ಆರು ವರುಷದಲ್ಲಿ ಆತ ಸುತ್ತಿದ ದೇಶಗಳ ಸಂಖ್ಯೆ 245 !!

" ದೇಶ ಸುತ್ತು ಕೋಶ ಓದು " ಎಂಬ ಮಾತು ನಮ್ಮಲ್ಲಿ ಬಹಳ ಪ್ರಚಲಿತ.  ವಿವಿಧ ದೇಶಗಳನ್ನು ಸುತ್ತುತ್ತಾ  ಅಲ್ಲಿನ ಸಂಸ್ಕೃತಿ, ಜೀವನ ಶೈಲಿ, ವಿವಿಧ ರೀತಿಯ ಜನರ ಪರಿಚಯ ಮಾಡಿಕೊಳ್ಳುತ್ತಾ,   ನಾವು ಕಲಿಯುವ  ಪಾಠಗಳು ಅನೇಕ.  ಊರು ಸುತ್ತುವ ಹುಚ್ಚು ಎಲ್ಲರಿಗು ಇರುವುದಿಲ್ಲ.  ನಮ್ಮಲ್ಲಿ ಸಿಕ್ಕಾಪಟ್ಟೆ ತಿರುಗುತ್ತ ಇದ್ದರೆ  ಅವನ ಕಾಲಲ್ಲಿ ಚಕ್ರ ಇರಬೇಕು ನೋಡಿ ಅನ್ನುತ್ತಾರೆ.  ಹೊಸ ಹೊಸ ಊರುಗಳು, ದೇಶಗಳು ನೋಡುವ ಹವ್ಯಾಸ ಎಲ್ಲರಿಗು ಇರುವುದಿಲ್ಲ.  ಕೆಲವರಂತೂ ಒಂದು ಸಣ್ಣ  ಚೀಲದಲ್ಲಿ  ಎರಡು ಜೊತೆ ಬಟ್ಟೆ ಇಟ್ಟುಕೊಂಡು … Continue reading ಆರು ವರುಷದಲ್ಲಿ ಆತ ಸುತ್ತಿದ ದೇಶಗಳ ಸಂಖ್ಯೆ 245 !!

ಕಗ್ಗತ್ತಲ ರಾತ್ರಿಯಲ್ಲಿ ಆಗಿದ್ದಾದರೂ ಏನು?

ಅವತ್ತು ರಾತ್ರಿ ಧರ್ಮಸ್ಥಳದಲ್ಲಿ  ಊಟ ಮಾಡಿ, ಅಲ್ಲಿಂದ ಹೊರಟಾಗ ಸಮಯ  ಹನ್ನೊಂದು ದಾಟಿತ್ತು.  ನಾನು ಮತ್ತು ನನ್ನ ಅತ್ತೆ ಮಗ ಮಹೇಶ ಕಾರಿನಲ್ಲಿ ದರ್ಮಸ್ಥಳದಿಂದ  ಕಾರ್ಕಳ ಮಾರ್ಗವಾಗಿ ಆಗುಂಬೆ ಘಾಟಿ ಹತ್ತಿ ತೀರ್ಥಹಳ್ಳಿ ಮೂಲಕ  ಸಾಗರಕ್ಕೆ ಹೊರಟ್ಟಿದ್ದೆವು. ನಮಗೇನು ಈ ದಾರಿ ಹೊಸದೇನು ಆಗಿರಲಿಲ್ಲ.   ಅನೇಕ ಬಾರಿ  ಅದೇ ಮಾರ್ಗದಲ್ಲಿ  ಧರ್ಮಸ್ಥಳಕ್ಕೆ ಹೋಗಿ ಬಂದು ಮಾಡಿದ್ದರಿಂದ, ರಾತ್ರಿಯಲ್ಲಿ ಕೂಡ ರಸ್ತೆ,  ದಾರಿಯಲ್ಲಿ ಸಿಗುವ ಹಳ್ಳಿಗಳು, ಅಕ್ಕ ಪಕ್ಕ ಸಿಗುವ ಅಂಗಡಿಗಳ ಗುರುತು ಸಿಗುವಷ್ಟು ಪರಿಚಯ  ಆಗಿ ಹೋಗಿತ್ತು.   ಮೊದಲಿನಿಂದಲೂ ನಮ್ಮಿಬ್ಬರಿಗೂ  ರಾತ್ರಿ  ಊರಿಂದ ಊರು ಸುತ್ತುವ … Continue reading ಕಗ್ಗತ್ತಲ ರಾತ್ರಿಯಲ್ಲಿ ಆಗಿದ್ದಾದರೂ ಏನು?

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಲ್ಲಿ ಎಷ್ಟು ಸುತ್ತು ಗುಂಡು ಹಾರಿಸಿದ್ದು ಗೊತ್ತಾ ?

ಜಲಿಯನ್ ವಾಲಾ ಬಾಗ್,  ಸಾವಿರದ ಒಂಬೈನೂರ ಹತ್ತೊಂಬತ್ತು, ಏಪ್ರಿಲ್ ೧೯ ಮದ್ಯಾಹ್ನ ೩:೩೦,  ಬರೋಬ್ಬರಿ  ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಗೆ  ಅಲ್ಲಿ ಸೇರಿದ್ದರು.  ಅದರಲ್ಲಿ ಭಾಷಣ ಮಾಡುವವರು, ಕೇಳುವವರು, ಮಕ್ಕಳು,  ವಯಸ್ಸಾದವರು, ಹೆಂಗಸರು ಎಲ್ಲರು ಸೇರಿದ್ದರು.  ಸಿಖ್ಖರು, ಹಿಂದೂಗಳು , ಮುಸ್ಲಿಮರು, ಕ್ರೈಸ್ತರು .. ಹೀಗೆ ಎಲ್ಲ ಧರ್ಮದವರು ಒಟ್ಟುಗೂಡಿದ್ದರು.  ಯಾರ ಕೈಯಲ್ಲಿ ಕೂಡ ಯಾವುದೇ ಶಸ್ತ್ರಾಸ್ತ್ರ  ಇರಲಿಲ್ಲ. ಅವರ ಕೈಯಲ್ಲಿ ಇದ್ದುದು ಕೇವಲ ಭಾರತದ ಧ್ವಜ.  ಅದೇ ಅವರೆಲ್ಲರ ಪ್ರತಿಭಟನೆಯ ಅಸ್ತ್ರವಾಗಿತ್ತು.  ಎಲ್ಲ ಕಡೆ   ವಂದೇ ಮಾತರಂ ಎಂಬ ಕೂಗು ಪ್ರತಿಧ್ವನಿಸುತ್ತಿತ್ತು. … Continue reading ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಲ್ಲಿ ಎಷ್ಟು ಸುತ್ತು ಗುಂಡು ಹಾರಿಸಿದ್ದು ಗೊತ್ತಾ ?

ಬ್ಯಾಂಕ್ ಲೂಟಿಯಲ್ಲಿ ಅವರು ದೋಚಿದ್ದು ಒಟ್ಟು ಎಂಬತ್ತು ಕೆಜಿ ಚಿನ್ನ!!

ಅವತ್ತು  ೩೧ ಡಿಸೆಂಬರ್ 2007 ಬೆಳಿಗ್ಗೆ  ಕೇರಳದ ಮಲಪ್ಪುರಂ ಜಿಲ್ಲೆಯ ಚೆಲಂಬ್ರ ಎಂಬ ಊರಿನಲ್ಲಿರುವ ಕೇರಳ ಗ್ರಾಮೀಣ     ಬ್ಯಾಂಕಿನವರು ಬೆಳಿಗ್ಗೆ  ಬ್ಯಾಂಕ್  ಒಳಗಡೆ ಬಂದು, ಲಾಕರ ( ಸ್ಟ್ರಾಂಗ್ ರೂಮ್)  ಕೋಣೆ ತೆರೆದು ನೋಡಿದಾಗ,  ಅಲ್ಲಿ ಕಂಡ ದೃಶ್ಯ ಅವರನ್ನು   ದಂಗು ಬಡಿಸಿಬಿಟ್ಟಿತ್ತು.  ಕಳ್ಳರು ಬ್ಯಾಂಕಿನ ಎಲ್ಲ ಲಾಕರುಗಳ ಜೊತೆಗೆ ಇದ್ದ ಬದ್ದ ದುಡ್ಡನ್ನೆಲ್ಲ  ಲೂಟಿ ಮಾಡಿಕೊಂಡು ಹೋಗಿದ್ದರು.  ಅದು ಅಂತಿಂತ ಲೂಟಿ ಆಗಿರಲಿಲ್ಲ,  ಬ್ಯಾಂಕಿನವರು ಕೊಟ್ಟ ಲೆಕ್ಕದ ಪ್ರಕಾರ ಕಳ್ಳರು ದೋಚಿದ್ದು ಎಂಬತ್ತು ಕೆಜಿ ಚಿನ್ನ ಮತ್ತು  ಐವತ್ತು ಲಕ್ಷ ರೂಪಾಯಿಗಳು. ಆಗಿನ ಚಿನ್ನದ ಬೆಲೆಯ  ಪ್ರಕಾರ ಹತ್ತಿರ … Continue reading ಬ್ಯಾಂಕ್ ಲೂಟಿಯಲ್ಲಿ ಅವರು ದೋಚಿದ್ದು ಒಟ್ಟು ಎಂಬತ್ತು ಕೆಜಿ ಚಿನ್ನ!!