ಕಾಲ ಚಕ್ರ

ಅಪ್ಪ ಅಮ್ಮ ಇಬ್ಬರು ಆಫೀಸು  ಕೆಲಸ ಮುಗಿಸಿ ಸುಸ್ತು ಆಗಿ ಮನೆ ಒಳಗಡೆ ಬಂದರು.  ಬಾಗಿಲಲ್ಲೇ ಅವರನ್ನೇ ಕಾಯುತ್ತಿದ್ದ ಮಗ  ಅಪ್ಪ ಅಮ್ಮನ ಹತ್ತಿರ ಓಡಿಬಂದ.  ಇಬ್ಬರು ತುಂಬಾ ಸುಸ್ತು ಆಗಿದೆ ಪುಟ್ಟ ಆಮೇಲೆ ಬಾ ಎಂದು ಹೇಳಿ ವಾಪಸು ಕಳಿಸಿದರು.  ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಅವರಿಬ್ಬರ ಹತ್ತಿರ ಬಂದ. ಅಪ್ಪ ಅಮ್ಮ ಇಬ್ಬರು ಮೊಬೈಲ್ ನೋಡುತ್ತಾ ಬ್ಯುಸಿ ಆಗಿದ್ದರು.  ಅವನ ಕಡೆ ಗಮನ ಕೊಡಲಿಲ್ಲ.  ದಿನಗಳು ಕಳೆದಂತೆ ಮಗ ಅಪ್ಪ ಅಮ್ಮನ ಹತ್ತಿರ ಬರುವುದನ್ನು ನಿಲ್ಲಿಸಿದ.  ಕಾಲ … Continue reading ಕಾಲ ಚಕ್ರ

ಬೆಕ್ಕಿನ ಅಹಂಕಾರ

ಛಾಯಾಚಿತ್ರಣ: ಅಂಕಿತ  ಕಥೆ: ಶ್ರೀನಾಥ್ ಹರದೂರ ಚಿದಂಬರ  ಒಂದು ಊರಲ್ಲಿ ಬಹಳ  ಸುಂದರವಾದ ಬೆಕ್ಕಿತ್ತು.  ಅದರ ಸೌಂದರ್ಯಕ್ಕೆ ಮಾರು ಹೋಗಿ ಎಲ್ಲರು ಅದನ್ನು ಮುದ್ದು ಮಾಡಿ ಅದಕ್ಕೆ ಬಹಳ ಪ್ರೀತಿ ತೋರಿಸುತ್ತಿದ್ದರು. ಇದರಿಂದ ಬೆಕ್ಕಿನ ಮನಸ್ಸಿನಲ್ಲಿ ತನ್ನ ಬಿಟ್ಟರೆ ಯಾರು ಇಲ್ಲ ಅನ್ನುವ ಅಹಂಕಾರ ನಿಧಾನವಾಗಿ ಬೆಳೆಯತೊಡಗಿತು. ಊರಿನ ಬೇರೆ ಬೆಕ್ಕುಗಳನ್ನೆಲ್ಲ ಅದು ತಿರಸ್ಕಾರದಿಂದ ನೋಡತೊಡಗಿತು. ತಾನು ಹೇಳಿದ್ದೆ ಸರಿ ತಾನು ಮಾಡಿದ್ದೆ ಸರಿ ಎನ್ನುವ ಅಹಂಕಾರ ತಲೆಗೇರಿತು. ಬೇರೆ ಬೆಕ್ಕುಗಳು ಏನೇ ಹೇಳಿದರು ಅವುಗಳ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ.   ಒಂದು … Continue reading ಬೆಕ್ಕಿನ ಅಹಂಕಾರ

ಸ್ವಾಭಿಮಾನ

ಮಂಜಣ್ಣನವರು  ಒಂದೇ  ಕಂಪನಿಯಲ್ಲಿ ಸರಿ ಸುಮಾರು ೨೫ ವರುಷದಿಂದ ಕೆಲಸ ಮಾಡುತ್ತಿದ್ದರು. ಬಹಳ ಸಜ್ಜನ ಹಾಗು ಒಳ್ಳೆಯ ಕೆಲಸಗಾರ ಎಂದು ಹೆಸರು ಮಾಡಿದ್ದರು. ಯಾವತ್ತಿಗೂ ಯಾರಿಗೂ ಕೆಟ್ಟದಾಗಿ ಅವರು  ಮಾತನಾಡಿದ್ದು ಯಾರು ನೋಡಿರಲಿಲ್ಲ. ಕೈಲಾದರೆ ಯಾರಿಗಾದರೂ ಸಹಾಯ ಮಾಡುತ್ತಿದ್ದರು,  ಇಲ್ಲ ಅಂದರೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಯಾರಿಗೂ  ತನ್ನಿಂದ ಯಾವತ್ತಿಗೂ ತೊಂದರೆ ಆಗಬಾರದು ಅನ್ನುವುದು ಅವರ ಸಿದ್ದಾಂತವಾಗಿತು. ಸಾಲ ಏನಾದ್ರೂ ತೆಗೆದುಕೊಂಡರೆ ಅದನ್ನು ಒಂದು ಪೈಸೆ ಬಿಡದೆ  ತೀರಿಸುವ ತನಕ ಅವರಿಗೆ ಸಮಾಧಾನವಿರುತ್ತಿರಲಿಲ್ಲ. ಮನೆ ಕಟ್ಟಲು ಮಾಡಿದ ಸಾಲ … Continue reading ಸ್ವಾಭಿಮಾನ

ಅಂತ್ಯಕ್ರಿಯೆ

ಅಂತ್ಯಕ್ರಿಯೆ ರಾಜುರವರು  ಆಸ್ಪತ್ರೆಯಲ್ಲಿ ಹೃದಯಾಘಾತದಿಂದ  ತೀರಿಕೊಂಡಿದ್ದರು. ರಾಜುರವರು  ತುಂಬ ಹೆಸರು ಮಾಡಿದಂತ ವ್ಯಕ್ತಿ. ಸದಾ ಬೇರೆಯವರ ಸಹಾಯಕ್ಕೆ ಮುಂದೆ ನಿಲ್ಲುತ್ತಿದ್ದರು. ಯಾರಾದರೂ ಬಡವರು ತೀರಿಕೊಂಡರೆ ಅವರ ಅಂತ್ಯಕ್ರಿಯೆಗೆ ಎಲ್ಲ ರೀತಿಯ ಸಹಾಯ ಮಾಡಿ ಬರುವಂತ ಸಧ್ಗುಣಿ ಆಗಿದ್ದರು.  ಅನಾಥರಿಗೆ ಆಶ್ರಯ, ಬಡವರ  ಓದು, ಮದುವೆ, ಕೆಲಸ ಹೀಗೆ ಅನೇಕ ರೀತಿಯಲ್ಲಿ  ಸಹಾಯ ಮಾಡುತ್ತಿದ್ದಂತ ವ್ಯಕ್ತಿ ಅವರಾಗಿದ್ದರು. ಮನೆಯಲ್ಲಿ ಸಹಿತ ಅವರನ್ನು ಕಂಡರೆ ಎಲ್ಲರಿಗು ಬಹಳ ಗೌರವ ಮತ್ತು ಮಕ್ಕಳಿಗೆ  ಸ್ವಲ್ಪ ಭಯ ಕೂಡ ಇತ್ತು.  ವಿಷಯ ತಿಳಿದ ಕೂಡಲೇ  ರಾಜು ಅವರ   … Continue reading ಅಂತ್ಯಕ್ರಿಯೆ

ಸಾವಿನ ಕಾರಣ…

ಅವರು ಬಹಳ ಪ್ರಸಿದ್ಧ ರಾಜಕಾರಣಿ ಆಗಿದ್ದರು. ಸರಕಾರದಲ್ಲಿ ಅನೇಕ ಸಲ ಮಂತ್ರಿ ಕೂಡ ಆಗಿದ್ದರು. ವಿಪರೀತ ಹಣ, ಆಸ್ತಿ, ಕಾರುಗಳು, ಬಂಗಲೆಗಳು ಮಾಡಿದ್ದರು. ಆರೋಗ್ಯ ಇಲಾಖೆಯಲ್ಲಿ ಮಂತ್ರಿ ಆದ ಮೇಲಂತೂ ಅವರ ಆಸ್ತಿ ಮೂರು ಪಟ್ಟು ಜಾಸ್ತಿ ಆಗಿತ್ತು. ಅಂದು ಅವರ ಮನೆಗೆ ಇಬ್ಬರು ವ್ಯಕ್ತಿಗಳು ಬಂದು ಅವರಿಗಾಗಿ ಕಾಯುತ್ತ ಇದ್ದರು. ಮಂತ್ರಿಗಳ ಅಸಿಸ್ಟಂಟ್ ಅವರನ್ನು ಮಂತ್ರಿಗಳ ಹತ್ತಿರ ಕರೆದುಕೊಂಡು ಹೋದ. ಅವರು ಒಂದು ಡೂಪ್ಲಿಕೇಟ್ ಮೆಡಿಕಲ್ ಇಕ್ವಿಪ್ಮೆಂಟ್ ತಯಾರು ಮಾಡುವ ಕಂಪನಿಯನ್ನು ನಡೆಸುತ್ತಿದ್ದರು.  ರೋಗಿಗಳಿಗೆ ಉಸಿರಾಡಲು ಸಹಾಯ … Continue reading ಸಾವಿನ ಕಾರಣ…

ಪಾರ್ಕ್ ಅಂಡ್ ಪಾಕೆಟ್ ಮನಿ

ಛಾಯಾಚಿತ್ರಣ: ಅಂಕಿತ  ಕಥೆ : ಶ್ರೀನಾಥ್ ಹರದೂರ ಚಿದಂಬರ  ಸೂರ್ಯ ಮುಳುಗಿ ಕತ್ತಲಾಗುತ್ತ ಬಂದಿತ್ತು.  ಕತ್ತಲಾಗುವುದೊರಳಗೆ  ಬೇಗ  ಮನೆ ಸೇರಿಕೊಳ್ಳಬೇಕು ಅನ್ನುವ  ಗಡಿಬಿಡಿಯಲ್ಲಿ ಕೆಲವರು ಇದ್ದರೆ, ಪಾರ್ಕಿನಲ್ಲಿ ಕುಳಿತ ಪ್ರೇಮಿಗಳಿಗೆ ಬೇಗ ಕತ್ತಲಾದರೆ ಇನ್ನು ಅಂಟಿಕೊಂಡು ಕೂರಬಹುದಲ್ಲ ಎಂಬ ಆಲೋಚನೆ.  ನಿಧಾನವಾಗಿ ಕತ್ತಲು ಕವಿಯತೊಡಗಿತು, ಪ್ರೇಮಿಗಳು ಅಂಟಿಕೊಳ್ಳಲಾರಂಭಿಸಿದರು. ಪಾರ್ಕಿನಲ್ಲಿ ಪ್ರೇಮಿಗಳು ಬಿಟ್ಟರೆ ಬೇರೆ ಯಾರು ಇರಲಿಲ್ಲ. ದೂರದಲ್ಲಿ ಪೊಲೀಸ್ ಪೀಪಿ ಊದುತ್ತಾ ಎಲ್ಲರನ್ನು ಪಾರ್ಕಿನಿಂದ ಹೊರಗಡೆ ಕಳುಹಿಸಲು ಬರತೊಡಗಿದ. ಬೆಂಚಿನ ಮೇಲೆ ಕುಳಿತ ಪ್ರೇಮಿಗಳು ತಮ್ಮ ಪರ್ಸಿನಿಂದ ದುಡ್ಡು ತೆಗೆದು ಕೈಯಲ್ಲಿ ಇಟ್ಟುಕೊಳ್ಳಲು ಶುರು ಮಾಡಿದರು. ಪೊಲೀಸ್ … Continue reading ಪಾರ್ಕ್ ಅಂಡ್ ಪಾಕೆಟ್ ಮನಿ

ಸೂಸೈಡ್ ನೋಟ್

ರಾಜು ಮತ್ತು ಪ್ರಮೋದ ಇಬ್ಬರು ಪ್ರಾಣ ಸ್ನೇಹಿತರು. ಅವರಿಬ್ಬರು  ಚಿಕ್ಕಂದಿನಿಂದಲೂ ಒಂದೇ ಶಾಲೆಯಲ್ಲಿ ಓದಿ,  ಈಗ  ಒಂದೇ ಕಾಲೇಜಿಗೂ ಸಹ  ಕಾಲಿಟ್ಟಿದ್ದರು.  ಕಾಲೇಜಿನಲ್ಲಿ ಶಾಲೆಯಲ್ಲಿದ್ದ ತರಹ ಮೇಷ್ಟ್ರುಗಳ ಕಾಟ ಬೇರೆ  ಇರಲಿಲ್ಲ. ಸ್ವತಂತ್ರ ಹಕ್ಕಿಗಳ ರೀತಿ ಆರಾಮಾಗಿ ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದರು.  ರಾಜು ಬಹಳ ಜವಾಬ್ಧಾರಿಯುತ  ವ್ಯಕ್ತಿ,  ತನ್ನ ಓದು  ಮತ್ತು ಆಟ  ಬಿಟ್ಟರೆ ಬೇರೆ ವಿಷಯಕ್ಕೆ ತಲೆ ಹಾಕುತ್ತಿರಲಿಲ್ಲ. ಆದರೆ ಪ್ರಮೋದ ಅದಕ್ಕೆ ತದ್ವಿರುದ್ದ ಸ್ವಭಾವ, ವಿಪರೀತ ತಲೆಹರಟೆ, ತಮಾಷೆಯಾ ಸ್ವಭಾವ. ಪ್ರಮೋದ ರಾಜುವಿನ ಮಾತು ಬಿಟ್ಟರೆ ಯಾರ ಮಾತನ್ನ ಕೇಳುತ್ತಿರಲಿಲ್ಲ. ದಿನಗಳು ಸುಂದರವಾಗಿ ಕಳೆಯುತ್ತಾ … Continue reading ಸೂಸೈಡ್ ನೋಟ್

ನಡುಕ ಹುಟ್ಟಿಸಿದ ಆ ಸಂಜೆ…

ಛಾಯಾಚಿತ್ರಣ:  ಅಂಕಿತ  ಕಥೆ : ಶ್ರೀನಾಥ್ ಹರದೂರ ಚಿದಂಬರ  ಮನೆಯಲ್ಲಿ ಅಕ್ಕ ಮತ್ತು ಅವಳ ತಮ್ಮಂದಿರು ಮಾತ್ರ ಇದ್ದರು. ಅಪ್ಪ ಅಮ್ಮ ಇಬ್ಬರು ಹೊರಗಡೆ ಪೇಟೆಗೆ ಹೋಗಿದ್ದರು. ಸಾಯಂಕಾಲ ೬ ಗಂಟೆ ಆಗುತ್ತಾ ಬಂದಿತ್ತು.  ಕೂಗಿ ಕರೆದರೇ,  ಕೂಡಲೇ  ಬರುವಷ್ಟು ಹತ್ತಿರದಲ್ಲಿ ಬೇರೆ ಯಾವ ಮನೆಯು ಇರಲಿಲ್ಲ.  ಅಕ್ಕ ಕಾಲೇಜಿನಲ್ಲಿ ಓದುತ್ತಿದ್ದಳು ಮತ್ತು ತಮ್ಮಂದಿರು ಇನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಎಲ್ಲರು ಮನೆಯ ನಡುಮನೆಯಲ್ಲಿ ಓದುತ್ತಾ ಕುಳಿತ್ತಿದ್ದರು. ಆಗ ಮನೆಯ ಹಿಂಭಾಗದಲ್ಲಿ ಇದ್ದಕ್ಕಿದ್ದಂತೆ ಯಾರೋ ಹೆಣ್ಣು ಹುಡುಗಿ ವಿಕಾರವಾಗಿ … Continue reading ನಡುಕ ಹುಟ್ಟಿಸಿದ ಆ ಸಂಜೆ…

ಇರುವೆಯ ಪ್ರಾರ್ಥನೆ…!

ಛಾಯಾಚಿತ್ರಣ: ಅಂಕಿತ  ಕಥೆ: ಶ್ರೀನಾಥ್ ಹರದೂರ  ಚಿದಂಬರ  ಸೂರ್ಯ ಮುಳುಗಿ   ಕತ್ತಲು  ಆವರಿಸುತ್ತಾ ಬಂದಿತ್ತು.  ಒಬ್ಬಂಟಿ  ಇರುವೆ ತನ್ನ ಗುಂಪಿನಿಂದ ಬೇರೆ ಆಗಿ ತನ್ನ ಗೂಡಿಗೆ ವಾಪಸು ಹೋಗಲು  ಪರದಾಡುತಿತ್ತು.  ಅದಕ್ಕೆ ಗೊತ್ತಿಲ್ಲದೇ ಒಂದು ಸಣ್ಣ ಮರವನ್ನು ಹತ್ತುತ್ತ  ಹೋಗುತಿತ್ತು.  ಮೇಲೆ ಹೋದ ಮೇಲೆ ಅದಕ್ಕೆ  ದಾರಿ ಕಾಣದೆ ತಿರುಗಿ ಇಳಿಯಲು ಹೋದಾಗ ಆಯಾ ತಪ್ಪಿ ಕೆಳಗೆ ಬೀಳಲು ಶುರು ಮಾಡಿತು. ಅದಕ್ಕೆ ತನ್ನ ಸಾವು ಖಂಡಿತ ಅಂತ ಅನಿಸಲು ಶುರುಮಾಡಿ,  ದೇವರನ್ನು , ನನ್ನನ್ನು ಕೆಳಗೆ ಬೀಳದಂತೆ … Continue reading ಇರುವೆಯ ಪ್ರಾರ್ಥನೆ…!

ಪ್ರೀತಿ ಮತ್ತು ಧರ್ಮ

- ಶ್ರೀನಾಥ್ ಹರದೂರ ಚಿದಂಬರ  ಅವನು ಅವಳ ಹತ್ತಿರ ತನ್ನ ಪ್ರೀತಿಯನ್ನು ಹೇಳಿಕೊಂಡ. ಅವಳು ಅದನ್ನು ಒಪ್ಪಿಕೊಂಡಳು. ಅವನು ಅವಳ ಧರ್ಮ ಕೇಳಲಿಲ್ಲ, ಅವಳು ಅವನ ಧರ್ಮ ಕೇಳಲಿಲ್ಲ.  ಪ್ರೀತಿಯ ದೀಪ ಹೊತ್ತಿಕೊಂಡಿತು.  ಅವಳ ಮನೆಯವರಿಗೆ ತಿಳಿದು ಅವನನ್ನು ಚೆನ್ನಾಗಿ ಹೊಡೆದು ಅವಳ ಸುದ್ದಿಗೆ ಬಂದರೆ, ಅದು ನಮ್ಮ ಧರ್ಮದ ಸುದ್ದಿಗೆ ಬಂದಂತೆ ,  ಅವಳನ್ನು ಮತ್ತೊಮ್ಮೆ ಭೇಟಿ ಮಾಡಿದರೆ   ಜೀವ ಸಹಿತ ಬಿಡುವುದಿಲ್ಲ ಅಂದರು. ಧರ್ಮ ದ್ವೇಷದ ಬೆಂಕಿ ಹೊತ್ತಿಕೊಂಡಿತು.  ಅವನ ಧರ್ಮದವರಿಗೆ ವಿಷ್ಯ ತಿಳಿದು ಅವಳ ಮನೆಯವರ ಮೇಲೆ … Continue reading ಪ್ರೀತಿ ಮತ್ತು ಧರ್ಮ