ದವು ಮತ್ತೆ  ಅವಳ ಸುಂದರ ಕೆನ್ನೆ ಗುಳಿಗಳು.  - ಶ್ರೀನಾಥ್ ಹರದೂರ ಚಿದಂಬರ 

ನಾ ನಟಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ !!

ಅವತ್ತು ಊರಲೆಲ್ಲಾ ಬರಿ ಅದೇ  ಸುದ್ದಿ,  ಯಾರೋ ಸಿನಿಮಾ ಚಿತ್ರೀಕರಣಕ್ಕೆ  ಬರುತ್ತಾ  ಇದ್ದಾರೆ ಅಂತ.  ಕನ್ನಡ ಸಿನೆಮಾದ ಚಿತ್ರೀಕರಣ ಅಂತೇ,    ಸಾಹಸಮಯ ಚಿತ್ರ ಅಂತೇ,  ನಾಗಭರಣ ಅವರ ನಿರ್ದೇಶನ ಅಂತೇ, ಶ್ರೀಧರ ಹೀರೊ ಅಂತೇ, ದತ್ತಾತ್ರೇಯ ಕೇಡಿ ಅಂತೇ ,... ಹೀಗೆ ಅಂತೇ ಕಂತೆಗಳು ಹರಿದಾಡುತ್ತಿದ್ದವು.  ನಾನು ಯಾವತ್ತೂ ಸಿನಿಮಾ ಚಿತ್ರೀಕರಣ  ನೋಡಿರಲಿಲ್ಲ, ಹಾಗಾಗಿ ಚಿತ್ರೀಕರಣ  ನೋಡಲು ಸಿಕ್ಕಾಪಟ್ಟೆ ಉತ್ಸಾಹದಲ್ಲಿ ಇದ್ದೆ.  ಮೊದಲಿನಿಂದಲೂ ನನಗೆ  ಸಿನಿಮಾ ನೋಡುವುದೆಂದರೆ ಬಹಳ ಇಷ್ಟ.  ಸಾಹಸಮಯ ಸಿನಿಮಾಗಳೆಂದರೆ ಮುಗಿತು, ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆ. ಹೇಗೆ ಸಿನಿಮಾ ಚಿತ್ರೀಕರಣ ಮಾಡುತ್ತಾರೆ ಅನ್ನುವ ಕುತೂಹಲ ಪ್ರತಿ ಸಿನಿಮಾ ನೋಡುವಾಗಲೂ ಇರುತ್ತಿತ್ತು. ಅಂತೂ ಇಂತೂ … Continue reading ನಾ ನಟಿಸಿದ ಮೊದಲ ಸಿನಿಮಾಗೆ ರಾಜ್ಯ ಪ್ರಶಸ್ತಿ !!

ಯಾರೋ ಪ್ರೋಕ್ಷಣೆ ಮಾಡಿದ್ದರು … ಆದರೆ ತೀರ್ಥದಿಂದ ಅಲ್ಲ!!

ಅವತ್ತು ಇಡೀ ಮನೆ ಬಹಳ ಚೆನ್ನಾಗಿ ಹೂವು, ಮಾವಿನ ಸೊಪ್ಪಿನಿಂದ  ಅಲಂಕಾರಗೊಂಡು  ಕಂಗೊಳಿಸುತ್ತಿತ್ತು. ಮದುವೆ ಮನೆಯ ಸಡಗರ ಎಲ್ಲಡೆ ಕಾಣಿಸುತ್ತಿತ್ತು. ಹುಡುಗರೆಲ್ಲ  ಬಹಳ ಗಡಿಬಿಡಿಯಿಂದ  ಒಂದೊಂದು ಕೆಲಸ ವಹಿಸಿಕೊಂಡು ಓಡಾಡುತ್ತಿದ್ದರು. ಮನೆಯ ಪಕ್ಕದಲ್ಲಿಯೇ ಇದ್ದ ದೇವಸ್ಥಾನದಲ್ಲಿ  ಮದುವೆ ಮಾಡುವುದು ಅಂತ ನಿರ್ಧಾರ ಆಗಿದ್ದರಿಂದ,  ಕಲ್ಯಾಣ ಮಂಟಪದ ಬದಲು ಮನೆಯಲ್ಲಿಯೇ ಎಲ್ಲ ನೆಂಟರು ಉಳಿದುಕೊಳ್ಳುವ  ವ್ಯವಸ್ಥೆಯನ್ನು ಮಾಡಿದ್ದರು. ಮರು ದಿನ ಮದುವೆ ಇದ್ದುದ್ದರಿಂದ ಒಬ್ಬೊಬ್ಬರೇ ನೆಂಟರು ಊರಿನಿಂದ  ಮನೆಗೆ ಬರುತ್ತಿದ್ದರು. ರಮೇಶ ಮತ್ತು ಅವನ ಸ್ನೇಹಿತರು ಮನೆಗೆ ನೀರನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿದ್ದರು. ನೀರು ತರಲು … Continue reading ಯಾರೋ ಪ್ರೋಕ್ಷಣೆ ಮಾಡಿದ್ದರು … ಆದರೆ ತೀರ್ಥದಿಂದ ಅಲ್ಲ!!

ಆಮ್ಲೆಟ್, ಪಲಾವ್ ಮತ್ತು ಕಳ್ಳ !!

ಅವತ್ತು  ಒಂದು ಮನೆಯಲ್ಲಿ ವಾಸವಿದ್ದ  ಬ್ಯಾಚುಲರ್  ಹುಡುಗರು ಸೆಕೆಂಡ್ ಶೋ ಸಿನೆಮಾಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲ ಅಂತ ಅವರ ಮನೆಗೆ ಒಬ್ಬ ಕಳ್ಳ ಹಿಂಬದಿ ಬಾಗಿಲು ಒಡೆದು ಒಳ ನುಗ್ಗಿದ್ದ. ಮನೆಯನ್ನೇ ಲೂಟಿ ಮಾಡಿಕೊಂಡು ಹೋಗಬೇಕೆಂದು  ನುಗ್ಗಿದ ಕಳ್ಳನಿಗೆ ಬಹಳ ನಿರಾಸೆ  ಆಯಿತು. ಅವನಿಗೆ ಮನೆಯಲ್ಲಿ ತೆಗೆದುಕೊಂಡು ಹೋಗುವ ಬೆಲೆ ಬಾಳುವ ವಸ್ತುವಾಗಲಿ ಅಥವಾ ದುಡ್ಡು  ಏನು ಇರಲಿಲ್ಲ. ಎಲ್ಲೆಂದೆರಲ್ಲಿ ಬಿದ್ದ ಬಟ್ಟೆ, ಹಾಲಿನಲ್ಲೇ ಒಣಗಿಸದ ಚಡ್ಡಿಗಳು,  ಹೆಂಡದ ಬಾಟಲಿಗಳು, ಕಸ ಗುಡಿಸದೆ ಎಲ್ಲೆಂದರಲ್ಲೇ ಬಿದ್ದ ಕಸ ನೋಡಿ ಕಳ್ಳನಿಗೆ … Continue reading ಆಮ್ಲೆಟ್, ಪಲಾವ್ ಮತ್ತು ಕಳ್ಳ !!

ಕೋಗಿಲೆ ಹಾಡುವುದನ್ನು ನಿಲ್ಲಿಸಿದೆ ….

ಚಿತ್ರ ಕೃಪೆ: ಗೂಗಲ್  ಒಂದೆಲ್ಲಾ ಎರಡಲ್ಲ ಸಾವಿರ ಸಾವಿರ ಹಾಡುಗಳು  ಹಾಡಿದ  ಎಲ್ಲ  ಹಾಡುಗಳು  ಹೊಳೆವ ಮುತ್ತುಗಳು  ಗುನುಗುನಿಸುತ್ತಲೇ ಇರುತ್ತೇವೆ ಪ್ರತಿ ಹಾಡುಗಳು  ಹಾಡಿದ್ದ ಹಾಡುಗಳು ಎಲ್ಲರ  ಹೃದಯವನ್ನೇ ಗೆದ್ದಿತ್ತು ಭಾಷೆಗಳ ಹಂಗಿಲ್ಲದೆ ಎಲ್ಲರನ್ನು ಮೋಡಿ  ಮಾಡಿತ್ತು  ಯುವ ಗಾಯಕರಿಗೆ  ಹಾಡಲು ಸ್ಪೂರ್ತಿಯಾಗಿತ್ತು  ಬರಿದಾಗಿದೆ  ಇಂದು ನೀನಿಲ್ಲದೆ ಹಾಡುಗಳ ಜಗತ್ತು.  ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ.  ನಿಮ್ಮ ಮನೆಯವರಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ.  - ಶ್ರೀನಾಥ್ ಹರದೂರ ಚಿದಂಬರ 

ಮರಗಳ ಗುಸು ಗುಸು ಪಿಸು ಪಿಸು

ಛಾಯಾಚಿತ್ರಣ : ಪ್ರತಿಮಾ  ಬರೆಹ: ಶ್ರೀನಾಥ್ ಹರದೂರ ಚಿದಂಬರ  ಬೆಳಗಿನ ಜಾವ ಸಣ್ಣಗೆ ಚಳಿ ಹುಟ್ಟಿಸುವಂತೆ ತಂಗಾಳಿ ಬೀಸುತಿತ್ತು.  ತೋಟದಲ್ಲಿ  ಅಡಿಕೆ ಮರ  ಮತ್ತು ತೆಂಗಿನ ಮರಗಳು ಉಲ್ಲಾಸದಿಂದ ತಮ್ಮ ತಮ್ಮ ತಲೆಗಳನ್ನೂ ಅತ್ತಿಂದಿತ್ತ ಅಲ್ಲಾಡಿಸುತ್ತ ಬೆಳಗ್ಗಿನ ಜಾವದ ಸುಂದರ ವಾತಾವರಣವನ್ನು ಅನುಭವಿಸುತ್ತ ಏನೋ ಗುಸು ಗುಸು ಪಿಸು ಪಿಸು ಅಂತ ಇದ್ದವು.  ಅಡಿಕೆ ಮರ ತೆಂಗಿನ ಮರಕ್ಕೆ ಕೇಳಿತು " ಈಗ ಹೆಂಗಿದೆ ಬೆಲೆ ನಿಂದು ?"  ಅದಕ್ಕೆ ತೆಂಗಿನ ಮರ ಹೇಳಿತು " ಅಯ್ಯೋ ಬಿಡಪ್ಪ , ನಮ್ದೇನು ಆರಕ್ಕೆ … Continue reading ಮರಗಳ ಗುಸು ಗುಸು ಪಿಸು ಪಿಸು

ಮಾತೃ ಭಾಷೆ

ಮಾತೃ ಭಾಷೆಗೆ ಇರಬೇಕು ಯಾವಾಗಲೂ ಪ್ರಾಮುಖ್ಯತೆ ,   ಬೇರೆ ಭಾಷೆ ಕಲಿಬೇಕು ಇದ್ದರೆ ಅವಶ್ಯಕತೆ  ನಿಮಗೆ ಗೊತ್ತೇ ಹಿಂದಿ ಹೇರುವ ಹಿಂದಿರುವ ಅಸಲಿಕಥೆ  ಬಿಟ್ಟಿಹೋಗಿಲ್ಲವೇ  ಬ್ರಿಟಿಷರು ಒಡೆದು ಆಳುವ ಅನೈತಿಕತೆ  ಜಾತಿ ಧರ್ಮದ ನಂತರ ಶುರುವಾಗಿದೆ ಈಗ ಭಾಷೆಯ ರಾಜಕೀಯತೆ   ಬೆಳೆಸಿಕೊಂಡರೆ ನಮ್ಮಲ್ಲಿ ಸ್ವಲ್ಪ ವೈಚಾರಿಕತೆ ಹಾಗು ಹೃದಯ ವೈಶಾಲ್ಯತೆ  ಎಂದೆಂದಿಗೂ  ಉಳಿಸಿಕೊಳ್ಳಬಹುದು ಮಾತೃಭಾಷೆಯ  ಪಾವಿತ್ರ್ಯತೆ. - ಶ್ರೀನಾಥ್ ಹರದೂರ ಚಿದಂಬರ 

ಇರುವೆಯ ಪ್ರಾರ್ಥನೆ…!

ಛಾಯಾಚಿತ್ರಣ: ಅಂಕಿತ  ಕಥೆ: ಶ್ರೀನಾಥ್ ಹರದೂರ  ಚಿದಂಬರ  ಸೂರ್ಯ ಮುಳುಗಿ   ಕತ್ತಲು  ಆವರಿಸುತ್ತಾ ಬಂದಿತ್ತು.  ಒಬ್ಬಂಟಿ  ಇರುವೆ ತನ್ನ ಗುಂಪಿನಿಂದ ಬೇರೆ ಆಗಿ ತನ್ನ ಗೂಡಿಗೆ ವಾಪಸು ಹೋಗಲು  ಪರದಾಡುತಿತ್ತು.  ಅದಕ್ಕೆ ಗೊತ್ತಿಲ್ಲದೇ ಒಂದು ಸಣ್ಣ ಮರವನ್ನು ಹತ್ತುತ್ತ  ಹೋಗುತಿತ್ತು.  ಮೇಲೆ ಹೋದ ಮೇಲೆ ಅದಕ್ಕೆ  ದಾರಿ ಕಾಣದೆ ತಿರುಗಿ ಇಳಿಯಲು ಹೋದಾಗ ಆಯಾ ತಪ್ಪಿ ಕೆಳಗೆ ಬೀಳಲು ಶುರು ಮಾಡಿತು. ಅದಕ್ಕೆ ತನ್ನ ಸಾವು ಖಂಡಿತ ಅಂತ ಅನಿಸಲು ಶುರುಮಾಡಿ,  ದೇವರನ್ನು , ನನ್ನನ್ನು ಕೆಳಗೆ ಬೀಳದಂತೆ … Continue reading ಇರುವೆಯ ಪ್ರಾರ್ಥನೆ…!