ಅಂತ್ಯಕ್ರಿಯೆ

ಅಂತ್ಯಕ್ರಿಯೆ ರಾಜುರವರು  ಆಸ್ಪತ್ರೆಯಲ್ಲಿ ಹೃದಯಾಘಾತದಿಂದ  ತೀರಿಕೊಂಡಿದ್ದರು. ರಾಜುರವರು  ತುಂಬ ಹೆಸರು ಮಾಡಿದಂತ ವ್ಯಕ್ತಿ. ಸದಾ ಬೇರೆಯವರ ಸಹಾಯಕ್ಕೆ ಮುಂದೆ ನಿಲ್ಲುತ್ತಿದ್ದರು. ಯಾರಾದರೂ ಬಡವರು ತೀರಿಕೊಂಡರೆ ಅವರ ಅಂತ್ಯಕ್ರಿಯೆಗೆ ಎಲ್ಲ ರೀತಿಯ ಸಹಾಯ ಮಾಡಿ ಬರುವಂತ ಸಧ್ಗುಣಿ ಆಗಿದ್ದರು.  ಅನಾಥರಿಗೆ ಆಶ್ರಯ, ಬಡವರ  ಓದು, ಮದುವೆ, ಕೆಲಸ ಹೀಗೆ ಅನೇಕ ರೀತಿಯಲ್ಲಿ  ಸಹಾಯ ಮಾಡುತ್ತಿದ್ದಂತ ವ್ಯಕ್ತಿ ಅವರಾಗಿದ್ದರು. ಮನೆಯಲ್ಲಿ ಸಹಿತ ಅವರನ್ನು ಕಂಡರೆ ಎಲ್ಲರಿಗು ಬಹಳ ಗೌರವ ಮತ್ತು ಮಕ್ಕಳಿಗೆ  ಸ್ವಲ್ಪ ಭಯ ಕೂಡ ಇತ್ತು.  ವಿಷಯ ತಿಳಿದ ಕೂಡಲೇ  ರಾಜು ಅವರ   … Continue reading ಅಂತ್ಯಕ್ರಿಯೆ

ಮಾತೃ ಭಾಷೆ

ಮಾತೃ ಭಾಷೆಗೆ ಇರಬೇಕು ಯಾವಾಗಲೂ ಪ್ರಾಮುಖ್ಯತೆ ,   ಬೇರೆ ಭಾಷೆ ಕಲಿಬೇಕು ಇದ್ದರೆ ಅವಶ್ಯಕತೆ  ನಿಮಗೆ ಗೊತ್ತೇ ಹಿಂದಿ ಹೇರುವ ಹಿಂದಿರುವ ಅಸಲಿಕಥೆ  ಬಿಟ್ಟಿಹೋಗಿಲ್ಲವೇ  ಬ್ರಿಟಿಷರು ಒಡೆದು ಆಳುವ ಅನೈತಿಕತೆ  ಜಾತಿ ಧರ್ಮದ ನಂತರ ಶುರುವಾಗಿದೆ ಈಗ ಭಾಷೆಯ ರಾಜಕೀಯತೆ   ಬೆಳೆಸಿಕೊಂಡರೆ ನಮ್ಮಲ್ಲಿ ಸ್ವಲ್ಪ ವೈಚಾರಿಕತೆ ಹಾಗು ಹೃದಯ ವೈಶಾಲ್ಯತೆ  ಎಂದೆಂದಿಗೂ  ಉಳಿಸಿಕೊಳ್ಳಬಹುದು ಮಾತೃಭಾಷೆಯ  ಪಾವಿತ್ರ್ಯತೆ. - ಶ್ರೀನಾಥ್ ಹರದೂರ ಚಿದಂಬರ 

ಅಪ್ಪಾ .. ಐ ಲವ್ ಯು… ನಾಳೆ ಮೀಟ್ ಮಾಡೋಣ…

ಈ ೨೦೨೦ ವರುಷ ನಾವೆಲ್ಲಾ ಬದುಕಿರುವವರೆಗೂ ನೆನೆಪಿನಲ್ಲಿ ಇಟ್ಟುಕೊಳ್ಳುತ್ತೀವೇನೋ.  ಕೊರೋನಾ ವೈರಸ್  ಇಡೀ ಜಗತ್ತನ್ನೇ  ಆವರಿಸಿದೆ.   ಕೊರೋನಾ  ಯೂರೋಪ್ ನಲ್ಲಿ ಬಹಳ  ವ್ಯಾಪಕವಾಗಿ ಹರಡಿ ನಂತರ   ಅಷ್ಟೇ ಬೇಗ ಕಮ್ಮಿನು ಆಯಿತು.  ಈಗಂತೂ ಇಲ್ಲಿ  ಜನರ ಬದುಕು ಮೊದಲಿನಂತೆ ನಡೆಯಲು ಶುರು ಆಗಿದೆ.  ಇದರ ಮಧ್ಯೆ ನಡೆದ ಒಂದು ಘಟನೆ ಮಾತ್ರ ಮನಸ್ಸನ್ನು ಬಹಳ ಕಾಡಿಸುತ್ತಿದೆ. ಆಗಸ್ಟ್ ತಿಂಗಳಲ್ಲಿ ನನ್ನ ಹೆಂಡತಿಯ ಸಹದ್ಯೋಗಿ ಒಬ್ಬರ ಮನೆಯಲ್ಲಿ ನಡೆದ ಘಟನೆ ಮಾತ್ರ ಬಹಳ ಆಘಾತಕಾರಿಯಾಗಿತ್ತು.    ನನ್ನ ಹೆಂಡತಿಯ ಸಹದ್ಯೋಗಿಯ  ಮಗಳು ( ೨೧ ವರುಷ) ಆಗಸ್ಟ್ ಜೂಲೈ ತಿಂಗಳ ಕೊನೆಯಲ್ಲಿ … Continue reading ಅಪ್ಪಾ .. ಐ ಲವ್ ಯು… ನಾಳೆ ಮೀಟ್ ಮಾಡೋಣ…

ಹದಿನೆಂಟು ವರುಷಗಳ ಹಿಂದೆ ಕಲಿತ ಪಾಠ ….

ಅನೇಕ ವ್ಯಕ್ತಿಗಳು  ಜೀವನದಲ್ಲಿ  ಬಂದು ಹೋಗುತ್ತಾ ಇರುತ್ತಾರೆ, ಆದರೆ ಜೊತೆಯಲ್ಲಿ ಉಳಿಯುವವರು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲಿ ಕೆಲವು  ಸ್ನೇಹಿತರು ನಮ್ಮನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡು  ನಮ್ಮಿಂದ ದೂರ ಹೋಗಿದ್ದನ್ನು ನೋಡಿದ್ದೇನೆ. ಆದರೆ ಕೆಲವು ವ್ಯಕ್ತಿಗಳ ವ್ಯಕ್ತಿತ್ವ ಮಾತ್ರ ಮನಸ್ಸಿಗೆ ಬಹಳ ಇಷ್ಟವಾಗುತ್ತೆ.  ಅವರು  ತುಂಬ ಗಾಢ ಸ್ನೇಹಿತರೇನು ಆಗಿರುವುದಿಲ್ಲ, ಆದರೂ ಅವರ ಸ್ವಭಾವದಿಂದ ನಮಗೆ ತುಂಬ ಹತ್ತಿರವಾಗಿರುತ್ತಾರೆ.  ದುಡ್ಡಿಗಿಂತ ವಿಶ್ವಾಸಕ್ಕೆ ಬೆಲೆ ಜಾಸ್ತಿ ಕೊಡುವ ಅವರ ಬಗ್ಗೆ ಗೌರವ ಭಾವನೆ ಕೊನೆಯವರಿಗೂ ಉಳಿದುಬಿಡುತ್ತೆ. ಸುಮಾರು ಹದಿನೆಂಟು  ವರುಷಗಳ ಹಿಂದೆ ನಾನು ಒಂದು ಟೆಸ್ಟಿಂಗ್ … Continue reading ಹದಿನೆಂಟು ವರುಷಗಳ ಹಿಂದೆ ಕಲಿತ ಪಾಠ ….

ಚಿತ್ರಾನ್ನ … ಪರಮಾನ್ನ …!

ಬರೆಹ: ಭವಾನಿ ಶಂಕರ ಊರಿನಲ್ಲಿದ್ದಾಗ ಆಸ್ರಿಗೆ ಎಂಥಾ ಮಾಡ್ಲಾ ...! ಅಂತ ಅಮ್ಮ ಕೇಳುತ್ತಿದ್ದ ನೆನಪು. ಆಸ್ರಿ ಅಂದರೆ ಬೆಳಗಿನ ತಿಂಡಿ ಎಂದರ್ಥ.  ವಿಶೇಷವಾಗಿ ಹವ್ಯಕ ಭಾಷೆ ಮಾತನ್ನಾಡುವ ಸಿರ್ಸಿ, ಸಿದ್ದಾಪುರ, ಸಾಗರದ ಆಸುಪಾಸಿನಲ್ಲಿ ಈ ಮಾತು ಎಲ್ಲರ ಮನೆಯಲ್ಲಿ ಬೆಳಿಗ್ಗೆ ಕೇಳುವ ಅಭ್ಯಾಸ.  ಆಸ್ರಿ ಅಂದರೆ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಹಲವು ಬಗೆಯ ದೋಸೆಗಳು ಅಥವಾ ರೊಟ್ಟಿಗಳು , ಅವಲಕ್ಕಿ, ಉಪ್ಪಿಟ್ಟು, ಇಡ್ಲಿ, ಅದು ಹೋಟೆಲ್ನಲ್ಲಿ ಸಿಗುವ ತೆಳ್ಳನೆಯ ಬೆಳ್ಳನೆಯ ಇಡ್ಲಿ ಅಲ್ಲ, ಅದರ ಆಕಾರ, … Continue reading ಚಿತ್ರಾನ್ನ … ಪರಮಾನ್ನ …!

ಮನೆ ಕೆಲಸ ತಾನೇ!! ಏನು ಮಹಾ ಅಲ್ವಾ ?

ಕಥೆ : ಶ್ರೀನಾಥ್ ಹರದೂರ ಚಿದಂಬರ  ಬೆಳಿಗ್ಗೆ ೫:೩೦ಕ್ಕೆ ಅಲಾರಾಂ ಶಬ್ದ ಮಾಡಲು ಶುರು  ಮಾಡಿತು. ಅವಳು ಎಂದಿನಂತೆ ಎದ್ದು ಅಲಾರಾಂ ಆಫ್ ಮಾಡಿ  ದೇವರಿಗೆ ನಮಸ್ಕರಿಸಿ ಮಂಚದಿಂದ ಇಳಿದು ಬಚ್ಚಲು ಮನೆಗೆ   ಹೋದಳು.  ನಿತ್ಯ  ಕರ್ಮಗಳನ್ನು ಮುಗಿಸಿಕೊಂಡು ಅಡುಗೆ ಮನೆಗೆ ಹೋಗಿ ಬೆಳಗ್ಗಿನ ತಿಂಡಿ, ಹಾಗು ಮಕ್ಕಳಿಗೆ ಮತ್ತು ಗಂಡನಿಗೆ ಮದ್ಯಾಹ್ನದ  ಊಟಕ್ಕೆ ಅಡುಗೆ ಮಾಡಲು ಶುರು ಹಚ್ಚಿಕೊಂಡಳು. ಸಮಯ ಜಾರುತ್ತಿತ್ತು, ಆಗಾಗ ಗಡಿಯಾರದ ಕಡೆ ನೋಡುತ್ತಾ ತಿಂಡಿ ತಯಾರು ಮಾಡಿದಳು. ಆಮೇಲೆ ಕೋಣೆಗೆ ಹೋಗಿ  ಮಗನನ್ನು ಎಬ್ಬಿಸಿ ರೆಡಿ ಆಗಲು … Continue reading ಮನೆ ಕೆಲಸ ತಾನೇ!! ಏನು ಮಹಾ ಅಲ್ವಾ ?

ಅಬ್ಬಾ! ಎಷ್ಟೊಂದ್ ಹುಲೀ ? ಇಲ್ಲಿದೆ ನೋಡಿ ಅಸಲಿ ಲೆಖ್ಖ !!

ಬರೆಹ : ಗುರುರಾಜ್ ಎಸ್ ದಾವಣಗೆರೆ  ಛಾಯಾಚಿತ್ರಣ : ಗುರುರಾಜ್ ಎಸ್ ದಾವಣಗೆರೆ  ( 2018ರ ಹುಲಿ ಗಣತಿ ಸಮಯದಲ್ಲಿ ತೆಗೆದಿದ್ದು) ಪ್ರಿಯರೆ,ಕಳೆದ ತಿಂಗಳ 29 ರಂದು ವಿಶ್ವದ ಯಾವ ಯಾವ ದೇಶಗಳಲ್ಲಿ ಹುಲಿಗಳಿವೆಯೋ ಅಲ್ಲೆಲ್ಲ ' ಗ್ಲೋಬಲ್ ಟೈಗರ್ ಡೇ' ಆಚರಿಸಲ್ಪಟ್ಟಿತು. ಜಗತ್ತಿನ ವನ್ಯದಲ್ಲಿರುವ ಒಟ್ಟು ಹುಲಿಗಳ ಸಂಖ್ಯೆಯ ಶೇ 73 ರಷ್ಟನ್ನು ಹೊಂದಿರುವ ನಾವು 'ವಿಶ್ವ ಹುಲಿ ದಿನ'ವನ್ನು ಹೆಮ್ಮೆ, ಅಭಿಮಾನ ಮತ್ತು ಸಂಭ್ರಮದಿಂದಲೇ ಆಚರಿಸಿ ಕೃತಾರ್ಥರಾದೆವು. ಹಲವು ವೆಬಿನಾರ್ ಗಳು ನಡೆದವು. ಕೇಂದ್ರ ಸರಕಾರ … Continue reading ಅಬ್ಬಾ! ಎಷ್ಟೊಂದ್ ಹುಲೀ ? ಇಲ್ಲಿದೆ ನೋಡಿ ಅಸಲಿ ಲೆಖ್ಖ !!

ಕೊರೊನಾ … ಅಲ್ಲ ಇದೊಂದು ಕರಾಳ ದಂದೆ …

ಕೆಲವೊಮ್ಮೆ  ಶಾಪ ಕೂಡ ಕೆಲವರಿಗೆ ವರವಾಗಿ ಬದಲಾಗುವದು. ಅದು ಕೊರೊನಾ ಬಂದ ಮೇಲಂತೂ ,  ನಮ್ಮ ದೇಶದಲ್ಲಿರುವ ಭ್ರಷ್ಟ ಅಧಿಕಾರಿಗಳು ಹಾಗು ಭ್ರಷ್ಟ ರಾಜಕಾರಣಿಗಳ ಪಾಲಿಗೆ ಈ ಮಾತು ಅಕ್ಷರಶ ನಿಜವಾಗಿದೆ.  ನಿಮಗೆಲ್ಲ ತಿಳಿದಂತೆ ಮೇ ೧೨ ರ ತನಕ ನಮ್ಮ ದೇಶದಲ್ಲಿ ಕೊರೊನ ಸೋಂಕಿತರ ಸಂಖ್ಯೆ  ನಿಯಂತ್ರಣದಲ್ಲಿತ್ತು.  ಯಾವಾಗ ಪ್ರಧಾನ ಮಂತ್ರಿಗಳು ೨೦ ಲಕ್ಷ ಕೋಟಿ ಮೊತ್ತದ ಪರಿಹಾರ ಕಂತುಗಳನ್ನು ಘೋಷಿಸಿದರೋ ಅಲ್ಲಿಂದ ಶುರುವಾಯ್ತು ನೋಡಿ ಕೊರೊನಾ ಸಂಖ್ಯೆಯ ಜಿಗಿತ. ಇದ್ದಕ್ಕಿದ್ದಂತೆ ಕೊರೊನಾ ಇಲ್ಲದ ರಾಜ್ಯಗಳಲ್ಲೂ ಸಹ ಸಂಖ್ಯೆ ಏರತೊಡಗಿತು.  ನಮ್ಮ ರಾಜ್ಯದಲ್ಲಿ ಇರಲೇ ಇಲ್ಲ, ಬೇರೆ ರಾಜ್ಯದಿಂದ  ಬಂದವರಿಂದ ಕೊರೊನಾ … Continue reading ಕೊರೊನಾ … ಅಲ್ಲ ಇದೊಂದು ಕರಾಳ ದಂದೆ …

ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಸಿಕ್ಕಿದೆ   ಸ್ವಾತಂತ್ರ್ಯ   ನಮ್ಮದೇ   ರಾಷ್ಟ್ರಗೀತೆ ಹೇಳಲು  ನಮ್ಮದೇ ಧರ್ಮ ಪಾಲಿಸಲು ನಮ್ಮದೇ  ಭಾಷೆ   ಮಾತನಾಡಲು ನಮ್ಮದೇ   ನೆಲದ ಮೇಲೆ  ಬದುಕಲು  ಹುಟ್ಟಬೇಕಾಗಿದೆ  ಅಭಿಮಾನ ನಾವು  ಹಾಡುವ ರಾಷ್ಟ್ರ ಗೀತೆ ಮೇಲೆ  ನಾವು  ಪಾಲಿಸುವ ಧರ್ಮದ ಮೇಲೆ  ನಾವು  ಮಾತನಾಡುವ  ಮಾತೃ ಭಾಷೆ ಮೇಲೆ  ನಾವು  ಬದುಕುವ ನೆಲದ ಮೇಲೆ  - ಶ್ರೀನಾಥ್  ಹರದೂರ ಚಿದಂಬರ 

ಅರಿವು ..

ಬರಹಗಾರರು  : ಶ್ರೀನಾಥ್ ಹರದೂರ ಚಿದಂಬರ  ಪುಟ್ಟ ಹಸುಗೂಸು ಮನೆಯ ವರಾಂಡದಲ್ಲಿ ಆಡುತಿತ್ತು. ತಾಯಿ ಆಗಷ್ಟೇ  ಹಾಲು ಕುಡಿಸಿ  ಮಗುವನ್ನು ಆಡಲು ಬಿಟ್ಟು,  ಅದು ಆಡುವುದನ್ನು ನೋಡುತ್ತಾ ಕುಳಿತಳು. ಮಗು ಆಗಾಗ ತಾಯಿಯ ಕಡೆ ನೋಡುತ್ತಾ  ಅವಳು ಇದ್ದಾಳೋ ಇಲ್ಲವೊ ಅಂತ ಖಚಿತಪಡಿಸಿಕೊಂಡು ತನ್ನ ಪಾಡಿಗೆ ತಾನು ಆಡುತಿತ್ತು. ಅಷ್ಟರಲ್ಲಿ ಅವಳ ಗಂಡ ಮನೆಯೊಳಗೇ ಬಂದ. ಮೈಮೇಲೆ ಜ್ಞಾನವಿಲ್ಲದಷ್ಟು  ಕುಡಿದು ಬಂದಿದ್ದ. ಊಟ ಬಡಿಸು ಹಸಿವಾಗಿದೆ ಅಂದ. ಅವಳು ಗಡಬಡಿಸಿ ಹೆದರಿ ಊಟ ತರಲು ಅಡುಗೆ ಮನೆಗೆ ಓಡಿದಳು. ಊಟ ತಟ್ಟೆಗೆ … Continue reading ಅರಿವು ..