ಪ್ರೀತಿ ಮತ್ತು ಧರ್ಮ

- ಶ್ರೀನಾಥ್ ಹರದೂರ ಚಿದಂಬರ  ಅವನು ಅವಳ ಹತ್ತಿರ ತನ್ನ ಪ್ರೀತಿಯನ್ನು ಹೇಳಿಕೊಂಡ. ಅವಳು ಅದನ್ನು ಒಪ್ಪಿಕೊಂಡಳು. ಅವನು ಅವಳ ಧರ್ಮ ಕೇಳಲಿಲ್ಲ, ಅವಳು ಅವನ ಧರ್ಮ ಕೇಳಲಿಲ್ಲ.  ಪ್ರೀತಿಯ ದೀಪ ಹೊತ್ತಿಕೊಂಡಿತು.  ಅವಳ ಮನೆಯವರಿಗೆ ತಿಳಿದು ಅವನನ್ನು ಚೆನ್ನಾಗಿ ಹೊಡೆದು ಅವಳ ಸುದ್ದಿಗೆ ಬಂದರೆ, ಅದು ನಮ್ಮ ಧರ್ಮದ ಸುದ್ದಿಗೆ ಬಂದಂತೆ ,  ಅವಳನ್ನು ಮತ್ತೊಮ್ಮೆ ಭೇಟಿ ಮಾಡಿದರೆ   ಜೀವ ಸಹಿತ ಬಿಡುವುದಿಲ್ಲ ಅಂದರು. ಧರ್ಮ ದ್ವೇಷದ ಬೆಂಕಿ ಹೊತ್ತಿಕೊಂಡಿತು.  ಅವನ ಧರ್ಮದವರಿಗೆ ವಿಷ್ಯ ತಿಳಿದು ಅವಳ ಮನೆಯವರ ಮೇಲೆ … Continue reading ಪ್ರೀತಿ ಮತ್ತು ಧರ್ಮ

ಬ್ಯಾಂಕ್ ಲಾಕರ್..

ಪ್ರತಿ ಎರಡು ದಿನಕ್ಕೊಮ್ಮೆ ವಯಸ್ಸಾದ ವ್ಯಕ್ತಿಯೊಬ್ಬರು   ಬ್ಯಾಂಕಿಗೆ ತಪ್ಪದೆ ಬಂದು ಅವರ ಲಾಕರ್ ಚೆಕ್ ಮಾಡುತ್ತಿದ್ದರು.  ಲಾಕರ್ ಓಪನ್ ಮಾಡಲು  ೨ ಕೀಗಳಿದ್ದವು.  ಒಂದು ಕೀ ಬ್ಯಾಂಕ್ನವರ ಹತ್ತಿರ ಇರುತ್ತಿತ್ತು , ಇನ್ನೊಂದು ಕೀ ಆ ವ್ಯಕ್ತಿಯ  ಹತ್ತಿರ ಇರುತ್ತಿತ್ತು.   ಕ್ಲರ್ಕ್ ಕೂಡ ಬೇಜಾರಿಲ್ಲದೆ   ಅವರನ್ನು  ಲಾಕರ್ ರೂಮ್ಗೆ ಕರೆದುಕೊಂಡು ಹೋಗಿ  ಒಂದು ಕೀಯಿಂದ ಲಾಕರ್  ಓಪನ್ ಮಾಡಿಕೊಟ್ಟು ಹೊರಗಡೆ ಬರುತ್ತಿದ್ದರು.  ೩ ನಿಮಿಷದಲ್ಲಿ ಆ ವ್ಯಕ್ತಿಯು  ಕೂಡ   ಲಾಕರ್ ಕ್ಲೋಸ್ ಮಾಡಿ ಹೊರಗಡೆ ಬರುತ್ತಿದ್ದರು. ಎಲ್ಲರಿಗು ಆ ವ್ಯಕ್ತಿ  ಏನು ಚೆಕ್ ಮಾಡುತ್ತಾರೆ ಅನ್ನುವ ಕುತೂಹಲ ಇದ್ದರು ಯಾರು ಏನು  ಅಂತ … Continue reading ಬ್ಯಾಂಕ್ ಲಾಕರ್..

ಬರಿ ಒಂದೆರೆಡಲ್ಲ….. ಸಾವಿರ ಸಾವಿರ…

ಬರೆಹ: ಶ್ರೀನಾಥ್ ಹರದೂರ ಚಿದಂಬರ ಹೆತ್ತವರು ಅಂದರೆ ಬರಿ ನಿಮ್ಮನ್ನು ಸಾಕಿದವರಲ್ಲ  ಗಂಡ ಹೆಂಡತಿ  ಅಂದರೆ ಬರಿ ಜೊತೆಯಲ್ಲಿರುವದಲ್ಲ  ಮಕ್ಕಳು ಅಂದರೆ ಬರಿ ಜನ್ಮ ನೀಡುವುದಲ್ಲ  ಸ್ನೇಹಿತರು ಅಂದರೆ ಬರಿ ಕಷ್ಟಕಾಗುವವರಲ್ಲ  ಬಂಧುಗಳು ಅಂದರೆ ಬರಿ ಕಾರ್ಯಕ್ರಮಗಳಿಗೆ ಮೀಸಲು ಅಲ್ಲ  ಪ್ರೀತಿ ಅಂದರೆ ಬರಿ ಬಯಸುವದಲ್ಲ  ಆರೋಗ್ಯ ಅಂದರೆ ಬರಿ ದೇಹಕ್ಕಲ್ಲ  ಶಿಕ್ಷಣ ಅಂದರೆ ಬರಿ ಅಂಕಗಳಲ್ಲ  ಶ್ರೀಮಂತಿಕೆ ಅಂದರೆ ಬರಿ ಹಣವಲ್ಲ  ಕೆಲಸ ಅಂದರೆ ಬರಿ ದಿನವಿಡೀ ದುಡಿಯುವುದಲ್ಲ  ಮನೆ ಅಂದರೆ ಬರಿ ಕಿಟಕಿ ಬಾಗಿಲುಗಳಲ್ಲ  ಆಟ ಅಂದರೆ ಬರಿ … Continue reading ಬರಿ ಒಂದೆರೆಡಲ್ಲ….. ಸಾವಿರ ಸಾವಿರ…

ಏನೆಂದು ಅರ್ಥೈಸಲಿ …..

ಬರೆಹ: ಶ್ರೀನಾಥ್ ಹರದೂರ ಚಿದಂಬರ  ಹೊತ್ತಿ ಉರಿಯುತ್ತಿದೆ ಅಗ್ನಿ   ಯಜ್ಞವಲ್ಲ  ಮನುಷ್ಯರನ್ನು ಕೊಲ್ಲಲು ಹವಣಿಸುತ್ತಿದ್ದಾರೆ  ರಾಕ್ಷಸರಲ್ಲ  ಆರ್ಭಟನೆ ಮಾಡಿ ನುಗ್ಗುತ್ತಿದ್ದಾರೆ  ಯುದ್ಧವಲ್ಲ  ಧರ್ಮವನ್ನು ರಕ್ಷಿಸಲು ಇನ್ನೊಂದು ಧರ್ಮವನ್ನು  ಕೊಲ್ಲಬೇಕಾಗಿಲ್ಲ  ಇದನ್ನು ಅರಿಯದೆ ತಪ್ಪಿನ ಮೇಲೆ ತಪ್ಪು  ಮಾಡುತ್ತಿರುವರಲ್ಲ  ಏನೆಂದು ಅರ್ಥೈಸಲಿ ಈ  ಧರ್ಮಾಂಧರನೆಲ್ಲ 

ನಾಳೆಯಿಂದ

ವೈದ್ಯರು ಹೇಳಿದರು ವಾಕಿಂಗ್ ಮಾಡಿ  ನಾಳೆಯಿಂದ  ದೃಢ ನಿಶ್ಚಯಿಸಿ ಹೇಳಿದೆ  ಮಾಡುತ್ತೇನೆ ಬಿಡಿ   ನಾಳೆಯಿಂದ  ಬೆಳಿಗ್ಗೆ ಹೊಡೆದ ಅಲಾರಾಂಗೆ  ಹೇಳಿದೆ ತಡಿ  ನಾಳೆಯಿಂದ  ಶ್ರೀ  ಥಿಂಕ್ ರೈಟ್ 

ಹಿಂದಿರುವ ಸತ್ಯ

ರಾಜಕೀಯ ಪಕ್ಷದ ಕಛೇರಿಯಲ್ಲಿ ನೋಡಿದ್ದು ಗಾಂಧಿ, ಅಂಬೇಡ್ಕರ್...ಮುಂತಾದ ಮಹನೀಯರ   ಫೋಟೋಗಳು ನಾನು ಅಂದುಕೊಂಡಿದ್ದು ಮಹನೀಯರಿಗೆ ರಾಜಕೀಯದವರು  ಕೊಡುತ್ತಿರುವ ಗೌರವ ಸತ್ಕಾರಗಳು ಸತ್ಯ ಕಂಡುಕೊಂಡಿದ್ದು ರಾಜಕೀಯದವರು ಮಾಡುವ ಅಕ್ರಮಗಳಿಗೆ ಅವರು ಗುರಾಣಿಗಳು ಶ್ರೀ ಥಿಂಕ್ ರೈಟ್

ನಿವೇದನೆ

ಮುಸ್ಸಂಜೆಯ ಸಮಯದಲ್ಲಿ  ಕಡಲ ತೀರದ ತಂಗಾಳಿಯಲ್ಲಿ  ಗೆಳೆತಿಯ ಜೊತೆ ಜೊತೆಯಲ್ಲಿ  ಹೆಜ್ಜೆ ಹಾಕುತ್ತಿದ್ದನು ಅವಳ ಗೆಳೆಯ ಪಕ್ಕದಲ್ಲಿ  ಚಡಪಡಿಸುತ್ತಿದ್ದ  ಏನೋ  ಹೇಳಬೇಕು ಅವಳಿಗೆ  ಎಂಬ ಬಯಕೆಯಲ್ಲಿ  ಕೈ ಕಾಲುಗಳ ಜೊತೆಗೆ  ಏನೋ ನಡುಕ ಎದೆಯಲ್ಲಿ  ಕೊನೆಗೂ ನಿರ್ಧರಿಸದ ಹೇಳಲೇ ಬೇಕು ಅವಳಲ್ಲಿ  ..  ..  ..  ತುಂಬ ಚಳಿ ಕಣೆ ನಡೆಯಕ್ಕೆ ಆಗ್ತಿಲ್ಲ ನನ್ನ ಕೈಲಿ.