ಮಿಸ್ಡ್ ಕಾಲ್ !!

ಬಸ್ ನಿಲ್ದಾಣದಲ್ಲಿ  ಚಂದ್ರು ತನ್ನ ಕೈ ಗಡಿಯಾರದ ಕಡೆ ಪದೇ ಪದೇ ನೋಡುತ್ತಾ, " ಇಷ್ಟೋತ್ತಿಗೆ ಬಸ್ ಬರಬೇಕಿತ್ತಲ್ವಾ? ಈ ಬಿಎಂಟಿಸಿ ಬಸ್ ಯಾವಾಗಲು ಹಿಂಗೇನೆ,  ಯಾವಾಗ ಬೇಗ ಹೋಗಬೇಕೋ ಅವಾಗ ತಡವಾಗಿ ಬರುತ್ತೆ" ಅಂತ ಗೊಣಗುತ್ತ ಬಸ್ ಬರುವ ದಿಕ್ಕನ್ನು ನೋಡುತ್ತಾ  ನಿಂತಿದ್ದನು.  ಅವನ ಅಕ್ಕಪಕ್ಕದಲ್ಲಿ ಇವನಂತೆ ಬರುವ ಬಸ್ ಗೆ ಕಾಯುತ್ತ  ಹಲವರು ನಿಂತಿದ್ದರು.  ಆಗ  ಎದುರುಗಿದ್ದ ರಸ್ತೆಯ ಇನ್ನೊಂದು ಭಾಗದಿಂದ ರಸ್ತೆಯ ವಿಭಜಕವನ್ನು ಹಾರಿ ಒಬ್ಬ ವ್ಯಕ್ತಿ ಚಂದ್ರು ಕಾಯುತ್ತಿದ್ದ ಬಸ್ ನಿಲ್ದಾಣಕ್ಕೆ ಬಂದನು. ತುಂಬ … Continue reading ಮಿಸ್ಡ್ ಕಾಲ್ !!

ಹವಾಯಿ ಚಪ್ಪಲಿ !!!

ದಾರಿಯಲ್ಲಿ ಅಪ್ಪ ಮತ್ತು ಅವನ ನಾಲಕ್ಕು ವರುಷದ ಮಗ  ನಡೆದುಕೊಂಡು ಹೋಗುತ್ತಿದ್ದರು. ಮಗ  ತನ್ನ ಅಪ್ಪನ ಕೈ ಹಿಡಿದುಕೊಂಡು ಕುಣಿಯುತ್ತ, ಅಪ್ಪನ ಕೈಯನ್ನು ಜಗ್ಗುತ್ತಾ , ಆಟವಾಡಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ. ಅವತ್ತು ಮಗನ  ಸಂತೋಷಕ್ಕೆ ಪಾರವೇ ಇರಲಿಲ್ಲ.  ಯಾಕಂದರೆ   ಅಪ್ಪ ಅವನಿಗೆ ಹೊಸ ಚಪ್ಪಲಿ ಕೊಡಿಸುತ್ತೇನೆ ಅಂತ ಸಂತೆಗೆ   ಕರೆದುಕೊಂಡು ಹೋಗುತ್ತಿದ್ದರು. ಅದುವರೆಗೆ ಮಗ  ಯಾವತ್ತು ಚಪ್ಪಲಿಯೇ ಹಾಕಿರಲಿಲ್ಲ, ಹಾಗಾಗಿ ಅಪ್ಪ ಕೊಡಿಸುವ ಚಪ್ಪಲಿ ಹೇಗಿರಬಹುದು  ಎಂಬ ಕಾತುರ ಅವನನ್ನು ಹಾಗೆ ಕುಣಿಸುತ್ತಿತ್ತು.  ಹಳ್ಳಿಯಿಂದ ಸುಮಾರು ನಾಲ್ಕು ಕಿಲೋಮೀಟರು ನಡೆದು,  ಸಂತೆ ನಡೆಯುತ್ತಿದ್ದ್ದ ಜಾಗಕ್ಕೆ ಇಬ್ಬರು ಬಂದರು.  ಮಗ ಮನೆಯಲ್ಲಿ … Continue reading ಹವಾಯಿ ಚಪ್ಪಲಿ !!!

ಅವರುಗಳು ಹಾಡುತ್ತಿದ್ದ ಹಾಡುಗಳ ಹಿಂದೆ ಇದ್ದ ರಹಸ್ಯ !!

ಹರ್ಷ ಹುಟ್ಟಿ ಬೆಳೆದಿದ್ದೆಲ್ಲ ನಗರ ಪ್ರದೇಶದಲ್ಲೇ ಆಗಿದ್ದರಿಂದ ಅವನಿಗೆ ಹಳ್ಳಿಯ ಜೀವನ ಶೈಲಿ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ.  ಯಾವಾಗಲಾದರೂ ಅಪ್ಪ ಅಮ್ಮನ ಜೊತೆಗೆ  ಮದುವೆ ಅಥವಾ ಗೃಹಪ್ರವೇಶ ಅಂತ ಹಳ್ಳಿಗೆ ಹೋದರು,  ಬೆಳಿಗ್ಗೆ ಹೋಗಿ ಸಂಜೆ ಅಲ್ಲಿಂದ ಹೊರಟು ಬರುತ್ತಿದ್ದ.  ಹರ್ಷ ಯಾವತ್ತೂ ಹಳ್ಳಿಗಳಲ್ಲಿ ಒಂದೆರಡು ದಿವಸ ಕೂಡ  ಉಳಿದುಕೊಂಡಿರಲಿಲ್ಲ. ಒಂದು ದಿನ ಹಳ್ಳಿಯಲ್ಲಿದ್ದ ಅವನ ದೊಡ್ಡಪ್ಪನ ಮಗಳ ಮದುವೆ  ನಿಶ್ಚಯ ಆಯಿತು.  ದೊಡ್ಡಪ್ಪ   ಮದುವೆಯನ್ನು ತಮ್ಮ ಹಳ್ಳಿಯ ಮನೆಯಲ್ಲಿ ಮಾಡುವುದು ಅಂತ ತೀರ್ಮಾನ ಮಾಡಿದ್ದರು. ಹಾಗಾಗಿ ಮದುವೆಗೆ ಮೂರು ದಿವಸ ಮುಂಚೆನೇ ಬರಬೇಕು, ಅಂತ ದೊಡ್ಡಪ್ಪ ಹರ್ಷನ ಅಪ್ಪನಿಗೆ ತಾಕೀತು … Continue reading ಅವರುಗಳು ಹಾಡುತ್ತಿದ್ದ ಹಾಡುಗಳ ಹಿಂದೆ ಇದ್ದ ರಹಸ್ಯ !!

ಒಂದು ಉಪ್ಪಿಟ್ಟಿನ ಕಥೆ…

ರಾಜೀವನ ಹೆಂಡತಿ ಉಮಾ  ಒಂದು ದಿನದ ಮಟ್ಟಿಗೆ ಒಬ್ಬಳೇ ಯಾರದೋ ನೆಂಟರ ಮದುವೆಗೆ ಊರಿಗೆ ಹೋಗಿದ್ದಳು. ಬೆಳೆಗ್ಗೆ  ಊರಿಗೆ ಹೋಗುವ ಮುಂಚೆ  ರಾಜೀವನಿಗೆ ತಿಂಡಿ ಮತ್ತು ಮದ್ಯಾಹ್ನಕ್ಕೆ ಊಟದ ಡಬ್ಬಿ  ಕೂಡ ತಯಾರು ಮಾಡಿಟ್ಟು ಹೋಗಿದ್ದಳು.  ಹೇಗಿದ್ದರೂ ಸಂಜೆ ಮನೆಗೆ ವಾಪಸು ಬರುತ್ತೀನಿ,  ಬಂದ ಮೇಲೆ ಅನ್ನ ಒಂದು ಮಾಡಿದರಾಯಿತು,  ಮಾಡಿದ ಸಾಂಬಾರು ಹೇಗೂ ಇರತ್ತಲ್ಲ,  ಅಂತ ಅವಳ ಯೋಜನೆಯಾಗಿತ್ತು.  ರಾಜೀವ ಅವತ್ತಿನ ಕೆಲಸ ಮುಗಿಸಿ, ಸಂಜೆ ಮನೆಗೆ ಬಂದು ಕೈ ಕಾಲು ತೊಳೆದು ಟಿವಿ ನೋಡುತ್ತಾ ಕುಳಿತ.  ರಾಜೀವ  ಮದ್ಯಾಹ್ನ  ಬೇಗ ಊಟ ಮಾಡಿದ್ದರಿಂದ  ತಿಂದಿದ್ದೆಲ್ಲ  ಕರಗಿ  ಹಸಿವಾಗಿ ಹೊಟ್ಟೆ ಚುರುಗುಡುತ್ತಿತ್ತು. ತಿಂಡಿ ಏನಾದರೂ … Continue reading ಒಂದು ಉಪ್ಪಿಟ್ಟಿನ ಕಥೆ…

ಯಾರೋ ಪ್ರೋಕ್ಷಣೆ ಮಾಡಿದ್ದರು … ಆದರೆ ತೀರ್ಥದಿಂದ ಅಲ್ಲ!!

ಅವತ್ತು ಇಡೀ ಮನೆ ಬಹಳ ಚೆನ್ನಾಗಿ ಹೂವು, ಮಾವಿನ ಸೊಪ್ಪಿನಿಂದ  ಅಲಂಕಾರಗೊಂಡು  ಕಂಗೊಳಿಸುತ್ತಿತ್ತು. ಮದುವೆ ಮನೆಯ ಸಡಗರ ಎಲ್ಲಡೆ ಕಾಣಿಸುತ್ತಿತ್ತು. ಹುಡುಗರೆಲ್ಲ  ಬಹಳ ಗಡಿಬಿಡಿಯಿಂದ  ಒಂದೊಂದು ಕೆಲಸ ವಹಿಸಿಕೊಂಡು ಓಡಾಡುತ್ತಿದ್ದರು. ಮನೆಯ ಪಕ್ಕದಲ್ಲಿಯೇ ಇದ್ದ ದೇವಸ್ಥಾನದಲ್ಲಿ  ಮದುವೆ ಮಾಡುವುದು ಅಂತ ನಿರ್ಧಾರ ಆಗಿದ್ದರಿಂದ,  ಕಲ್ಯಾಣ ಮಂಟಪದ ಬದಲು ಮನೆಯಲ್ಲಿಯೇ ಎಲ್ಲ ನೆಂಟರು ಉಳಿದುಕೊಳ್ಳುವ  ವ್ಯವಸ್ಥೆಯನ್ನು ಮಾಡಿದ್ದರು. ಮರು ದಿನ ಮದುವೆ ಇದ್ದುದ್ದರಿಂದ ಒಬ್ಬೊಬ್ಬರೇ ನೆಂಟರು ಊರಿನಿಂದ  ಮನೆಗೆ ಬರುತ್ತಿದ್ದರು. ರಮೇಶ ಮತ್ತು ಅವನ ಸ್ನೇಹಿತರು ಮನೆಗೆ ನೀರನ್ನು ಒದಗಿಸುವ ಕೆಲಸವನ್ನು ವಹಿಸಿಕೊಂಡಿದ್ದರು. ನೀರು ತರಲು … Continue reading ಯಾರೋ ಪ್ರೋಕ್ಷಣೆ ಮಾಡಿದ್ದರು … ಆದರೆ ತೀರ್ಥದಿಂದ ಅಲ್ಲ!!

ಹತ್ತಿದ ವಿಮಾನ ಅಪಘಾತಕ್ಕೀಡಾದಾಗ …

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ  ಕಥೆ: ಶ್ರೀನಾಥ್ ಹರದೂರ ಚಿದಂಬರ  ಅಂಜಲಿ ಅವತ್ತು  ಬೆಳಗಿನ ಜಾವ ಮೂರೂವರೆಗೆ   ಹೊರಡುವ ವಿಮಾನದಲ್ಲಿ ದುಬೈಗೆ,  ತನ್ನ ಗಂಡನ ಹತ್ತಿರ ಹೊರಟ್ಟಿದ್ದಳು. ಅಂಜಲಿ ಮತ್ತು ಅವಳ ಗಂಡ ಸುಮಿತ್ ಮದುವೆ ಆದ ಮೇಲೆ ದುಬೈಗೆ ಹೋಗಿ ನೆಲೆಸಿದ್ದರು.  ಹೋಗಿ ಎರಡು ವರುಷಗಳ ನಂತರ ಅಂಜಲಿ  ಆರು ತಿಂಗಳ ಗರ್ಭಿಣಿ ಆಗಿದ್ದಾಗ, ಡೆಲಿವರಿಗೆ  ಅಂತ ಭಾರತಕ್ಕೆ ಬಂದಿದ್ದಳು.  ಡೆಲಿವರಿ ಆದ ಮೇಲೆ , ಮೂರು ತಿಂಗಳು ಅಮ್ಮನ ಬಳಿ ಬಾಣಂತನ ಮಾಡಿಸಿಕೊಂಡು ಮತ್ತೆ ವಾಪಸು ಸುಮಿತನ  … Continue reading ಹತ್ತಿದ ವಿಮಾನ ಅಪಘಾತಕ್ಕೀಡಾದಾಗ …

ಸಾವಿನ ಕದ ತಟ್ಟಿ ವಾಪಸ್ಸು ಬಂದಾಗ….

ಮದ್ಯಾಹ್ನ ಊಟದ ಗಂಟೆ ಹೊಡೆದಾಗ ಶಾಲೆಯಲ್ಲಿದ್ದ ಎಲ್ಲ ಮಕ್ಕಳು ತಮ್ಮ ತಮ್ಮ ಊಟದ ಡಬ್ಬಿಗಳನ್ನು ತೆಗೆದುಕೊಂಡು ತರಗತಿಯ ಹೊರಗಡೆ ಹೋಗಲು  ಶುರು ಮಾಡಿದರು. ಮೂರನೇ ತರಗತಿಯಲ್ಲಿದ್ದ ಒಬ್ಬ ಹುಡುಗ  ತನ್ನ ಊಟದ ಡಬ್ಬ ತೆಗೆದುಕೊಂಡು ನರ್ಸರಿಯಲ್ಲಿ ಓದುತ್ತಿದ್ದ ತನ್ನ ತಮ್ಮನ  ಹತ್ತಿರ ಬಂದನು.  ಅಷ್ಟರಲ್ಲಿ ತಮ್ಮ  ಕೂಡ ತನ್ನ ಊಟದ ಡಬ್ಬಿಯನ್ನು ತೆಗೆದುಕೊಂಡು ಹೊರಗಡೆ ಬಂದು ನಿಂತುಕೊಂಡಿದ್ದ. ಇಬ್ಬರು ಶಾಲೆಯ ಆವರಣದಲ್ಲಿದ್ದ ಒಂದು ಕಟ್ಟೆಯ ಮೇಲೆ ಕುಳಿತುಕೊಂಡು ಊಟ ಮಾಡಲು ಶುರು ಮಾಡಿದರು.  ಊಟ ಮಾಡಿ ಆದ ಮೇಲೆ ಡಬ್ಬಿಗಳನ್ನು ತೊಳೆದು, ಅಲ್ಲೇ ಕಟ್ಟೆ ಮೇಲೆ … Continue reading ಸಾವಿನ ಕದ ತಟ್ಟಿ ವಾಪಸ್ಸು ಬಂದಾಗ….

ಆ ರಾತ್ರಿ ನಡೆದಿದ್ದು ..!!

ಆಕಾಶ್ ಕಾರನ್ನು ಬಹಳ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ.  ರಾತ್ರಿ ಸುಮಾರು ಹನ್ನೆರಡೂವರೆ ಆಗಿತ್ತು. ದಾರಿಯ ಅಕ್ಕ ಪಕ್ಕ ದಟ್ಟವಾದ ಕಾಡು ಮತ್ತು ದಾರಿ ತುಂಬಾ ನಿರ್ಜನವಾಗಿತ್ತು, ಕತ್ತಲು  ಭಯ ಹುಟ್ಟಿಸುವಂತಿತ್ತು. ಕಾರಿನ ಬೆಳಕು ಕತ್ತಲೆಯನ್ನು ಸೀಳಿ ದಾರಿಯ ಉದ್ದಕ್ಕೂ ಬೀಳುತಿತ್ತು. ಆಕಾಶನಿಗೆ  ಅರ್ಧ ಗಂಟೆಯಿಂದ  ಎದುರುಗಡೆಯಿಂದ   ಒಂದೇ ಒಂದು ವಾಹನ  ಕೂಡ ಸಿಕ್ಕಿರಲಿಲ್ಲ.  ಕಾರಿನಲ್ಲಿ ಸಂಗೀತ ಹಾಕಿದ್ದರು ಸಹಿತ ಹೊರಗಡೆ ಇದ್ದ  ನಿಶ್ಯಬ್ಧ ಗೊತ್ತಾಗುತ್ತಿತ್ತು. ರಸ್ತೆ  ಬದಿಯಲ್ಲಿ ಊರು ಎಷ್ಟು ದೂರ ಇದೆ ಅನ್ನುವ ಮೈಲಿ ಕಲ್ಲುಗಳು ಕಾಡಿನಲ್ಲಿ ಬೆಳೆದಿದ್ದ ಗಿಡಗಳಿಂದ ಮುಚ್ಚಿ ಹೋಗಿ, ಇನ್ನು ಎಷ್ಟು ದೂರ … Continue reading ಆ ರಾತ್ರಿ ನಡೆದಿದ್ದು ..!!

ಆಘಾತ!!

ವಾಸಂತಿ ತನ್ನ ಮಗಳ ಮನೆಯಲ್ಲಿ ವಾಸಿಸಲು ಶುರು ಮಾಡಿ ಆಗಲೇ ಎರಡು ವರುಷಗಳಾಗುತ್ತಾ ಬಂದಿತ್ತು. ವಾಸಂತಿಯ ಯಜಮಾನರು ತೀರಿಕೊಂಡ ಮೇಲೆ,  ತನ್ನ ಒಬ್ಬಳೇ ಮಗಳು ತುಂಬ ಒತ್ತಾಯ ಮಾಡಿದಳು ಅಂತ ಮಗಳ ಮನೆಗೆ ಬಂದು ತನ್ನ ಜೀವನದ ಹೊಸ ಅಧ್ಯಾಯ ಶುರು ಮಾಡಿದ್ದಳು. ವಾಸಂತಿಗೆ ಇನ್ನು ಹದಿನೆಂಟು ತುಂಬುವ ಮೊದಲೇ ಅವರ ಮನೆಯವರು ಮದುವೆ ಮಾಡಿಬಿಟ್ಟಿದ್ದರು. ವಾಸಂತಿಗೆ ೨೦ ವರುಷ ಆಗುವುದರೊಳಗೆ ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಳು. ವಾಸಂತಿಗೆ ನಲ್ವತ್ತು ವರುಷ ಆಗಬೇಕಾದರೆ ಅವಳ ಮಗಳು  ಮದುವೆ  ವಯಸ್ಸಿಗೆ ಬಂದು ಬಿಟ್ಟಿದ್ದಳು. … Continue reading ಆಘಾತ!!

ಗಂಧ ಕಳ್ಳರು … ಸಿಕ್ಕೇ ಬಿಟ್ಟರು…!!

ಯೋಗೀಶನಿಗೆ ವಿಪರೀತ ಸಿನಿಮಾ ನೋಡುವ ಹುಚ್ಚು. ಅದರಲ್ಲೂ ಪತ್ತೇದಾರಿ, ಸಾಹಸಗಳಿದ್ದ ಸಿನಿಮಾ ಅಂದರೆ ಪಂಚಪ್ರಾಣ. ಸಿನೆಮಾದಿಂದ ಪ್ರೇರಿತನಾಗಿ ತಾನು ಪತ್ತೇದಾರ ಆಗಬೇಕೆಂಬುದು ಅವನ ಬಯಕೆಯಾಗಿತ್ತು. ಕಾಲೇಜಿಗೆ ಬರುವ ಹೊತ್ತಿಗೆ,  ನಾನು ಪತ್ತೇದಾರ ಆಗೇ ಆಗುತ್ತೇನೆಂದು  ಅವನು ನಿರ್ಧಾರ ಮಾಡಿಬಿಟ್ಟಿದ್ದ.  ಹಾಗಾಗಿ ಊರಿನಲ್ಲಿ ಏನೇ ನಡೆದರೂ ಅದರ ತನಿಖೆಗೆ ಇಳಿದು ಬಿಡುತ್ತಿದ್ದ. ಅನೇಕ ರಾತ್ರಿ ಏನಾದರೂ  ಪತ್ತೆ ಮಾಡಬೇಕೆಂದು ಒಬ್ಬನೇ ಓಡಾಡುತ್ತಿದ್ದ.   ಅವನ ಸ್ನೇಹಿತರು ಅವನ ಹಿಂದೆ ಅವನ ಬಗ್ಗೆ  ಮಾತನಾಡುವುದು ಅವನಿಗೆ ಗೊತ್ತಿತ್ತು. ಯಾರೇ ಏನೇ ಹೇಳಿದರು ಅದನ್ನು ಕಂಡು ಹಿಡಿದು ಅವರಿಗೆ … Continue reading ಗಂಧ ಕಳ್ಳರು … ಸಿಕ್ಕೇ ಬಿಟ್ಟರು…!!