ಪ್ರೀತಿ ಮತ್ತು ಧರ್ಮ

- ಶ್ರೀನಾಥ್ ಹರದೂರ ಚಿದಂಬರ  ಅವನು ಅವಳ ಹತ್ತಿರ ತನ್ನ ಪ್ರೀತಿಯನ್ನು ಹೇಳಿಕೊಂಡ. ಅವಳು ಅದನ್ನು ಒಪ್ಪಿಕೊಂಡಳು. ಅವನು ಅವಳ ಧರ್ಮ ಕೇಳಲಿಲ್ಲ, ಅವಳು ಅವನ ಧರ್ಮ ಕೇಳಲಿಲ್ಲ.  ಪ್ರೀತಿಯ ದೀಪ ಹೊತ್ತಿಕೊಂಡಿತು.  ಅವಳ ಮನೆಯವರಿಗೆ ತಿಳಿದು ಅವನನ್ನು ಚೆನ್ನಾಗಿ ಹೊಡೆದು ಅವಳ ಸುದ್ದಿಗೆ ಬಂದರೆ, ಅದು ನಮ್ಮ ಧರ್ಮದ ಸುದ್ದಿಗೆ ಬಂದಂತೆ ,  ಅವಳನ್ನು ಮತ್ತೊಮ್ಮೆ ಭೇಟಿ ಮಾಡಿದರೆ   ಜೀವ ಸಹಿತ ಬಿಡುವುದಿಲ್ಲ ಅಂದರು. ಧರ್ಮ ದ್ವೇಷದ ಬೆಂಕಿ ಹೊತ್ತಿಕೊಂಡಿತು.  ಅವನ ಧರ್ಮದವರಿಗೆ ವಿಷ್ಯ ತಿಳಿದು ಅವಳ ಮನೆಯವರ ಮೇಲೆ … Continue reading ಪ್ರೀತಿ ಮತ್ತು ಧರ್ಮ

ಪ್ರಾಮಾಣಿಕತೆ

ಸಣ್ಣ ಕಥೆ : ಶ್ರೀನಾಥ್ ಹರದೂರ ಚಿದಂಬರ  ಗುಮಾಸ್ತರಾಗಿ ಕೆಲಸ ಶುರು ಮಾಡಿದ  ಅವರು, ಅದೇ ಕಚೇರಿಯಲ್ಲಿ  ಮ್ಯಾನೇಜರ್ ಆಗಿ ಬಡ್ತಿ ಹೊಂದಿದ್ದರು.  ಇವತ್ತಿನವರೆಗೂ  ಒಬ್ಬರ ಹತ್ತಿರವು  ಲಂಚಕ್ಕಾಗಿ ಕೈ ಚಾಚಿರಲಿಲ್ಲ ಮತ್ತು ಲಂಚ ಕೊಡಲು ಬಿಡುತ್ತಿರಲಿಲ್ಲ.  ಪ್ರಾಮಾಣಿಕತೆಯೇ ಜೀವನ ಎಂಬಂತೆ ಬದುಕಿದ್ದರು. ಅವರನ್ನು ಕಂಡರೆ ಊರಿನ ಜನ, ಪಕ್ಕದ ಹಳ್ಳಿಯ ಜನರು ಸಹ ಬಹಳ ಗೌರವ ಕೊಡುತ್ತಿ ದ್ದರು. ಅವರ ಪ್ರಾಮಾಣಿಕತೆ ಬಗ್ಗೆ ಪ್ರತಿಯೊಬ್ಬರು ಮೆಚ್ಚಿ ಹೊಗಳುತ್ತಿದ್ದರು.  ಕೊನೆಗೆ 32ವರುಷ ಸೇವೆ ಸಲ್ಲಿಸಿ ನಿವೃತ್ತರಾದರು.  ಒಂದು ವಾರ ಕಳೆದ ಮೇಲೆ ಪಿಂಚಣಿ  ಪಡೆಯಲು ಅರ್ಜಿ … Continue reading ಪ್ರಾಮಾಣಿಕತೆ

ಮನೆ ಕೆಲಸ ತಾನೇ!! ಏನು ಮಹಾ ಅಲ್ವಾ ?

ಕಥೆ : ಶ್ರೀನಾಥ್ ಹರದೂರ ಚಿದಂಬರ  ಬೆಳಿಗ್ಗೆ ೫:೩೦ಕ್ಕೆ ಅಲಾರಾಂ ಶಬ್ದ ಮಾಡಲು ಶುರು  ಮಾಡಿತು. ಅವಳು ಎಂದಿನಂತೆ ಎದ್ದು ಅಲಾರಾಂ ಆಫ್ ಮಾಡಿ  ದೇವರಿಗೆ ನಮಸ್ಕರಿಸಿ ಮಂಚದಿಂದ ಇಳಿದು ಬಚ್ಚಲು ಮನೆಗೆ   ಹೋದಳು.  ನಿತ್ಯ  ಕರ್ಮಗಳನ್ನು ಮುಗಿಸಿಕೊಂಡು ಅಡುಗೆ ಮನೆಗೆ ಹೋಗಿ ಬೆಳಗ್ಗಿನ ತಿಂಡಿ, ಹಾಗು ಮಕ್ಕಳಿಗೆ ಮತ್ತು ಗಂಡನಿಗೆ ಮದ್ಯಾಹ್ನದ  ಊಟಕ್ಕೆ ಅಡುಗೆ ಮಾಡಲು ಶುರು ಹಚ್ಚಿಕೊಂಡಳು. ಸಮಯ ಜಾರುತ್ತಿತ್ತು, ಆಗಾಗ ಗಡಿಯಾರದ ಕಡೆ ನೋಡುತ್ತಾ ತಿಂಡಿ ತಯಾರು ಮಾಡಿದಳು. ಆಮೇಲೆ ಕೋಣೆಗೆ ಹೋಗಿ  ಮಗನನ್ನು ಎಬ್ಬಿಸಿ ರೆಡಿ ಆಗಲು … Continue reading ಮನೆ ಕೆಲಸ ತಾನೇ!! ಏನು ಮಹಾ ಅಲ್ವಾ ?

ಗೀಜಗದ ಗೂಡು ಮತ್ತು ಬೇಲಿ

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ   ಕಥೆ  : ಶ್ರೀನಾಥ್ ಹರದೂರ ಚಿದಂಬರ  ಪ್ರತಿ ದಿನ  ಬಿಸಿಲು ಇಳಿಯುವ ಹೊತ್ತಿಗೆ ಅವಳು ಹಳ್ಳದ ಹತ್ತಿರ ಬಂದು ಕೂರುತ್ತಿದ್ದಳು.  ತಣ್ಣಗೆ ಹರಿಯುವ ನೀರಿನಲ್ಲಿ ತನ್ನ ಕಾಲನ್ನು ಇಟ್ಟುಕೊಂಡು, ಕಾಲಿಗೆ ಸಣ್ಣ ಸಣ್ಣ ಮೀನುಗಳು ಬಂದು ಮುತ್ತಿಕ್ಕುವುದನ್ನೇ ನೋಡುತ್ತಾ ಕುಳಿತರೆ ಕಾಲ ಕಳೆಯುವುದೇ  ಅವಳಿಗೆ ಗೊತ್ತಾಗುತ್ತಿರಲಿಲ್ಲ.  ನೀರಿನ ಜುಳು ಜುಳು ಶಬ್ದ , ಪಕ್ಷಿಗಳ ಚಿಲಿಪಿಲಿ  ಅವಳನ್ನು ಯಾವುದೋ ಸುಂದರ ಲೋಕಕ್ಕೆ ಕರೆದುಕೊಂಡ ಹಾಗೆ ಅನಿಸುತಿತ್ತು.  ಆದರೆ ಒಂದು ತಿಂಗಳಿನಿಂದ ಅವಳ ಗಮನ ಪೂರ್ತಿ ಹಳ್ಳದ … Continue reading ಗೀಜಗದ ಗೂಡು ಮತ್ತು ಬೇಲಿ

ಆಶ್ವಾಸನೆ….

ಕಥೆ : ಶ್ರೀನಾಥ್ ಹರದೂರ ಚಿದಂಬರ  ಸೈನಿಕ ಯುದ್ಧದಲ್ಲಿ ತನ್ನೆರಡು ಕಾಲುಗಳನ್ನು ಕಳೆದುಕೊಂಡು ಊರಿಗೆ ವಾಪಸಾದ. ರಾಜಕಾರಣಿಗಳು, ಸಂಘ ಸಂಸ್ಥೆಗಳು , ಮಾದ್ಯಮದವರು ಆತನಿಗೆ ಒಬ್ಬರಾದ ಮೇಲೆ ಒಬ್ಬರು ಬಂದು  ಸನ್ಮಾನ ಮಾಡಿದರು. ಮನೆ ಕಟ್ಟಲು ಜಾಗ, ಸರಕಾರೀ ಕೆಲಸ, ಹಣದ ಸಹಾಯ ಮಾಡುವ ಭರವಸೆಗಳು, ಆಶ್ವಾಸನೆಗಳು  ಸಾಲು ಸಾಲಾಗಿ ಬಂದವು.    ಸೈನಿಕನಿಗೆ ಈ  ಜನಕೋಸ್ಕರ  ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದು ಸಾರ್ಥಕ ಎಂಬ ಭಾವನೆ ಮೂಡಿತು.   ತಿಂಗಳ  ಬಳಿಕ ಜನ ಬರುವುದು, ಸನ್ಮಾನ ಮಾಡುವುದು  ಎಲ್ಲ ನಿಂತಿತು. ಆಶ್ವಾಸನೆ, ಭರವಸೆ ಕೊಟ್ಟವರ ಹುಡುಕಿಕೊಂಡು ಹೊರಟ … Continue reading ಆಶ್ವಾಸನೆ….

ಆಸೆ ಮತ್ತು ಆತ್ಮಸಾಕ್ಷಿ ….

ಬರೆಹ : ಶ್ರೀನಾಥ್ ಹರದೂರ ಚಿದಂಬರ  ಅವನ ಬೆರಳುಗಳು ಮೊಬೈಲ್ ಪರದೆಯ  ಮೇಲೆ  ಫೇಸ್ಬುಕ್ ನ  ಒಂದೊಂದೇ ಪುಟವನ್ನು ಕೆಳಗಿನಿಂದ ಮೇಲೆಕ್ಕೆ ತಳ್ಳುತಿತ್ತು. ಯಾವುದು ಅಂತಹ ಒಳ್ಳೆಯ ವಿಡಿಯೋಗಳಾಗಲಿ, ಫೋಟೋಗಳಾಗಲಿ ಕಾಣುತ್ತಿರಲಿಲ್ಲ. ಆದರೂ ಮೊಬೈಲ್ ಕೆಳಗಿಡಲು  ಮನಸ್ಸಿಲ್ಲದೆ ಅವನ ಕಣ್ಣುಗಳು  ಮೊಬೈಲ್ ಪರದೆಯನ್ನೇ ನೋಡುತ್ತಿದ್ದವು. ಹೆಂಡತಿ  ಮಗಳ ಶಾಲೆಗೆ ರಜಾ ಅಂತ ಮಗಳನ್ನು ಕರೆದುಕೊಂಡು ಊರಿಗೆ ಹೋಗಿ ಒಂದು ವಾರವಾಗಿತ್ತು.  ಒಬ್ಬನೇ ಆದ್ದರಿಂದ ಅವನ ಮೊಬೈಲ್ ಸದ್ಯಕ್ಕೆ ಅವನ ಸಂಗಾತಿಯಾಗಿತ್ತು. ಮೊಬೈಲ್ ನೋಡುತ್ತಿರುವಾಗಲೇ ಒಂದು ಮೆಸೇಜ್ ಬಂತು. ಅದರಲ್ಲಿ ಒಬ್ಬರೇ ಇದ್ದು ಬೇಜಾರು ಆಗಿದಿಯೇ? … Continue reading ಆಸೆ ಮತ್ತು ಆತ್ಮಸಾಕ್ಷಿ ….

ಬಡ್ತಿ

ಸಣ್ಣ ಕಥೆ  : ಶ್ರೀನಾಥ್ ಹರದೂರ ಚಿದಂಬರ  ಅವನು ತನ್ನ  ಕೆಲಸದಲ್ಲಿ ನಿರತನಾಗಿದ್ದ. ಮೇಲಾಧಿಕಾರಿ  ಬಂದು ನನ್ನ ಕೋಣೆಗೆ ಬಂದು ಹೋಗು, ನಿನ್ನ ಹತ್ತಿರ ಸ್ವಲ್ಪ ಮಾತನಾಡಬೇಕು ಎಂದು ಹೇಳಿದರು.  ಅಯ್ಯೋ, ಇನ್ನೇನು ಸಮಸ್ಯೆ ಬಂತಪ್ಪಾ ? ಅಂತ ಅಂದುಕೊಳ್ಳುತ್ತ ಅವರ  ಕೋಣೆಗೆ ಹೋದ.  ಅವನ ಮೇಲಾಧಿಕಾರಿ " ನೋಡು ನೀನು ತುಂಬಾ ಚೆನ್ನಾಗಿ ಕೆಲಸ ಮಾಡ್ತಾ ಇದ್ದಿಯಾ, ಆಡಳಿತ ಮಂಡಳಿಗೆ ನಾನು ನಿನ್ನ ಬಗ್ಗೆ  ಶಿಫಾರಸ್ಸು ಮಾಡಿದ್ದೇನೆ, ನಿನಗೆ ಬಡ್ತಿ ಸಿಗುವ ಅವಕಾಶ ಜಾಸ್ತಿ ಇದೆ, ಇನ್ನು ಎರಡು ತಿಂಗಳು ಆದ ಮೇಲೆ ನಾನು … Continue reading ಬಡ್ತಿ

ರಂಗೋಲಿ ಮತ್ತು ಇಯರ್ ಫೋನ್!!

  ಛಾಯಾಚಿತ್ರಣ: ಕೀರ್ತನ್ ಭಟ್  ಕಿರು ಕಥೆ: ಶ್ರೀನಾಥ್ ಹರದೂರ ಚಿದಂಬರ    ಆತ ಪ್ರತಿ ದಿನ ಬೆಳಿಗ್ಗೆ ತಪ್ಪದೆ ಹಾಲು ತರಲು ಅವಳ ಮನೆಯ ಮುಂದಿನಿಂದ ಹೋಗುತ್ತಿದ್ದ. ಅವಳು ಕೂಡ ಅದೇ ಸಮಯದಲ್ಲಿ ತಲೆ ಬಗ್ಗಿಸಿ ಮನೆ ಮುಂದೆ   ರಂಗೋಲಿ ಹಾಕುತ್ತ  ಕುಳಿತಿರುತ್ತಿದ್ದಳು.  ಅವಳು ಅವನನ್ನು  ನೇರವಾಗಿ ನೋಡುತ್ತಿರಲಿಲ್ಲ.  ಅವನು ಅವಳನ್ನು ನೋಡುತ್ತಾ,    ಕಿವಿಗೆ  ಇಯರ್ ಫೋನ್ ಹಾಕಿಕೊಂಡು ಯಾರದೋ ಜೊತೆ ಮಾತನಾಡುವ ಹಾಗೆ  ಅವಳ   ರಂಗೋಲಿ, ಅವಳ ಬಟ್ಟೆ , ಅವಳ ಸೌಂದರ್ಯದ ಬಗ್ಗೆ ಮಾತನಾಡುತ್ತ, ಅವಳಿಗೆ ಕೇಳುವ … Continue reading ರಂಗೋಲಿ ಮತ್ತು ಇಯರ್ ಫೋನ್!!

ಅವಳ ಸಾವಿಗೆ ಯಾವ ನಂಬಿಕೆ ಕಾರಣ !!?

ಬರಹಗಾರರು : ಶ್ರೀನಾಥ ಹರದೂರ ಚಿದಂಬರ ಪ್ರೇಮಿಗಳಿಬ್ಬರು ಉದ್ಯಾನದ ಒಂದು ಮೂಲೆಯಲ್ಲಿ ಯಾರಿಗೂ ಕಾಣದಂತೆ ಕುಳಿತ್ತಿದ್ದರು.  ಅವನು  ಅವಳನ್ನು ಮುದ್ದು ಮಾಡಲು ಒತ್ತಾಯಿಸುತ್ತಿದ್ದ. ಅವಳು ಅದೆಲ್ಲ ಮದುವೆಯ ನಂತರ,  ಈಗ ಬೇಡ ಎನ್ನುತ್ತಿದ್ದಳು. ಅವನು ನನ್ನ ಮೇಲೆ ನಿನಗೆ  ನಂಬಿಕೆ ಇಲ್ಲ,  ಅದಕ್ಕೆ ಬೇಡ ಅನ್ನುತ್ತಿದ್ದೀಯ,  ನನ್ನ ಮೇಲೆ ನಿನಗೆ ಪ್ರೀತಿ ಇಲ್ಲ  ಎಂದೆಲ್ಲ ಹೇಳಿ ನಂಬಿಕೆ ಎಂಬ ಜಾಲದಲ್ಲಿ ಬೀಳಿಸಿ ಅವಳನ್ನು  ಒಪ್ಪಿಸಿದ. ನಂತರ ಮೊದಲ ಬಾರಿ ಆದ್ದರಿಂದ, ನೆನಪಿಗೆ ಇರಲಿ ಅಂತ ಅವಳನ್ನು  ನಂಬಿಸಿ   ಮುದ್ದು ಮಾಡುವುದನ್ನು ವಿಡಿಯೋ ಮಾಡಿಕೊಂಡ.  ಮರುದಿನ ಅವನು … Continue reading ಅವಳ ಸಾವಿಗೆ ಯಾವ ನಂಬಿಕೆ ಕಾರಣ !!?

ಸರಕಾರಿ ಆಸ್ಪತ್ರೆ ಮತ್ತು ಹಲ್ಲಿ ….

ಬರಹಗಾರರು : ಶ್ರೀನಾಥ ಹರದೂರ ಚಿದಂಬರ ಮಧ್ಯರಾತ್ರಿ ಸುಮಾರು  ೧:೩೦ರ ಸಮಯ, ರಾತ್ರಿ ಪಾಳಿಯಲ್ಲಿದ್ದ ವೈದ್ಯ   ತನ್ನ ರೂಮಿನಲ್ಲಿ ಕೂತು ತೂಕಡಿಸುತ್ತಿದ್ದ. ಆಸ್ಪತ್ರೆಯಲ್ಲಿ ಕೆಲವು ರೋಗಿಗಳು ಆಗಾಗ ನರಳುವ ಶಬ್ದ ಬಿಟ್ಟು ಬೇರೇನೂ ಕೇಳಿಸದೇ ನಿಶ್ಯಬ್ದವಾಗಿತ್ತು.  ಗೋಡೆಯ ಮೇಲಿದ್ದ ಒಂದು ಹಲ್ಲಿ ಲೊಚಗುಟ್ಟಿದ ಸದ್ದಿಗೆ ಕತ್ತೆತ್ತಿ ಮೇಲೆ ನೋಡಿ " ಥುತ್,  ಇದ್ರೊದ್ದೊಂದು ಕಾಟ ಬೇರೆ " ಅಂತ ಗೊಣಗುಟ್ಟಿ ವೈದ್ಯ  ಮತ್ತೆ ತೂಕಡಿಸತೊಡಗಿದ.  ಅಷ್ಟರಲ್ಲಿ ದಾದಿ ಓಡಿಬಂದು " ನಂಬರ್ ೨೦ ರ ರೋಗಿ  ಉಸಿರಾಡಲಿಕ್ಕೆ ಕಷ್ಟ ಪಡ್ತಾ ಇದ್ದಾರೆ, ಸ್ಥಿತಿ  ಗಂಭೀರವಾಗಿದೆ, … Continue reading ಸರಕಾರಿ ಆಸ್ಪತ್ರೆ ಮತ್ತು ಹಲ್ಲಿ ….