ಆಘಾತ!!

ವಾಸಂತಿ ತನ್ನ ಮಗಳ ಮನೆಯಲ್ಲಿ ವಾಸಿಸಲು ಶುರು ಮಾಡಿ ಆಗಲೇ ಎರಡು ವರುಷಗಳಾಗುತ್ತಾ ಬಂದಿತ್ತು. ವಾಸಂತಿಯ ಯಜಮಾನರು ತೀರಿಕೊಂಡ ಮೇಲೆ,  ತನ್ನ ಒಬ್ಬಳೇ ಮಗಳು ತುಂಬ ಒತ್ತಾಯ ಮಾಡಿದಳು ಅಂತ ಮಗಳ ಮನೆಗೆ ಬಂದು ತನ್ನ ಜೀವನದ ಹೊಸ ಅಧ್ಯಾಯ ಶುರು ಮಾಡಿದ್ದಳು. ವಾಸಂತಿಗೆ ಇನ್ನು ಹದಿನೆಂಟು ತುಂಬುವ ಮೊದಲೇ ಅವರ ಮನೆಯವರು ಮದುವೆ ಮಾಡಿಬಿಟ್ಟಿದ್ದರು. ವಾಸಂತಿಗೆ ೨೦ ವರುಷ ಆಗುವುದರೊಳಗೆ ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಳು. ವಾಸಂತಿಗೆ ನಲ್ವತ್ತು ವರುಷ ಆಗಬೇಕಾದರೆ ಅವಳ ಮಗಳು  ಮದುವೆ  ವಯಸ್ಸಿಗೆ ಬಂದು ಬಿಟ್ಟಿದ್ದಳು. … Continue reading ಆಘಾತ!!

ಗಂಧ ಕಳ್ಳರು … ಸಿಕ್ಕೇ ಬಿಟ್ಟರು…!!

ಯೋಗೀಶನಿಗೆ ವಿಪರೀತ ಸಿನಿಮಾ ನೋಡುವ ಹುಚ್ಚು. ಅದರಲ್ಲೂ ಪತ್ತೇದಾರಿ, ಸಾಹಸಗಳಿದ್ದ ಸಿನಿಮಾ ಅಂದರೆ ಪಂಚಪ್ರಾಣ. ಸಿನೆಮಾದಿಂದ ಪ್ರೇರಿತನಾಗಿ ತಾನು ಪತ್ತೇದಾರ ಆಗಬೇಕೆಂಬುದು ಅವನ ಬಯಕೆಯಾಗಿತ್ತು. ಕಾಲೇಜಿಗೆ ಬರುವ ಹೊತ್ತಿಗೆ,  ನಾನು ಪತ್ತೇದಾರ ಆಗೇ ಆಗುತ್ತೇನೆಂದು  ಅವನು ನಿರ್ಧಾರ ಮಾಡಿಬಿಟ್ಟಿದ್ದ.  ಹಾಗಾಗಿ ಊರಿನಲ್ಲಿ ಏನೇ ನಡೆದರೂ ಅದರ ತನಿಖೆಗೆ ಇಳಿದು ಬಿಡುತ್ತಿದ್ದ. ಅನೇಕ ರಾತ್ರಿ ಏನಾದರೂ  ಪತ್ತೆ ಮಾಡಬೇಕೆಂದು ಒಬ್ಬನೇ ಓಡಾಡುತ್ತಿದ್ದ.   ಅವನ ಸ್ನೇಹಿತರು ಅವನ ಹಿಂದೆ ಅವನ ಬಗ್ಗೆ  ಮಾತನಾಡುವುದು ಅವನಿಗೆ ಗೊತ್ತಿತ್ತು. ಯಾರೇ ಏನೇ ಹೇಳಿದರು ಅದನ್ನು ಕಂಡು ಹಿಡಿದು ಅವರಿಗೆ … Continue reading ಗಂಧ ಕಳ್ಳರು … ಸಿಕ್ಕೇ ಬಿಟ್ಟರು…!!

ಅಂತ್ಯ … ನಿಮಗೆ ಬಿಟ್ಟಿದ್ದು !!

ಹರಿಣಿ ಕಾಲೇಜಿನ ಕೊನೆ ವರುಷದಲ್ಲಿ ಓದುತ್ತಾ ಇದ್ದಳು.  ಕಾಲೇಜಿನಲ್ಲಿ ಅವಳ ಸೌಂದರ್ಯಕ್ಕೆ ಮನಸೋಲದವರೇ ಇರಲಿಲ್ಲ . ಪ್ರತಿ ವರುಷ ಏನಿಲ್ಲ ಅಂದರು ಕನಿಷ್ಠ ಪಕ್ಷ  ೧೫ ರಿಂದ ೨೦ ಹುಡುಗರು ಬಂದು ಅವಳ ಹತ್ತಿರ ತಮ್ಮ ಪ್ರೇಮ ನಿವೇದನೆ  ಮಾಡುತ್ತಿದ್ದರು.  ಹರಿಣಿ ಯಾರಿಗೂ  ಒಪ್ಪಿಗೆ ನೀಡಿರಲಿಲ್ಲ. ತಾನಾಯಿತು ತನ್ನ ಓದಾಯಿತು ಅನ್ನುವ ಹಾಗೆ ಇದ್ದಳು.  ಆದರೆ ಅವಳು ಅದೇ ಕಾಲೇಜಿನ  ಉಪನ್ಯಾಸಕ ಅಶೋಕನ  ಪ್ರೇಮದ ಬಲೆಯಲ್ಲಿ ಬಿದ್ದಿದ್ದ ಸಂಗತಿ ಯಾರಿಗೂ ಗೊತ್ತಿರಲಿಲ್ಲ.  ಎರಡು ವರುಷಗಳಿಂದ ಅವರ  ಪ್ರೇಮ … Continue reading ಅಂತ್ಯ … ನಿಮಗೆ ಬಿಟ್ಟಿದ್ದು !!

ಹರಿದ ಛತ್ರಿ !!

ಛಾಯಾಚಿತ್ರಣ :  ಪ್ರಜ್ಞಾ ಹೆಚ್ ಪಿ  ಕಥೆ : ಶ್ರೀನಾಥ್ ಹರದೂರ  ಚಿದಂಬರ  ದೋ .. ಎಂದು ಮಳೆ ಬಿಟ್ಟು ಬಿಡದೆ  ಸುರಿಯುತ್ತಿತ್ತು.  ಮೂರನೇ ತರಗತಿಯಲ್ಲಿ ಓದುತ್ತಿದ್ದ  ಭೂಮಿ  ಮನೆಯಿಂದ ಎರಡು ಕಿಲೋಮೀಟರು ದೂರ ಇದ್ದ  ಶಾಲೆಗೇ ತನ್ನ ಹರುಕು ಛತ್ರಿ ಹಿಡಿದು ನಡೆದುಕೊಂಡು ಹೋಗುತ್ತಿದ್ದಳು. ಹೋಗುವಾಗ ಆಗಾಗ   ಛತ್ರಿಯ ಬಟ್ಟೆ  ತಂತಿಯಿಂದ ಜಾರಿ ಇಳಿದಾಗ, ಅದನ್ನು ತಂತಿಯ ತುದಿಗೆ ಮತ್ತೆ ಸಿಕ್ಕಿಸಿಕೊಂಡು,  ಆ ಜಿಟಿ ಜಿಟಿ ಮಳೆಯಲ್ಲಿ ಬರಿಕಾಲಲ್ಲಿ ಪುಟ್ಟ ಹೆಜ್ಜೆಗಳನ್ನಿಡುತ್ತ, ದಾರಿಯಲ್ಲಿ ನಿಂತಿದ್ದ ನೀರನ್ನು  ಕಾಲಿನಲ್ಲಿ ಪಚ ಪಚ ತುಳಿಯುತ್ತ , ಶಾಲೆ ಕಡೆಗೆ ಹೋಗುತ್ತಿದ್ದಳು. ಹಿಡಿದ ಛತ್ರಿಯಿಂದ … Continue reading ಹರಿದ ಛತ್ರಿ !!

ಆಮ್ಲೆಟ್, ಪಲಾವ್ ಮತ್ತು ಕಳ್ಳ !!

ಅವತ್ತು  ಒಂದು ಮನೆಯಲ್ಲಿ ವಾಸವಿದ್ದ  ಬ್ಯಾಚುಲರ್  ಹುಡುಗರು ಸೆಕೆಂಡ್ ಶೋ ಸಿನೆಮಾಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲ ಅಂತ ಅವರ ಮನೆಗೆ ಒಬ್ಬ ಕಳ್ಳ ಹಿಂಬದಿ ಬಾಗಿಲು ಒಡೆದು ಒಳ ನುಗ್ಗಿದ್ದ. ಮನೆಯನ್ನೇ ಲೂಟಿ ಮಾಡಿಕೊಂಡು ಹೋಗಬೇಕೆಂದು  ನುಗ್ಗಿದ ಕಳ್ಳನಿಗೆ ಬಹಳ ನಿರಾಸೆ  ಆಯಿತು. ಅವನಿಗೆ ಮನೆಯಲ್ಲಿ ತೆಗೆದುಕೊಂಡು ಹೋಗುವ ಬೆಲೆ ಬಾಳುವ ವಸ್ತುವಾಗಲಿ ಅಥವಾ ದುಡ್ಡು  ಏನು ಇರಲಿಲ್ಲ. ಎಲ್ಲೆಂದೆರಲ್ಲಿ ಬಿದ್ದ ಬಟ್ಟೆ, ಹಾಲಿನಲ್ಲೇ ಒಣಗಿಸದ ಚಡ್ಡಿಗಳು,  ಹೆಂಡದ ಬಾಟಲಿಗಳು, ಕಸ ಗುಡಿಸದೆ ಎಲ್ಲೆಂದರಲ್ಲೇ ಬಿದ್ದ ಕಸ ನೋಡಿ ಕಳ್ಳನಿಗೆ … Continue reading ಆಮ್ಲೆಟ್, ಪಲಾವ್ ಮತ್ತು ಕಳ್ಳ !!

ಬೆಟ್ಟದ ತುದಿಯಲ್ಲಿ ..!

ಛಾಯಾಚಿತ್ರಣ: ಅಂಕಿತ  ಕಥೆ: ಶ್ರೀನಾಥ್ ಹರದೂರ ಚಿದಂಬರ  ಆತ ಏದುಸಿರು ಬಿಡುತ್ತ ಬೆಟ್ಟವನ್ನು ಹತ್ತುತ್ತಿದ್ದ. ಆತನ ಮನಸ್ಸಿನಲ್ಲಿ ಹತಾಶೆ, ಬೇಸರ,  ದುಃಖ,  ಸಿಟ್ಟು,  ಅಸಾಯಹಕತೆ ಸಂಪೂರ್ಣವಾಗಿ ಆವರಸಿ,  ಇನ್ನು ನಾನು ಬದುಕಿ ಯಾವುದೇ ಪ್ರಯೋಜನವಿಲ್ಲಾ, ನನ್ನ ಸಾವೇ ಇದಕ್ಕೆಲ್ಲ ಉಳಿದಿರುವ ಹಾದಿ ಎಂದುಕೊಂಡು ಬೆಟ್ಟ ಹತ್ತುವುದನ್ನು ಜೋರು ಮಾಡಿದ. ಕೇವಲ ಎರಡು  ದಿನಗಳ ಸಮಯದಲ್ಲಿ ಆತ ತನ್ನ ಕೆಲಸ, ಪ್ರೇಯಸಿ ಹಾಗು ತನ್ನ ತಂದೆಯನ್ನು ಕಳೆದುಕೊಂಡಿದ್ದ. ಕೊರೋನಾ ಎಂದು  ನೆಪವೊಡ್ಡಿ,  ಅವನ ಮೇಲಧಿಕಾರಿ ಅವನಿಗೆ ಯಾವುದೇ ಪ್ರಾಜೆಕ್ಟ್ ಇಲ್ಲ,  ಹಾಗಾಗಿ ನಿನ್ನನ್ನು ಕೆಲಸದಿಂದ ತೆಗೆಯುತ್ತಿದ್ದೇವೆ … Continue reading ಬೆಟ್ಟದ ತುದಿಯಲ್ಲಿ ..!

ಕಾಲ ಚಕ್ರ

ಅಪ್ಪ ಅಮ್ಮ ಇಬ್ಬರು ಆಫೀಸು  ಕೆಲಸ ಮುಗಿಸಿ ಸುಸ್ತು ಆಗಿ ಮನೆ ಒಳಗಡೆ ಬಂದರು.  ಬಾಗಿಲಲ್ಲೇ ಅವರನ್ನೇ ಕಾಯುತ್ತಿದ್ದ ಮಗ  ಅಪ್ಪ ಅಮ್ಮನ ಹತ್ತಿರ ಓಡಿಬಂದ.  ಇಬ್ಬರು ತುಂಬಾ ಸುಸ್ತು ಆಗಿದೆ ಪುಟ್ಟ ಆಮೇಲೆ ಬಾ ಎಂದು ಹೇಳಿ ವಾಪಸು ಕಳಿಸಿದರು.  ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಅವರಿಬ್ಬರ ಹತ್ತಿರ ಬಂದ. ಅಪ್ಪ ಅಮ್ಮ ಇಬ್ಬರು ಮೊಬೈಲ್ ನೋಡುತ್ತಾ ಬ್ಯುಸಿ ಆಗಿದ್ದರು.  ಅವನ ಕಡೆ ಗಮನ ಕೊಡಲಿಲ್ಲ.  ದಿನಗಳು ಕಳೆದಂತೆ ಮಗ ಅಪ್ಪ ಅಮ್ಮನ ಹತ್ತಿರ ಬರುವುದನ್ನು ನಿಲ್ಲಿಸಿದ.  ಕಾಲ … Continue reading ಕಾಲ ಚಕ್ರ

ಬೆಕ್ಕಿನ ಅಹಂಕಾರ

ಛಾಯಾಚಿತ್ರಣ: ಅಂಕಿತ  ಕಥೆ: ಶ್ರೀನಾಥ್ ಹರದೂರ ಚಿದಂಬರ  ಒಂದು ಊರಲ್ಲಿ ಬಹಳ  ಸುಂದರವಾದ ಬೆಕ್ಕಿತ್ತು.  ಅದರ ಸೌಂದರ್ಯಕ್ಕೆ ಮಾರು ಹೋಗಿ ಎಲ್ಲರು ಅದನ್ನು ಮುದ್ದು ಮಾಡಿ ಅದಕ್ಕೆ ಬಹಳ ಪ್ರೀತಿ ತೋರಿಸುತ್ತಿದ್ದರು. ಇದರಿಂದ ಬೆಕ್ಕಿನ ಮನಸ್ಸಿನಲ್ಲಿ ತನ್ನ ಬಿಟ್ಟರೆ ಯಾರು ಇಲ್ಲ ಅನ್ನುವ ಅಹಂಕಾರ ನಿಧಾನವಾಗಿ ಬೆಳೆಯತೊಡಗಿತು. ಊರಿನ ಬೇರೆ ಬೆಕ್ಕುಗಳನ್ನೆಲ್ಲ ಅದು ತಿರಸ್ಕಾರದಿಂದ ನೋಡತೊಡಗಿತು. ತಾನು ಹೇಳಿದ್ದೆ ಸರಿ ತಾನು ಮಾಡಿದ್ದೆ ಸರಿ ಎನ್ನುವ ಅಹಂಕಾರ ತಲೆಗೇರಿತು. ಬೇರೆ ಬೆಕ್ಕುಗಳು ಏನೇ ಹೇಳಿದರು ಅವುಗಳ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ.   ಒಂದು … Continue reading ಬೆಕ್ಕಿನ ಅಹಂಕಾರ

ಸ್ವಾಭಿಮಾನ

ಮಂಜಣ್ಣನವರು  ಒಂದೇ  ಕಂಪನಿಯಲ್ಲಿ ಸರಿ ಸುಮಾರು ೨೫ ವರುಷದಿಂದ ಕೆಲಸ ಮಾಡುತ್ತಿದ್ದರು. ಬಹಳ ಸಜ್ಜನ ಹಾಗು ಒಳ್ಳೆಯ ಕೆಲಸಗಾರ ಎಂದು ಹೆಸರು ಮಾಡಿದ್ದರು. ಯಾವತ್ತಿಗೂ ಯಾರಿಗೂ ಕೆಟ್ಟದಾಗಿ ಅವರು  ಮಾತನಾಡಿದ್ದು ಯಾರು ನೋಡಿರಲಿಲ್ಲ. ಕೈಲಾದರೆ ಯಾರಿಗಾದರೂ ಸಹಾಯ ಮಾಡುತ್ತಿದ್ದರು,  ಇಲ್ಲ ಅಂದರೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಯಾರಿಗೂ  ತನ್ನಿಂದ ಯಾವತ್ತಿಗೂ ತೊಂದರೆ ಆಗಬಾರದು ಅನ್ನುವುದು ಅವರ ಸಿದ್ದಾಂತವಾಗಿತು. ಸಾಲ ಏನಾದ್ರೂ ತೆಗೆದುಕೊಂಡರೆ ಅದನ್ನು ಒಂದು ಪೈಸೆ ಬಿಡದೆ  ತೀರಿಸುವ ತನಕ ಅವರಿಗೆ ಸಮಾಧಾನವಿರುತ್ತಿರಲಿಲ್ಲ. ಮನೆ ಕಟ್ಟಲು ಮಾಡಿದ ಸಾಲ … Continue reading ಸ್ವಾಭಿಮಾನ

ಅಂತ್ಯಕ್ರಿಯೆ

ಅಂತ್ಯಕ್ರಿಯೆ ರಾಜುರವರು  ಆಸ್ಪತ್ರೆಯಲ್ಲಿ ಹೃದಯಾಘಾತದಿಂದ  ತೀರಿಕೊಂಡಿದ್ದರು. ರಾಜುರವರು  ತುಂಬ ಹೆಸರು ಮಾಡಿದಂತ ವ್ಯಕ್ತಿ. ಸದಾ ಬೇರೆಯವರ ಸಹಾಯಕ್ಕೆ ಮುಂದೆ ನಿಲ್ಲುತ್ತಿದ್ದರು. ಯಾರಾದರೂ ಬಡವರು ತೀರಿಕೊಂಡರೆ ಅವರ ಅಂತ್ಯಕ್ರಿಯೆಗೆ ಎಲ್ಲ ರೀತಿಯ ಸಹಾಯ ಮಾಡಿ ಬರುವಂತ ಸಧ್ಗುಣಿ ಆಗಿದ್ದರು.  ಅನಾಥರಿಗೆ ಆಶ್ರಯ, ಬಡವರ  ಓದು, ಮದುವೆ, ಕೆಲಸ ಹೀಗೆ ಅನೇಕ ರೀತಿಯಲ್ಲಿ  ಸಹಾಯ ಮಾಡುತ್ತಿದ್ದಂತ ವ್ಯಕ್ತಿ ಅವರಾಗಿದ್ದರು. ಮನೆಯಲ್ಲಿ ಸಹಿತ ಅವರನ್ನು ಕಂಡರೆ ಎಲ್ಲರಿಗು ಬಹಳ ಗೌರವ ಮತ್ತು ಮಕ್ಕಳಿಗೆ  ಸ್ವಲ್ಪ ಭಯ ಕೂಡ ಇತ್ತು.  ವಿಷಯ ತಿಳಿದ ಕೂಡಲೇ  ರಾಜು ಅವರ   … Continue reading ಅಂತ್ಯಕ್ರಿಯೆ