ಸಂಸ್ಕೃತಿ -ಭಾಷೆ- ವೈವಿಧ್ಯತೆ ಮತ್ತು ಭಾರತ

ನಾವುಗಳು ಹೊರ ರಾಜ್ಯಕ್ಕೆ ಹೋದಾಗ ಎಲ್ಲಾದರೂ ಕನ್ನಡದವರು ಕಂಡರೆ, ಅವರು ಪರಿಚಯ ಇರಲಿ ಅಥವಾ ಇರದಿರಲಿ ಹೋಗಿ ಮಾತನಾಡಿಸಿ, ಎಲ್ಲಿಂದ ಬಂದಿದ್ದೀರಾ?   ಯಾವ ಊರಿನವರು?  ನೀವು ಟ್ರಿಪ್ ಗೇನ? ಅಂತೆಲ್ಲ  ವಿಚಾರಿಸಿ, ಖುಷಿ ಪಡುತ್ತೀವಿ. ಅವರನ್ನು ನಾವು ಮತ್ತೆ ಯಾವತ್ತು ಭೇಟಿ ಮಾಡುವುದಿಲ್ಲ, ಆದರೂ ಅವತ್ತು  ಇದ್ದಕ್ಕಿದ್ದಂತೆ ಕನ್ನಡದವರ ಮೇಲೆ ಬಹಳ ಅಭಿಮಾನ ಬಂದುಬಿಟ್ಟುರುತ್ತದೆ. ಅದೇ ಊರಲ್ಲಿ ಪಕ್ಕದ ಮನೆಯವರನ್ನು ಮಾತನಾಡಿಸಲು ಬಿಗುಮಾನ ತೋರುವ ನಾವು ಹೊರಗಡೆ ಹೋದಾಗ, ನಮಗೆ ಕನ್ನಡವರು ಅಂತ ಅಭಿಮಾನ ಎಲ್ಲಿಂದ ಬರುತ್ತದೆ.  ಇನ್ನು … Continue reading ಸಂಸ್ಕೃತಿ -ಭಾಷೆ- ವೈವಿಧ್ಯತೆ ಮತ್ತು ಭಾರತ

ಕೊರೊನಾ … ಅಲ್ಲ ಇದೊಂದು ಕರಾಳ ದಂದೆ …

ಕೆಲವೊಮ್ಮೆ  ಶಾಪ ಕೂಡ ಕೆಲವರಿಗೆ ವರವಾಗಿ ಬದಲಾಗುವದು. ಅದು ಕೊರೊನಾ ಬಂದ ಮೇಲಂತೂ ,  ನಮ್ಮ ದೇಶದಲ್ಲಿರುವ ಭ್ರಷ್ಟ ಅಧಿಕಾರಿಗಳು ಹಾಗು ಭ್ರಷ್ಟ ರಾಜಕಾರಣಿಗಳ ಪಾಲಿಗೆ ಈ ಮಾತು ಅಕ್ಷರಶ ನಿಜವಾಗಿದೆ.  ನಿಮಗೆಲ್ಲ ತಿಳಿದಂತೆ ಮೇ ೧೨ ರ ತನಕ ನಮ್ಮ ದೇಶದಲ್ಲಿ ಕೊರೊನ ಸೋಂಕಿತರ ಸಂಖ್ಯೆ  ನಿಯಂತ್ರಣದಲ್ಲಿತ್ತು.  ಯಾವಾಗ ಪ್ರಧಾನ ಮಂತ್ರಿಗಳು ೨೦ ಲಕ್ಷ ಕೋಟಿ ಮೊತ್ತದ ಪರಿಹಾರ ಕಂತುಗಳನ್ನು ಘೋಷಿಸಿದರೋ ಅಲ್ಲಿಂದ ಶುರುವಾಯ್ತು ನೋಡಿ ಕೊರೊನಾ ಸಂಖ್ಯೆಯ ಜಿಗಿತ. ಇದ್ದಕ್ಕಿದ್ದಂತೆ ಕೊರೊನಾ ಇಲ್ಲದ ರಾಜ್ಯಗಳಲ್ಲೂ ಸಹ ಸಂಖ್ಯೆ ಏರತೊಡಗಿತು.  ನಮ್ಮ ರಾಜ್ಯದಲ್ಲಿ ಇರಲೇ ಇಲ್ಲ, ಬೇರೆ ರಾಜ್ಯದಿಂದ  ಬಂದವರಿಂದ ಕೊರೊನಾ … Continue reading ಕೊರೊನಾ … ಅಲ್ಲ ಇದೊಂದು ಕರಾಳ ದಂದೆ …

ರಾಜಕೀಯ ಬೆಂಬಲಿಗರೇ ನಿಮ್ಮಲ್ಲಿರುವುದು ಇರುವುದು ವ್ಯಕ್ತಿ ನಿಷ್ಠೆಯೋ ಅಥವಾ ಪಕ್ಷ ನಿಷ್ಠೆಯೋ?

ಬರಹಗಾರರು : ಶ್ರೀನಾಥ್ ಹರದೂರ  ಚಿದಂಬರ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚಾಗಿ ಚರ್ಚೆ ನಡೆಯುವ ವಿಷಯಗಳಲ್ಲಿ ರಾಜಕೀಯ ವಿಷಯವು ಒಂದು.  ಸ್ನೇಹಿತರೂ  ಕೂಡ   ಯಾವುದೊ ಒಂದು ಪಕ್ಷದ ಪರವಾಗಿ ಮಾತನಾಡುತ್ತ ಜಗಳ ಆಡಿಕೊಳ್ಳುವುದನ್ನು ಕೂಡ ನೋಡುತ್ತೇವೆ. ಅನೇಕರು ಆ ಪಕ್ಷದ ಪರವಾಗಿ ಯಾರೋ ಒಬ್ಬ ವ್ಯಕ್ತಿಯಿಂದ   ಪ್ರೇರಿತರಾಗಿ ಆ ಪಕ್ಷದ ಪರವಾಗಿ ಮಾತನಾಡುತ್ತರೆಯೇ  ವಿನಃ ,  ಪಕ್ಷದ ಹುಟ್ಟು,  ನಡೆದು ಬಂದ ಹಾದಿ,  ಸಿದ್ದಾಂತಗಳಿಗಾಗಿ ಖಂಡಿತ ಅಲ್ಲ.  ಮುಖ್ಯ ಕಾರಣ ಅವರು ಮೆಚ್ಚುವ ಒಬ್ಬ ವ್ಯಕ್ತಿ ಆ … Continue reading ರಾಜಕೀಯ ಬೆಂಬಲಿಗರೇ ನಿಮ್ಮಲ್ಲಿರುವುದು ಇರುವುದು ವ್ಯಕ್ತಿ ನಿಷ್ಠೆಯೋ ಅಥವಾ ಪಕ್ಷ ನಿಷ್ಠೆಯೋ?

ಆಡಳಿತ ಪಕ್ಷವೇ ಅಥವಾ ಆಳುವ ಪಕ್ಷವೇ ?

ಅನಾದಿಕಾಲದಿಂದಲೂ  ಇತಿಹಾಸದ ಪ್ರತಿ ಪುಟದಲ್ಲೂ ನಾವು ಓದುವ  ಒಂದು ವಾಕ್ಯ   "  ನಮ್ಮನ್ನು ರಾಜ ಮಹಾರಾಜರು ಅಳುತ್ತಿದ್ದರು " ಎಂದು.  ಇತಿಹಾಸ ಓದುತ್ತ ಹೋದರೆ  ಪ್ರಖ್ಯಾತ  ಮತ್ತು ಕುಖ್ಯಾತ  ರಾಜ ಮಹಾರಾಜರು ವರುಷಾನುಗಟ್ಟಲೆ   ಭಾರತವನ್ನ ಆಳಿರುವ ಮಾಹಿತಿ ಇದೆ.    ನಮ್ಮವರಲ್ಲದೆ  ಹೊರಗಿನಿಂದ ಬಂದ ಮುಘಲರು, ಬ್ರಿಟಿಷರು ಸಹಿತ  ನೂರಾರು  ವರ್ಷಗಳ ಕಾಲ ನಮ್ಮನ್ನು  ಆಳಿದರು ಎಂದೇ ಹೇಳುತ್ತೇವೆ.   ಸ್ವಾತಂತ್ರ ತರುವಾಯ ಭಾರತದಲ್ಲಿ  ಆಳುವ ವ್ಯವಸ್ಥೆ   ಕೊನೆಯಾಗಿ,  ಶುರುವಾಗಿದ್ದೇ   "  ಪ್ರಜಾಪ್ರಭುತ್ವ -  ಪ್ರಜೆಗಳೇ, ಪ್ರಜೆಗಳಿಂದ , ಪ್ರಜೆಗಳಿಗೋಸ್ಕರ " ಎನ್ನುವ … Continue reading ಆಡಳಿತ ಪಕ್ಷವೇ ಅಥವಾ ಆಳುವ ಪಕ್ಷವೇ ?

ನೋಡಿ ಸ್ವಾಮಿ, ನಾವ್ ಅಂತಿರೋದು ಹೀಗೆ

ಈಗಿನ ಶಾಲಾ ಶಿಕ್ಷಣ ಸರಿ ಇಲ್ಲಾರಿ ಎಲ್ಲ ಖಾಸಗಿಯವರದೇ ದರಬಾರು  ಅಂತೀವಿ - ಖಾಸಗಿ   ಶಾಲೆಗೆ ಮಕ್ಕಳನ್ನ  ಸೇರಿಸ್ತೀವಿ. ಮಕ್ಕಳು ಅವರಾಗಿ ಬೆಳೀಬೇಕು ಅಂತೀವಿ -  ಜಾಸ್ತಿ ಅಂಕಗಳು  ತರಬೇಕು, ಇಂಜಿನಿಯರಿಂಗ್, ಡಾಕ್ಟರ ಆಗ್ಬೇಕು   ಅಂತ ಮಕ್ಕಳಿಗೆ ತಾಕೀತು ಮಾಡ್ತೀವಿ. ಆರೋಗ್ಯ ತುಂಬಾ ಮುಖ್ಯ ಅಂತೀವಿ - ಸಂಜೆ ಜಂಕ್ ಫುಡ್ ತಿನ್ನುವುದಕ್ಕೆ  ಹೋಗ್ತಿವಿ. ಕುಟುಂಬ  ಮುಖ್ಯ  ಕೆಲಸ ಅಲ್ಲ  ಅಂತೀವಿ -  ದಿನವಿಡೀ ಕೆಲಸದಲ್ಲಿ ಸಮಯ ಕಳೆದು  ಅವರನ್ನೇ ಮರೆತುಬಿಡ್ತಿವಿ. ಭಾರತ ಸ್ವಚ್ಛ ಇಲ್ಲ ಅಂತೀವಿ - ನಾವೇ ಕಸನ ದಾರಿಯಲ್ಲಿ … Continue reading ನೋಡಿ ಸ್ವಾಮಿ, ನಾವ್ ಅಂತಿರೋದು ಹೀಗೆ